Kornersite

International Just In National Uttar Pradesh

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆ; ಮದುವೆಯಾದರೂ ಯಾಮಾರಿಸಿದ್ದ ವ್ಯಕ್ತಿ!

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದ ವ್ಯಕ್ತಿ ಭೇಟಿಯಾಗಲು ಬಾಂಗ್ಲಾದೇಶದ 32 ವರ್ಷದ ಮೂರು ಮಕ್ಕಳ ತಾಯಿಯು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಗೆ ಬಂದು, ಆತನಿಗೂ ಮದುವೆಯಾಗಿದ್ದು ತಿಳಿಯುತ್ತಿದ್ದಂತೆ ಮರಳಿ ಹೋಗಿದ್ದಾರೆ. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ವಿಧವೆ ದಿಲ್ರುಬಾ ಶರ್ಮಿ ಮೂವರು ಮಕ್ಕಳೊಂದಿಗೆ ಸೆ. 26ರಂದು ಭಾರತಕ್ಕೆ ಆಗಮಿಸಿದ್ದು, 27 ವರ್ಷದ ಅಬ್ದುಲ್ ಕರೀಂ ಅವರನ್ನು ಭೇಟಿಯಾಗಲು ಬಂದಿದ್ದಳು. ಬಹ್ರೇನ್‌ ನಲ್ಲಿ ಬಾಣಸಿಗನಾಗಿ ಕೆಲಸ ಮಾಡುತ್ತಿದ್ದ ಕರೀಂ ಸಾಮಾಜಿಕ ಜಾಲತಾಣದ ಮೂಲಕ ಮಹಿಳೆಯ ಸಂಪರ್ಕಕ್ಕೆ ಬಂದಿದ್ದ ಎನ್ನಲಾಗಿದೆ. […]