Kornersite

Bengaluru Just In Karnataka Politics State

Basavaraj Bommai: ಶಿಗ್ಗಾಂವಿಯಲ್ಲಿ ಭರ್ಜರಿ ಜಯ ಸಾಧಿಸಿದ ಸಿಎಂ ಬೊಮ್ಮಾಯಿ!

ಸಿಎಂ ಬಸವರಾಜ ಬೊಮ್ಮಾಯಿ ಅವರು ನಿರೀಕ್ಷೆಯಂತೆ ಶಿಗ್ಗಾಂವಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಹೊರಬಿದ್ದಿದ್ದು, ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದಿಂದ ( Shiggaon Assembly Constituency) ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿ ಸಿಎಂ ಸ್ಪರ್ಧೆ ಮಾಡಿದ್ದರು. ಈ ಮೂಲಕ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಹಿಂದೆ ನಡೆದಿದ್ದ ಚುನಾವಣೆಯಲ್ಲಿ 83,868 ಮತಗಳನ್ನ ಪಡೆದು ಗೆಲುವನ್ನ ಸಾಧಿಸಿ, ರಾಜ್ಯದ ಮುಖ್ಯಮಂತ್ರಿ ಗದ್ದುಗೆ ಏರಿದ್ದರು. ಕಾಂಗ್ರೆಸ್ನಿಂದ ಯಾಸೀರ್ ಅಹ್ಮದ್ ಖಾನ್ ಪಠಾಣ್ ಸ್ಪರ್ಧಿಸಿದ್ದರು. […]

Bengaluru Just In Karnataka Politics State

CM Bommai: ಟೆಂಪಲ್ ರನ್ ನಡೆಸಿದ ಸಿಎಂ ಬೊಮ್ಮಾಯಿ!

Hubballi : ಇಂದು ರಾಜ್ಯ ವಿಧಾನಸಭೆ ಚುನಾವಣೆಯ ಹಣೆಬರಹ ಹೊರಗೆ ಬರುತ್ತಿದ್ದು, ಬಿಜೆಪಿ ಮತ್ತೊಮ್ಮೆ ಅಧಿಕಾರದ ಕನಸು ಕಾಣುತ್ತಿದ್ದರೆ, ಕಾಂಗ್ರೆಸ್ ಅಧಿಕಾರದ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಹುಬ್ಬಳ್ಳಿಯಿಂದ (Hubballi) ಶಿಗ್ಗಾವಿಗೆ (Shiggavi) ತೆರಳುವ ಸಂದರ್ಭದಲ್ಲಿ ಆದರ್ಶ ನಗರದಲ್ಲಿನ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜೆಡಿಎಸ್‌ (JDS) ಸೇರಿದಂತೆ ಯಾರೂ ಸಂಪರ್ಕದಲ್ಲಿ ಇಲ್ಲ. ಕರ್ನಾಟಕ ವಿಧಾನ ಸಭೆಯ ಫಲಿತಾಂಶದ ದಿನ ಈ ಫಲಿತಾಂಶ […]

Bengaluru Just In Karnataka Politics State

Karnataka Assembly Election: ಜಗದೀಶ ಶೆಟ್ಟರ್ ಸೋಲಿಸಲು ಪಣ; ಟಾಸ್ಕ್ ಕೊಟ್ಟ ಅಮಿತ್ ಶಾ!

Bangalore : ಬಿಜೆಪಿ ಪಕ್ಷದಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಸೇರಿದ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Lakshman Savadi) ಅವರನ್ನು ಸೋಲಿಸಲು ಬಿಜೆಪಿಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಈ ಇಬ್ಬರು ನಾಯಕರನ್ನು ಸೋಲಿಸಲು ಲಿಂಗಾಯತ ವೋಟ್ ಬ್ಯಾಂಕ್ (Lingayat Vote Bank) ಉಳಿಸಿಕೊಳ್ಳಲು ಬಿಜೆಪಿ ನಾಯಕರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಅವಿಭಜಿತ ಧಾರವಾಡ ಜಿಲ್ಲೆಯ 175 ನಾಯಕರ ಜೊತೆ ಅಮಿತ್ ಶಾ (Amit Shah) ಚರ್ಚೆ ನಡೆಸಿದ್ದಾರೆ. ಬಿಎಸ್‌ ಯಡಿಯೂರಪ್ಪ […]

Bengaluru Just In Karnataka State

Karnataka Assembly Election: ಶೆಟ್ಟರ್ ರಾಜೀನಾಮೆಯಿಂದ ವೈಯಕ್ತಿಕವಾಗಿ ನೋವಾಗಿದೆ- ಸಿಎಂ

Hubli : ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಅವರ ರಾಜೀನಾಮೆಯಿಂದ ನನಗೆ ವೈಯಕ್ತಿಕವಾಗಿ ನೋವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ತಿಳಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ ಶೆಟ್ಟರ್ ಅವರು ಈ ಭಾಗದ ಪ್ರಮುಖ ನಾಯಕರು ಹಾಗೂ ಹಿರಿಯರು. ಆದರೆ ಪಕ್ಷ ಹಲವಾರು ಸಂದರ್ಭದಲ್ಲಿ ಅನೇಕ ನಿರ್ಣಯ ತೆಗೆದುಕೊಂಡಿದೆ. ಸ್ಥಾಪಿತ ರಾಜಕಾರಣದಲ್ಲಿ ಬದಲಾವಣೆ ತರುವ ಪ್ರಯತ್ನ ಮಾಡುತ್ತಿದೆ. ಮೋದಿ ನೇತೃತ್ವದಲ್ಲಿ ಬದಲಾವಣೆ ತರುವ ಪ್ರಯತ್ನ ನಡೆದಿದ್ದು, ಯಡಿಯೂರಪ್ಪ ನಮಗೆ ಆದರ್ಶರು. […]

Bengaluru Just In Karnataka State

Breaking News: ಬೊಮ್ಮಾಯಿ ವಿರುದ್ಧ ಸ್ಪರ್ಧೆ ಮಾಡುವವರು ಯಾರು?

ಹಾವೇರಿ : ಇಂದು ಕಾಂಗ್ರೆಸ್‌ (Congress) ತನ್ನ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ವಿರುದ್ಧ ಸ್ಪರ್ಧಿಸಲಿರುವ ಕಾಂಗ್ರೆಸ್‌ ಅಭ್ಯರ್ಥಿ ಯಾರು ಎನ್ನುವುದು ಇನ್ನೂ ನಿಗೂಢವಾಗಿದೆ. ಆರಂಭದಲ್ಲಿ ಶಿಗ್ಗಾವಿಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಕಣಕ್ಕೆ ಇಳಿಸಲಾಗುತ್ತದೆ ಎಂಬ ಮಾತುಗಳು ಜೋರಾಗಿ ಕೇಳಿ ಬಂದಿದ್ದವು. ಆದರೆ ವಿನಯ್‌ ಕುಲಕರ್ಣಿ ಅವರಿಗೆ ಧಾರವಾಡ ಗ್ರಾಮೀಣ ಕ್ಷೇತ್ರ ಟಿಕೆಟ್‌ ನೀಡಲಾಗಿದೆ. ಶಿಗ್ಗಾವಿಯಲ್ಲಿ ಕಾಂಗ್ರೆಸ್‌ ನಾಯಕರ ಮಧ್ಯೆ ಅಸಮಾಧಾನವಿದ್ದು, ಈ ಅಸಮಾಧಾನವನ್ನು ಶಮನ […]

Bengaluru Crime Just In Karnataka State

Breaking News: ಸಿಎಂ ಬಸವರಾಜ ಬೊಮ್ಮಾಯಿ ಇಳಿದ ಹೆಲಿಪ್ಯಾಡ್ ನಲ್ಲಿ ಬೆಂಕಿ!

Udupi : ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಇದ್ದ ಹೆಲಿಪ್ಯಾಡ್‍ನಲ್ಲಿ (Helipad) ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ (BJP) ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಅರೆಶಿರೂರು ಹೆಲಿಪ್ಯಾಡ್ ಮೂಲಕ ಕೊಲ್ಲೂರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಇಳಿಯುವ ಸಂದರ್ಭದಲ್ಲಿ ಹೆಲಿಪ್ಯಾಡ್ ನ ಹತ್ತಿರ ಬೆಂಕಿ ಕಾಣಿಸಿಕೊಂಡಿದೆ. ಸಿಎಂ ಎಸ್ಕಾರ್ಟ್ ಹೋದ ನಂತರ ಬೆಂಕಿ ಕಾಣಿಸಿಕೊಂಡಿದೆ. ಸ್ಥಳದಲ್ಲಿದ್ದ ಅಗ್ನಿಶಾಮಕ ದಳದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಯಾವುದೇ […]

Bengaluru Just In Karnataka National State

Breaking News: BJP ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ-189 ಮಂದಿಗೆ ಟಿಕೆಟ್-52 ಹೊಸ ಮುಖ!

New Delhi : ರಾಜ್ಯ ವಿಧಾನಸಭೆ ಚುನಾವಣೆಯ ಕಣ ರಂಗೇರಿದ್ದು, ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಎರಡು ಪಟ್ಟಿ ಬಿಡುಗಡೆ ಮಾಡಿತ್ತು. ಇಂದು ಬಿಜೆಪಿ ತನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿಯೇ ಬರೋಬ್ಬರಿ 189 ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಿದೆ. 35 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿದ್ದು, ಅವುಗಳಿಗೆ ಇನ್ನೂ ಅಭ್ಯರ್ಥಿಗಳ ಹೆಸರನ್ನು ಬಿಡುಗಡೆ ಮಾಡಿಲ್ಲ.ಈ ಬಾರಿ ಬರೋಬ್ಬರಿ 52 ಜನ ಹೊಸಬರಿಗೆ ಬಿಜೆಪಿ ಅವಕಾಶ ನೀಡಿದೆ. 8 ಜನ ಮಹಿಳೆಯರು ಹಾಗೂ ಐವರು ವಕೀಲರಿಗೆ […]

Bengaluru Entertainment Gossip Just In Mix Masala Sandalwood

Sandalwood: ಕಿಚ್ಚನಿಗೆ ಪ್ರಕಾಶ್ ರೈ ರಿಂದ ‘ಪರ್ಸೆಂಟೆಜ್ ಮಾಮ’ ಸವಾಲು

ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ (Sudeep) ಬಿಜೆಪಿಗೆ(BJP)ಗೆ ಬೆಂಬಲಿಸುತ್ತಿದ್ದಂತೆ ಅವರ ಮೇಲೆ ನಟ ಪ್ರಕಾಶ ರೈ(Prakash Rai) ಮುಗಿ ಬಿದ್ದಂತೆ ಮಾಡುತ್ತಿದ್ದಾರೆ. ಇತ್ತ ಕಿಚ್ಚ ರಾಜಕೀಯ (Politics) ಅಂಗಳದಲ್ಲಿ ಕಾಲಿಡುತ್ತಿದ್ದಂತೆಯೇ ಟ್ವೀಟ್ ಗಳ ಸರಣಿಯನ್ನೇ ಪ್ರಕಾರ್ ನಡೆಸಿದ್ದಾರೆ. ಪ್ರತಿಭಾವಂತ ನಟ ಸುದೀಪ್, ಬಿಜೆಪಿ ಬೆಂಬಲಿಸುವುದಿಲ್ಲ ಎನ್ನುವ ಸಂದೇಶದಿಂದ ಹಿಡಿದು ಇಲ್ಲಿಯವರೆಗೂ ಸಾಕಷ್ಟು ಟ್ವೀಟ್ ಮಾಡಿದ್ದಾರೆ. ಆದರೆ, ಪ್ರಕಾಶ್ ರಾಜ್ ವಿಚಾರವಾಗಿ ಸುದೀಪ್ ಮೌನವಹಿಸಿದ್ದು, ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೂ ಪ್ರಕಾಶ ರೈ ಮಾತ್ರ ತಮ್ಮ ಮಾತಿನ ದಾಟಿ […]