BSYadiyurappa: ಬಿಜೆಪಿಗೆ ಸೋಲು ಹೊಸದೇನು ಅಲ್ಲ; ಮತದಾರರ ತೀರ್ಪು ಸ್ವಾಗತಿಸುತ್ತೇವೆ!
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ (Karnataka Election)ಯಲ್ಲಿ ಮತದಾರರು ನೀಡಿದ ತೀರ್ಪನ್ನು ಸ್ವಾಗತಿಸುತ್ತೇವೆ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ (BS Yediyurappa) ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸೋಲು- ಗೆಲುವು ಹೊಸದೇನು ಅಲ್ಲ. ಎರಡು ಸ್ಥಾನದಿಂದ ಆರಂಭಿಸಿ ಸ್ವಂತ ಬಲದಿಂದ ಸರ್ಕಾರ ಮಾಡಲಾಗಿತ್ತು. ಈ ಸೋಲಿನಿಂದ ಕಾರ್ಯಕರ್ತರು ಧೃತಿಗೆಡಬೇಕಿಲ್ಲ. ಅಭಿವೃದ್ಧಿ ಪರ ಆಡಳಿತ ನೀಡಿದ್ದೇವೆ. ಆದರೂ ಸೋಲಾಗಿದೆ, ಪರಾಮರ್ಶೆ, ಆತ್ಮಾವಲೋಕನ ಮಾಡಿಕೊಳ್ಳುತ್ತೇವೆ. ರಾಜ್ಯದ ಜನತೆಗೆ ಧನ್ಯವಾದ ಹೇಳುತ್ತೇನೆ. ರಾಜ್ಯದ ಅಭಿವೃದ್ಧಿಗೆ ಸಹಕಾರ ಇರಲಿದೆ. ಕಾಂಗ್ರೆಸ್ನವರು ಕೊಟ್ಟಿರುವ […]








