Kornersite

Bengaluru Just In Karnataka Politics State

Karnataka Assembly Election: ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ- ದೇವನೂರು ಮಹಾದೇವ

Bangalore: ಹಿರಿಯ ಸಾಹಿತಿ ದೇವನೂರು ಮಹಾದೇವ(Devanur Mahadeva) ಅವರು ಸಂಘ ಪರಿವಾರದ ವಿರುದ್ಧ ಗುಡುಗಿದ್ದಾರೆ. ಸಂಘ ಪರಿವಾರದ ಸರ್ಕಾರವನ್ನು ಗುಜರಿಗೆ ಹಾಕಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎದ್ದೇಳು ಕರ್ನಾಟಕ ಸಂಘವು ಸುದ್ದಿಗೋಷ್ಠಿ ನಡೆಸಿ, ಬಿಜೆಪಿ ಸರ್ಕಾರದ ಆಡಳಿತವನ್ನು ಟೀಕಿಸಿದ್ದಾರೆ. ಸಾಹಿತಿ ದೇವನೂರ ಮಹಾದೇವ, ಮತದಾರರು ಹೆಚ್ಚು ಜಾಗೃತರಾಗಿದ್ದಾರೆ. ಅವರು ಇಲ್ಲಿಯವರೆಗೆ ಇಷ್ಟೊಂದು ಜಾಗೃತರಾಗಿರಲಿಲ್ಲ. ಈಗ ಅವರು ಸ್ಪರ್ಧಿಗಳಿಗೆ ಬೆವರಿಳಿಸುತ್ತಿದ್ದಾರೆ.‌ ಡಬಲ್ ಎಂಜಿನ್ ಸರ್ಕಾರ ಅಂತಾ ಕೇಳಿ ಕೇಳಿ ಕಿವಿ ತೂತು ಆಗಿದೆ. ಡಬಲ್ ಎಂಜಿನ್ ಸರ್ಕಾರ ಅಂತಾ […]

Bengaluru Just In Karnataka National Politics State

Karnataka Assembly Election: ಜೆಡಿಎಸ್, ಕಾಂಗ್ರೆಸ್ ಭದ್ರಕೋಟೆಗೆ ಲಗ್ಗೆಯಿಡಲಿರುವ ಪ್ರಧಾನಿ!

Bangalore: ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಎಲ್ಲ ಪಕ್ಷಗಳ ನಾಯಕರು ಮತಬೇಟೆ ಆರಂಭಿಸಿದ್ದಾರೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು 6 ದಿನಗಳ ಕಾಲ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರಚಾರ ನಡೆಸಲಿದ್ದಾರೆ. ಮೇ. 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಏಣಿಕೆ ನಡೆಯಲಿದೆ. ಮತ್ತೊಮ್ಮೆ ಅಧಿಕಾರಕ್ಕೆ ಪಕ್ಷವನ್ನು ತರಲೇಬೇಕು ಎಂದು ಬಿಜೆಪಿ ಹರಸಾಹಸ ಪಡುತ್ತಿದೆ. ಈ ಬಾರಿಯೂ ಮೋದಿ ಮುಖ ತೋರಿಸಿ, ಮತ ಗಿಟ್ಟಿಸಿಕೊಳ್ಳಲು ಬಿಜೆಪಿ ತಂತ್ರ ಹೆಣೆದಿದೆ. ಹೀಗಾಗಿ ಈ ಬಾರಿ […]

Bengaluru Just In Karnataka National Politics State

Karnataka Assembly Election: ಅಜ್ಜಿಯ ಪ್ರತಿರೂಪದಂತೆ ಇದ್ದೀರಿ ಅಂದ ಮಹಿಳೆ ತಬ್ಬಿಕೊಂಡ ಪ್ರಿಯಾಂಕಾ!

Chamarajanagar : ಜಿಲ್ಲೆಯ ಹನೂರಿನಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರ್ಜರಿಯಾಗಿ ಪ್ರಚಾರ ನಡೆಸಿದ್ದು, ಮಹಿಳಾ ಕಾರ್ಯಕರ್ತೆಯರೊಂದಿಗೆ ಸಂವಾದ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರು ತಮ್ಮ ಸಮಸ್ಯೆಗಳ ಕುರಿತು ಹಂಚಿಕೊಂಡರು. ಜಿಲ್ಲೆಯ ಹನೂರಿನಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿಯೂ ಕಾರಿನಿಂದ ಇಳಿದು ಜನರ ಬಳಿ ತೆರಳಿದ ಪ್ರಿಯಾಂಕಾ ಗಾಂಧಿ ಹಸ್ತಲಾಘವ ಕೊಟ್ಟು, ನಮಸ್ಕಾರ ಮಾಡಿದರು.ಕಾರ್ಯಕ್ರಮ ಮುಗಿದ ಮೇಲೆ ಕೂಡ ವೇದಿಕೆಯಿಂದ ಇಳಿದು ಜನರ ಬಳಿ ಮಿಂಚಿನ ಸಂಚಾರ ನಮಾಡಿದರು. ಡೆಸಿ ಗಮನ ಸೆಳೆದರು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್‌ […]

Bengaluru Just In Karnataka Politics State

Karnataka Assembly Election: ವ್ಹಾರೆ ವ್ಹಾ..! ಅಮಿತ್ ಶಾ ಜೀ…ದೆಹಲಿಯಲ್ಲಿ ಕುಳಿತು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ!

Bangalore: ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿ ವಾಗ್ದಾಳಿ ನಡೆಸಿರುವ ಅವರು, ವ್ಹಾರೆ ವ್ಹಾ ಅಮಿತ್ ಶಾ ಜೀ, ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕೈಗೆ ಕೊಡುವ ಚುನಾವಣೆಯಿದು ಎಂದು ಅಮಿತ್ ಶಾ ಹೇಳಿದ್ದ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, ಸರಣಿ ಟ್ವೀಟ್ ಮಾಡಿ […]

Bengaluru Just In Karnataka Politics State

Karnataka Assembly Election: ಜಗದೀಶ ಶೆಟ್ಟರ್ ಸೋಲಿಸಲು ಪಣ; ಟಾಸ್ಕ್ ಕೊಟ್ಟ ಅಮಿತ್ ಶಾ!

Bangalore : ಬಿಜೆಪಿ ಪಕ್ಷದಲ್ಲಿ ಕಡೆಗಣಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ (Congress) ಸೇರಿದ ಜಗದೀಶ್ ಶೆಟ್ಟರ್ (Jagadish Shettar) ಹಾಗೂ ಲಕ್ಷ್ಮಣ ಸವದಿ (Lakshman Savadi) ಅವರನ್ನು ಸೋಲಿಸಲು ಬಿಜೆಪಿಯಲ್ಲಿ ಟಾರ್ಗೆಟ್ ಫಿಕ್ಸ್ ಮಾಡಲಾಗಿದೆ. ಈ ಇಬ್ಬರು ನಾಯಕರನ್ನು ಸೋಲಿಸಲು ಲಿಂಗಾಯತ ವೋಟ್ ಬ್ಯಾಂಕ್ (Lingayat Vote Bank) ಉಳಿಸಿಕೊಳ್ಳಲು ಬಿಜೆಪಿ ನಾಯಕರು ಸಭೆ ಮೇಲೆ ಸಭೆ ಮಾಡುತ್ತಿದ್ದಾರೆ. ಅವಿಭಜಿತ ಧಾರವಾಡ ಜಿಲ್ಲೆಯ 175 ನಾಯಕರ ಜೊತೆ ಅಮಿತ್ ಶಾ (Amit Shah) ಚರ್ಚೆ ನಡೆಸಿದ್ದಾರೆ. ಬಿಎಸ್‌ ಯಡಿಯೂರಪ್ಪ […]

Bengaluru Just In Karnataka Politics State

Karnataka Assembly Election: ಲಿಂಗಾಯತ ಹೇಳಿಕೆ ವಿಚಾರ; ಮಾಜಿ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು!

Bangalore : ರಾಜ್ಯ ವಿಧಾನಸಭೆ ಚುನಾವಣೆ (Karnataka Assembly Elections 2023) ಯಲ್ಲಿ ಹೇಳಿಕೆ ನೀಡುವ ಸಂದರ್ಭದಲ್ಲಿ ಲಿಂಗಾಯತರ ವಿರುದ್ಧ ಹೇಳಿಕೆ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾನನಷ್ಟ ಮೊಕದ್ದಮೆ (Defamation case) ದಾಖಲಿಸಲಾಗಿದೆ. ಶಂಕರ್ ಶೇಟ್ ಎಂಬುವವರು ಮ್ಯಾಜಿಸ್ಟ್ರೇಟ್ ಕೋರ್ಟ್‌ ಗೆ (Magistrate Court) ದೂರು ನೀಡಿದ್ದು, ಕೋರ್ಟ್ ವಿಚಾರಣೆಯನ್ನು ಏ. 29ಕ್ಕೆ ಮುಂದೂಡಿದೆ. ಲಿಂಗಾಯತ ಸಿಎಂ ಭ್ರಷ್ಟಾಚಾರ ಎಸಗಿ, ರಾಜ್ಯ ಹಾಳು ಮಾಡಿದ್ದಾರೆ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ […]

Bengaluru Just In Karnataka Politics State

Karnataka Assembly Election: ರೆಡ್ಡಿ ಕುಟುಂಬಗಳ ಮಧ್ಯೆ ಬಿಗ್ ಫೈಟ್; ಇದು ಬಳ್ಳಾರಿ ಕ್ಷೇತ್ರದ ಚಿತ್ರಣ!

Ballari : ಬಳ್ಳಾರಿ (Ballari) ಜಿಲ್ಲೆಯಲ್ಲಿ ಈ ಬಾರಿ ರೆಡ್ಡಿ ಕುಟುಂಬಗಳ ಮಧ್ಯೆಯೇ ಯುದ್ಧ ನಡೆಯುತ್ತಿದೆ. ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ಕುಟುಂಬಕ್ಕೆ ಠಕ್ಕರ್ ಕೊಡಬಲ್ಲ ಮತ್ತೊಂದು ರೆಡ್ಡಿ ಕುಟುಂಬ ಎಂದರೆ ಅದು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿ ಕುಟುಂಬ. ಏನೇ ಆದರೂ ಇಲ್ಲಿ ಈ ಬಾರಿ ಗೆಲ್ಲುವುದು ಮಾತ್ರ ರೆಡ್ಡಿ! ಸೂರ್ಯನಾರಾಯಣ ರೆಡ್ಡಿ ಅವರ ಪುತ್ರ ನಾರಾ ಭರತ್ ರೆಡ್ಡಿ (Nara Bharath Reddy) ಕಾಂಗ್ರೆಸ್‌ ನಿಂದ (Congress) ಕಣಕ್ಕೆ ಇಳಿದಿದ್ದಾರೆ. ಜನಾರ್ದನ […]

Bengaluru Just In Karnataka Politics State

Karnataka Assembly Election: ಸಾಂಸ್ಕೃತಿಕ ನಗರದಲ್ಲಿ ಕೈ, ತೆನೆಯ ಭರ್ಜರಿ ಪ್ರಚಾರ!

ನಿನ್ನೆಯಷ್ಟೇ ಮೈಸೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit shah) ಪ್ರಚಾರ ನಡೆಸಿದ್ದು, ಅದರ ಬೆನ್ನಲ್ಲಿಯೇ ಇಂದು ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಭರ್ಜರಿ ಪ್ರಚಾರ ಹಮ್ಮಿಕೊಂಡಿದ್ದಾರೆ. ಇಂದು ಒಂದೆಡೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಎಚ್. ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರೆ, ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಕೈ ಅಭ್ಯರ್ಥಿಗಳ […]

Just In National Uttar Pradesh

Yogi Adityanath: ಯೋಗಿ ಆದಿತ್ಯನಾಥ್ ಗೆ ಜೀವ ಬೆದರಿಕೆಯ ಕರೆ!

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್(Yogi Adityanath) ಅವರಿಗೆ ಜೀವ ಬೆದರಿಕೆ ಕರೆ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅಪರಿಚಿತ ವ್ಯಕ್ತಿಯೊಬ್ಬರು 112 ನಂಬರ್‌ ಗೆ ಸಂದೇಶ ಕಳುಹಿಸುವ ಮೂಲಕ ಈ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಭದ್ರತಾ ಸಂಸ್ಥೆಗಳು ಎಚ್ಚೆತ್ತಿದ್ದು, ಈ ಕುರಿತು ತನಿಖೆ ಆರಂಭಿಸಿವೆ. ಸಿಎಂ ಯೋಗಿ ಅವರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಸುಶಾಂತ್ ಗಾಲ್ಫ್ ಸಿಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಆರೋಪಿ […]

Bengaluru Just In Karnataka Politics State

Karnataka Assembly Election: ಬಿಸಿಲ ನಾಡಿನಲ್ಲಿ ಅಮಿತ್ ಶಾ ಮತ ಬೇಟೆ!

yadagiri : ರಾಜ್ಯದಲ್ಲಿ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಬಿಸಿಲಿನಂತೆ, ರಾಜಕೀಯ ಕಾವು ಕೂಡ ಹೆಚ್ಚಾಗುತ್ತಿದೆ. ಇದರ ಮಧ್ಯೆಯೂ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಆರಂಭಿಸಿವೆ. ಗಿರಿನಾಡು ಯಾದಗಿರಿ (Yadgiri) ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ನಡೆಯುತ್ತಿದೆ. ಮತ್ತೊಮ್ಮೆ ಸರ್ಕಾರ ರಚಿಸುವ ಭರವಸೆಯಲ್ಲಿರುವ ಬಿಜೆಪಿ (BJP) ನಾಯಕರು ತಂತ್ರ- ಪ್ರತಿತಂತ್ರ ಹೆಣೆದು, ಭರ್ಜರಿಯಾಗಿ ಪ್ರಚಾರ ಕೈಗೊಂಡಿದ್ದಾರೆ. ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ಇಂದು (ಮಂಗಳವಾರ) […]