Kornersite

Bengaluru Crime Just In Karnataka State

Police: ಪೀಪಲ್ಸ್‌ ಮ್ಯಾನ್‌ ಎಂಬ ಹೆಸರು ಗಳಿಸಿದ್ದ ಇನ್ಸ್‌ಪೆಕ್ಟರ್‌ ಇನ್ನಿಲ್ಲ!

ಬೆಂಗಳೂರು: ಸಿಲಿಕಾನ್ ಸಿಟಿಯ ಜಯನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಮಂಜುನಾಥ್ ಅವರು ಲಿವರ್‌ ಕ್ಯಾನ್ಸರ್‌ ನಿಂದ ಬಳಲುತ್ತಿದ್ದರು. ಪತ್ನಿ ಹಾಗೂ ಓರ್ವ ಪುತ್ರನನ್ನು ಅವರು ಅಗಲಿದ್ದಾರೆ. ಲಿವರ್‌ ಕ್ಯಾನ್ಸರ್‌ ಕೊನೆ ಹಂತದಲ್ಲಿದ್ದಾಗ ಅದು ಮಂಜುನಾಥ್ ಗಮನಕ್ಕೆ ಬಂದಿದೆ. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಆದರೆ, ಭಾನುವಾರ ಮಧ್ಯಾಹ್ನ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಹಾಸನಕ್ಕೆ ಇನ್ಸ್ಪೆಕ್ಟರ್ ಮಂಜುನಾಥ್ ಮೃತದೇಹ ಕೊಂಡೊಯ್ಯಲಾಗಿದ್ದು, ಅವರ ಹುಟ್ಟೂರಾದ ಹುಟ್ಟೂರಾದ ಹಾಸನ ಜಿಲ್ಲೆಯ ಉದ್ದೂರಿನಲ್ಲಿ ಇಂದು […]

Bengaluru Just In Karnataka State

ಜೂಲೈ 1ರಿಂದ ವಿದ್ಯೂತ್ ದರ ಏರಿಕೆಯಾಗಲಿದೆ…!

Bangalore: ಎರಡು ತಿಂಗಳಿಂದ ಜನರಿಗೆ ಬಿಸಿ ಮುಟ್ಟಿಸಿದ ಕರ್ನಾಟಕ ವಿದ್ಯುಚ್ಶಕ್ತಿ ನಿಯಂತ್ರಣ ಆಯೋಗವು ಇದೀಗ ಮತ್ತೊಮ್ಮೆ ಶಾಕ್ ನೀಡಿದೆ. ಇಂಧನ ಮತ್ತು ವಿದ್ಯೂತ್ ಖರೀದಿ ವೆಚ್ಚ ಹೊಂದಾಣಿಕೆ ಶುಲ್ಕ ಹೆಸರಿನಲ್ಲಿ ಪ್ರತಿ ಯುನಿಟ್ ಗೆ ವಿವಿಧ ಎಸ್ಕಾಂಗಳ ಗ್ರಾಹಕರಿಗೆ ಯುನಿಟ್ ಗೆ 41 ಪೈಸೆಯಿಂದ 50 ಪ್ರೈಸೆವರೆಗೆ ಶುಲ್ಕ ಹೆಚ್ಚಳ ಮಾಡಿ ಆದೇಶ ಮಾಡಿದೆ. ಜೂಲೈ ಒಂದರಿಂದ ಪರಿಷ್ಕೃತ ಶುಲ್ಕ ಜಾರಿಯಾಗಲಿದ್ದು, ಗೃಹ ಜ್ಯೋತಿ ಫಲಾನುಭವಿ ಗ್ರಾಹಕರು ಈ ಹೊರೆಯಿಂದ ಪಾರಾಗಲಿದ್ದಾರೆ ಎಂದು ಕೆಇಆರ್ ಸಿ ಮೂಲಗಳು […]

Bengaluru Crime Just In Karnataka State

ಅಬ್ಬಾ..! ಒಂದೇ ದಿನ 25 ಸಾವಿರ ಕೇಸ್ ದಾಖಲಿಸಿದ ಪೊಲೀಸರು!

ಟ್ರಾಫಿಕ್ ಜಂಕ್ಷನ್ಗಳಲ್ಲಿ ಪೊಲೀಸ್ ಸಿಬ್ಬಂದಿಯಿಲ್ಲ ಎಂದು ನಿಯಮ ಉಲ್ಲಂಘಿಸಿದರೂ ದಂಡ ಬೀಳುವುದು ಗ್ಯಾರಂಟಿ ಎಂಬುವುದು ಎಲ್ಲರಿಗೂ ಗೊತ್ತಿದ್ದರೂ ತಪ್ಪು ಮಾಡುತ್ತಿರುತ್ತಾರೆ. ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಸದ್ಯ ಈ ಹೊಸ ಕಾರ್ಯಾಚರಣೆ ನಡೆಯುತ್ತಿದೆ. ಪ್ರತಿ ದಿನ 50 ಜಂಕ್ಷನ್ಗಳಲ್ಲಿ ಬರೋಬ್ಬರಿ 25 ಸಾವಿರ ಕೇಸ್ ದಾಖಲಾಗುತ್ತಿವೆ. ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್ ಸಮೇತ ಪೋಟೋ ಕ್ಲಿಕ್ ಮಾಡಿ, ಸಂದೇಶ ರವಾನೆಯಾಗಲಿದೆ. ಬೆಂಗಳೂರು ನಗರದ ಪ್ರಮುಖ ಜಂಕ್ಷನ್ ಗಳಲ್ಲಿ ಮಾತ್ರ 230 ಕ್ಯಾಮೆರಾ ಬಳಕೆಯಲ್ಲಿವೆ. ಸಿಲಿಕಾನ್ […]

Bengaluru Just In Karnataka State

ಬೆಂಗಳೂರು ಟ್ರಾಫಿಕ್ ಜಾಮ್; ಬಸ್ಸಿನಲ್ಲಿಯೇ ಕುಳಿತು ಊಟ ಮಾಡಿದ ಚಾಲಕ!

ಬೆಂಗಳೂರು: ಟ್ರಾಫಿಕ್ ಜಾಮ್ ನಲ್ಲಿಯೇ ಬಿಎಂಟಿಸಿ ಬಸ್ ಚಾಲಕರೊಬ್ಬರು ಚಾಲಕರ ಆಸನದಲ್ಲಿಯೇ ಊಟ ಮುಗಿಸಿದ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ. ಬೆಂಗಳೂರಿನ ಟ್ರಾಫಿಕ್ ಕುಖ್ಯಾತಿ ಎಷ್ಟಿದೆ ಎಂದರೆ ಈಗಾಗಲೇ ಬೆಂಗಳೂರು ಟ್ರಾಫಿಕ್ ಜಾಮ್ ಕುರಿತು ಸಾಕಷ್ಟು ಜೋಕ್ ಗಳು, ಶಾರ್ಟ್ ಸ್ಟೋರಿ ವಿಡಿಯೋಗಳು ಹರಿದಾಡುತ್ತಿವೆ. ಹುಡುಗನೋರ್ವ ಬೆಂಗಳೂರು ಟ್ರಾಫಿಕ್ ನಲ್ಲಿ ಯುವತಿಯೊಬ್ಬಳನ್ನು ನೋಡಿ ಆಕೆಯನ್ನು ಅಲ್ಲೇ ಪ್ರೀತಿ, ಮದುವೆಯಾಗಿ ಮಕ್ಕಳಾದರೂ ಟ್ರಾಫಿಕ್ ಮಾತ್ರ ಕ್ಲಿಯರ್ ಆಗಿರಲಿಲ್ಲ ಎಂಬ ಜೋಕ್ ಗಳು ಈಗಾಗಲೇ ಸಾಕಷ್ಟು ಖ್ಯಾತಿ ಪಡೆದಿವೆ. […]

Bengaluru Crime Just In Karnataka State

ಮದುವೆ ಮಾಡಿಕೊಳ್ಳಲು ನಿರಾಕರಿಸಿದ್ದಕ್ಕೆ ಬಿಸಿ ನೀರು ಎರಚಿದ ಮಹಿಳೆ!

ಪ್ರೀತಿಸಿ ಮದುವೆಯಾಗಲು(Marriage) ನಿರಾಕರಿಸಿದ್ದಕ್ಕೆ ಯುವತಿ ತನ್ನ ಪ್ರಿಯತಮನ (Lover) ಮೇಲೆ ಬಿಸಿ ನೀರು ಎರಚಿರುವ ಘಟನೆ ಬೆಂಗಳೂರಿನ(Bengaluru) ಚಾಮರಾಜಪೇಟೆಯಲ್ಲಿ ಬೆಳಕಿಗೆ ಬಂದಿದೆ. ಮೂಲತಃ ಕಲಬುರಗಿ ಜಿಲ್ಲೆಯ ವಿಜಯಶಂಕರ ಆರ್ಯ ಹಾಗೂ ಅಫ್ಜಲ್ಪುರದ ದೇಸಾಯಿ ಕಲ್ಲೂರಿನ ಜ್ಯೋತಿ ದೊಡ್ಡಮನಿ ಮಧ್ಯೆ ಪರಿಚಯವಾಗಿ ಪ್ರೀತಿಸಿದ್ದಾರೆ. ಸದ್ಯ ವಿಜಯ್ ಜ್ಯೀತಿಯನ್ನು ಮದುವೆಯಾಗಲು ನಿರಾಕರಿಸಿದ್ದಾನೆ. ಇದರಿಂದ ಕುಪಿತಗೊಂಡ ಜ್ಯೋತಿ ನಿನ್ನ ಹತ್ತಿರ ಮಾತನಾಡಬೇಕು ಬಾ ಎಂದು ರೂಮಿಗೆ ಕರೆಯಿಸಿಕೊಂಡು ಬಿಸಿ ನೀರು ಎರಚಿದ್ದಾಳೆ. ಇದರಿಂದ ಪ್ರಿಯಕರ ವಿಜಯಶಂಕರಗೆ ಗಂಭಿರ ಗಾಯಗೊಂಡಿದ್ದಾನೆ ಎನ್ನಲಾಗಿದೆ. ಯುವಕ […]

Bengaluru Crime Just In Karnataka State

ಬೆಂಗಳೂರು ಪೊಲೀಸ್ ಕಮಿಷನರ್ ಆಗಿ ಎಡಿಜಿಪಿ ಬಿ.ದಯಾನಂದ್ ನೇಮಕ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ಬಿ.ದಯಾನಂದ್ ಅವರನ್ನ ನೇಮಕ ಮಾಡಲಾಗಿದೆ. ಈವರೆಗೆ ಬೆಂಗಳೂರು ಕಮಿಷನರ್ ಆಗಿದ್ದ ಸಿಎಚ್ ಪ್ರತಾಪ್ ರೆಡ್ಡಿ ಅವರನ್ನು ಆಂತರಿಕ ಭದ್ರತಾ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ. ಟ್ರಾಫಿಕ್ ವಿಶೇಷ ಆಯುಕ್ತ ಹಾಗೂ ಎಡಿಜಿಪಿ ಎಂ ಸಲೀಂ ಅವರನ್ನು ಗುಪ್ತಚರ ವಿಭಾಗದ ಎಡಿಜಿಪಿಯಾಗಿ ವರ್ಗಾವಣೆ ಮಾಡಲಾಗಿದೆ.

Bengaluru Just In Karnataka State

ರಾಜ್ಯಕ್ಕೆ ಮುಂಗಾರು ಯಾವಾಗ ಎಂಟ್ರಿ ಕೊಡಲಿದೆ? ಈ ಬಾರಿ ಹೇಗಿದೆ ಮುಂಗಾರು?

ಬೆಂಗಳೂರು : ರಾಜ್ಯದಲ್ಲಿ (Karnataka)ಜೂನ್ ಮೊದಲ ವಾರದಲ್ಲಿ ಮುಂಗಾರು(Monsoon) ಪ್ರವೇಶ ಮಾಡಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂಗಾರು ಮಳೆ ಪ್ರವೇಶ ಮಾಡುವುದಕ್ಕೂ ಮುನ್ನ ಮೇ ತಿಂಗಳ ಅಂತ್ಯಕ್ಕೆ ರಾಜ್ಯದಲ್ಲಿ ಮಳೆರಾಯನ ಅಬ್ಬರ (Rain) ಜೋರಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ಮೇ 31 ರಿಂದ ಜೂನ್ 2ರ ವರೆಗೆ ದಕ್ಷಿಣ ಒಳನಾಡಿನ 10 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯಲ್ಲೋ ಅಲರ್ಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ ಅಂತ್ಯಕ್ಕೆ ಮಳೆಯ ತೀವ್ರತೆ […]

Bengaluru Just In Karnataka State

Rani Update: ರಾಜ್ಯದ ಈ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ; ನಿಮ್ಮ ಜಿಲ್ಲೆ ಇದೆಯಾ ನೋಡಿ?

ಬೆಂಗಳೂರು: ರಾಜ್ಯದಲ್ಲಿ ಜೂನ್ 2ರ ವರೆಗೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಇರುವ ಹಿನ್ನೆಲೆಯಲ್ಲಿ 9 ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು ನಗರ, ಬೆಂ. ಗ್ರಾಮಾಂತರ, ಕೊಡಗು, ಚಾಮರಾಜನಗರ, ತುಮಕೂರು, ಮಂಡ್ಯ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ರಾಮನಗರ ಜಿಲ್ಲೆಗಳಲ್ಲಿ ಜೂನ್ 2ರವರೆಗೆ ವ್ಯಾಪಕ ಮಳೆಯಾಗುವ ಸಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಕೊಪ್ಪಳ, ರಾಯಚೂರು, ವಿಜಯಪುರ, ಮೈಸೂರು, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಇದೆ. ದಕ್ಷಿಣ […]

Bengaluru Crime Just In Karnataka State

ಒಂಟಿ ಮಹಿಳೆ ಉಸಿರು ಗಟ್ಟಿಸಿ ಚಿನ್ನಾಭರಣ ದೋಚಿ ಪರಾರಿ!

ಒಂಟಿಯಾಗಿ ವಾಸಿಸುತ್ತಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ, ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆಯೊಂದು ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ನಲ್ಲಿ ಬೆಳಕಿಗೆ ಬಂದಿದೆ. ಕಮಲಾ (82) ಕೊಲೆಯಾದ ದುರ್ದೈವಿ. ಶನಿವಾರ ಈ ಘಟನೆ ನಡೆದಿದ್ದು, ಕೊಲೆಯಾದ ಮಹಿಳೆಯ ಪತಿ ಕಳೆದ 6 ತಿಂಗಳ ಹಿಂದೆ ಸಾವನ್ನಪ್ಪಿದ್ದರು. ಇದ್ದ ಮೂವರು ಮಕ್ಕಳು ತಾಯಿಯನ್ನು ಬಿಟ್ಟು ಬೇರೆಡೆ ವಾಸಿಸುತ್ತಿದ್ದರು. ಹೀಗಾಗಿ ಮನೆಯಲ್ಲಿ ಕಮಲಾ ಒಂಟಿಯಾಗಿದ್ದರು. ಸಂಜೆ 7 ಗಂಟೆ ಸುಮಾರಿಗೆ ನೆರೆ ಮನೆಯವರು ಕಮಲಾ ಅವರನ್ನು ಮಾತನಾಡಿಸಲು ಮನೆ […]

Bengaluru Just In Karnataka State

Rain Update: ಮೇ 30ರ ವರೆಗೂ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟ!

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೆ ಮಳೆರಾಯ ಆರ್ಭಟಿಸುತ್ತಿದ್ದಾನೆ. ದಕ್ಷಿಣ ಒಳನಾಡು ಹಾಗೂ ಕರಾವಳಿ ಭಾಗಗಳಲ್ಲಿ ಮೇ 30ರವರೆಗೆ ಭರ್ಜರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಮಳೆಯಾಗಲಿದೆ. ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ […]