ರಸ್ತೆ ಮಧ್ಯೆ ಸ್ಕೂಟರ್ ನಲ್ಲಿ ಹೋಗುತ್ತ ಸ್ನಾನ ಮಾಡಿದ ಜೋಡಿ; ವಿಡಿಯೋ ವೈರಲ್!
ಸಾಮಾಜಿಕ ಜಾಲತಾಣದಲ್ಲಿ ಲೈಕ್, ಶೇರ್ ಗಾಗಿ ಇತ್ತೀಚೆಗೆ ಯುವ ಸಮೂಹ ಏನೇನೊ ಮಾಡುತ್ತಿದೆ. ಈ ಮಧ್ಯೆ ಇಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಮಹಾರಾಷ್ಟ್ರದ ರಸ್ತೆಯಲ್ಲಿ ಸ್ಕೂಟರ್ ಮೇಲೆ ಚಲಿಸುತ್ತ ಜೋಡಿಯೊಂದು ಸ್ನಾನ ಮಾಡಿದೆ. ದಾರಿಹೋಕರು ಈ ವಿಡಿಯೋ ಮಾಡಿ ಪೊಲೀಸರಿಗೆ ಟ್ಯಾಗ್ ಮಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಥಾಣೆಯ ಪೊಲೀಸರು ಕ್ರಮ ಕೈಗೊಳ್ಳುವುದಾಗಿ ಪ್ರತಿಕ್ರಿಯಿಸಿದ್ದಾರೆ. ಉಲ್ಲಾಸನಗರದ ಜನನಿಬಿಡ ರಸ್ತೆಯಲ್ಲಿ ಈ ಯುವಜೋಡಿ ಹೀಗೆ ಮಾಡಿದ್ದು ನೆಟ್ಟಿಗರ ಕಂಗೆಣ್ಣಿಗೆ ಗುರಿಯಾಗಿದೆ. ಸ್ಕೂಟರ್ ಹಿಂದೆ ಬಕೆಟ್, ಮಗ್ ಹಿಡಿದುಕೊಂಡು […]