Kornersite

International Just In

ಹುಟ್ಟಿದ ಮೂರೇ ದಿನದಲ್ಲಿ ಅಚ್ಚರಿ ಮೂಡಿಸಿದ ನವಜಾತ ಶಿಶು!

ನವಜಾತ ಶಿಶು ಹುಟ್ಟಿದ ಎರಡ್ಮೂರು ತಿಂಗಳ ನಂತರ ತಲೆ ಎತ್ತಲು ಕಲಿಯುತ್ತವೆ ಎನ್ನುತ್ತಾರೆ. ಆದರೆ, ಇಲ್ಲೊಂದು ನವಜಾತ ಶಿಶು (Newborn Baby) ಹುಟ್ಟಿದ ಮೂರೇ ದಿನದ ನಂತರ ತೆವಳುತ್ತ, ತಲೆ ಎತ್ತಿ ಎಲ್ಲರಿಗೂ ಆಶ್ಚರ್ಯ ಮೂಡಿಸಿದೆ. ಹೊಸ ತಾಯಿಯಾದ ಸಮಂತಾ ಎಲಿಜಬೆತ್ ತನ್ನ ಮಗು ಜನಿಸಿದ ಮೂರು ದಿನಗಳ ನಂತರ ತೆವಳಲು ಮತ್ತು ತಲೆ ಎತ್ತಲು ಪ್ರಾರಂಭಿಸಿದ ಆಶ್ಚರ್ಯಕರ ಕ್ಷಣವನ್ನು ಸೆರೆಹಿಡಿದು ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಹಲವು ನವಜಾತ ಶಿಶುಗಳು ತಮ್ಮ ಕಣ್ಣುಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಆದರೆ, […]

Just In National

ಅಂಬಾನಿ ಕುಟುಂಬಕ್ಕೆ ಮತ್ತೊಂದು ಹೆಣ್ಣು ಮಗುವಿನ ಆಗಮನ!

ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಹಿರಿಯ ಪುತ್ರ ಆಕಾಶ್‌ ಅಂಬಾನಿ ಹಾಗೂ ಶ್ಲೋಕಾ ಅಂಬಾನಿ ದಂಪತಿಗೆ ಬುಧವಾರ ಹೆಣ್ಣು ಮಗು ಜನಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಮುಕೇಶ್‌ ಪುತ್ರಿ ಇಶಾ ಅಂಬಾನಿ ಹೆಣ್ಣು ಮತ್ತು ಗಂಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇದೀಗ ಮೂರನೇ ಬಾರಿಗೆ ಮುಕೇಶ್‌ ಮತ್ತು ಪತ್ನಿ ನೀತಾ ಅಂಬಾನಿ ಅಜ್ಜ ಅಜ್ಜಿ ಎನ್ನಿಸಿಕೊಂಡಿದ್ದಾರೆ. ಅತೀ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ವಿಶ್ವದಲ್ಲಿಯೇ ಅತೀ ದುಬಾರಿ ಖಾಸಗಿ ಮನೆಯನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ. […]

Just In National

ಒಂದೇ ಬಾರಿ ಐದು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ!

ಮಹಾತಾಯಿಯೊಬ್ಬರು ಐವರು ಮಕ್ಕಳಿಗೆ ಒಂದೇ ಬಾರಿ ಜನ್ಮ ನೀಡಿರುವ ಘಟನೆ ಜಾರ್ಖಂಡ್‌ ನ ರಾಂಚಿಯ ರಿಮ್ಸ್‌ ನಲ್ಲಿ ಬೆಳಕಿಗೆ ಬಂದಿದೆ. ಸದ್ಯ ಈ ಸುದ್ದಿ ಕೇಳಿ ಜನರು ಅಚ್ಚರಿ ಪಡುತ್ತಿದ್ದಾರೆ. ತಾಯಿ ಮತ್ತು ಮಕ್ಕಳು ಆರೋಗ್ಯವಾಗಿದ್ದಾರೆ. ಎಲ್ಲಾ ಐದು ಶಿಶುಗಳು ಆರೋಗ್ಯಕರ ಸ್ಥಿತಿಯಲ್ಲಿವೆ ಮತ್ತು ನಿಯೋನಾಟಲ್ ತೀವ್ರ ನಿಗಾ ಘಟಕದಲ್ಲಿ (NICU) ವೀಕ್ಷಣೆಗಾಗಿ ಇರಿಸಲಾಗಿದೆ. RIMS ರಾಂಚಿ ತನ್ನ ಟ್ವಿಟ್ಟರ್ ನಲ್ಲಿ, ಚತಾರ್‌ನ ಮಹಿಳೆಯೊಬ್ಬರು RIMS ನಲ್ಲಿನ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದಲ್ಲಿ ಐದು ಮಕ್ಕಳಿಗೆ ಜನ್ಮ […]

Bengaluru Just In Karnataka Politics State

ಮತದಾನದ ಕೇಂದ್ರದಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಾತಾಯಿ!

Ballary : ರಾಜ್ಯ ವಿಧಾನಸಭೆ ಚುನಾವಣೆ (Assembly Election) ಗೆ ಈ ಬಾರಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಯುವ ಮತದಾರರು, ಶತಾಯುಷಿಗಳು, ನವ ವಧು-ವರರು ಮತದಾನ ಮಾಡಿ ಹಕ್ಕು ಚಲಾಯಿಸಿದ್ದಾರೆ. ಇದೇ ರೀತಿ ಮತದಾನಕ್ಕೆಂದು ಬಂದಿದ್ದ ಮಹಿಳೆಗೆ ಮತದಾನ ಕೇಂದ್ರದಲ್ಲಿಯೇ ಹೆರಿಗೆಯಾಗಿರುವ ಘಠನೆಯೊಂದು ಬೆಳಕಿಗೆ ಬಂದಿದೆ. ಈ ಘಟನೆ ಜಿಲ್ಲೆಯ ಕುರುಗೋಡು ತಾಲೂಕಿನ ಕೊರ್ಲಾಗುಂದಿ ಗ್ರಾಮದ ಮತದಾನ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ತುಂಬು ಗರ್ಭಿಣಿ ಮಣಿಲಾ ಅವರು ಮತದಾನ ಕೇಂದ್ರಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ […]

Crime Just In National

Hospital: ಮಧ್ಯಪ್ರದೇಶದಲ್ಲಿ ಮನಕಲಕುವ ಘಟನೆ; ಆಸ್ಪತ್ರೆ ಮೆಟ್ಟಿಲ ಮೇಲೆಯೇ ಹೆರಿಗೆ!

ವೈದ್ಯರು ಹಾಗೂ ನರ್ಸ್ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಮಹಿಳೆಯೊಬ್ಬರಿಗೆ ಆಸ್ಪತ್ರೆಯ ಮೆಟ್ಟಿಲು ಮೇಲೆಯೇ ಹೆರಿಗೆಯಾಗಿರುವ ಮನ ಕಲಕುವ ಘಟನೆ ಮಧ್ಯಪ್ರದೇಶ(Madhya Pradesh)ದಲ್ಲಿ ಬೆಳಕಿಗೆ ಬಂದಿದೆ. ಮಧ್ಯಪ್ರದೇಶದ ಶಿವಪುರಿಯಲ್ಲಿರುವ ಆಸ್ಪತ್ರೆಯ ಹೊರಗೆ ಈ ಘಟನೆ ನಡೆದಿದೆ. ಅರುಣ್ ಪರಿಹಾರ್ ಎಂಬ ವ್ಯಕ್ತಿಯ ಪತ್ನಿಗೆ ಬೆಳಿಗ್ಗೆಯಿಂದ ಹೆರಿಗೆ ನೋವು ಕಾಣಿಸಿಕೊಂಡಿದೆ. ಕೂಡಲೇ ಆ ವ್ಯಕ್ತಿ ಜನನಿ ಎಕ್ಸ್‌ ಪ್ರೆಸ್‌ ಗೆ ಕರೆ ಮಾಡಿದ್ದಾನೆ. ಆದರೆ, ಅದು ಕೂಡ ತಡವಾಗಿ ಬಂದಿದೆ. ಇನ್ನೇನು ಆಸ್ಪತ್ರೆಗಾದರೂ ಬೇಗ ಸಾಗಿಸಿ ಹೆರಿಗೆ ಮಾಡಿಸಿಕೊಳ್ಳಬೇಕು ಎಂದರೆ, […]