Cabinet: ಹಿರಿಯರಿಗೆ ಸಿಗದ ಸಚಿವ ಸ್ಥಾನ; ರಾಜೀನಾಮೆಗೆ ಮುಂದಾದ ಬಿ.ಕೆ. ಹರಿಪ್ರಸಾದ್
Bangalore: ಸಿದ್ದರಾಮಯ್ಯ (Siddarmaiah) ಸರ್ಕಾರದ ಸಂಪುಟ ಸೇರಲು ಹಲವಾರು ಆಕಾಂಕ್ಷಿಗಳು ಪ್ರಯತ್ನಿಸಿದ್ದರು. ಕೊನೆಗೂ ಸಂಪುಟ ರಚನೆಯಾಗಿದ್ದು, ಹಲವು ಹಿರಿಯರಿಗೆ ಅವಕಾಶ ನೀಡಿಲ್ಲ. ಈ ನಿಟ್ಟಿನಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಕೆಲ ಶಾಸಕರು ಹೈಕಮಾಂಡ್ ನಡೆಗೆ ತೀವ್ರ ಅಸಮಾಧಾನಗೊಂಡಿದ್ದಾರೆ. ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್(BK Hariprasad) ಮುನಿಸಿಕೊಂಡಿದ್ದು, ಸಚಿವ ಸ್ಥಾನ ಕೈ ತಪ್ಪಿದಕ್ಕೆ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನಲಾಗುತ್ತಿದೆ.ವಿಧಾನ ಪರಿಷತ್ ಪ್ರತಿಪಕ್ಷದ ನಾಯಕರಾಗಿದ್ದ ಬಿ.ಕೆ ಹರಿಪ್ರಸಾದ್, 16 ವಿವಿಧ ರಾಜ್ಯಗಳಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ, ಪರಿಷತ್ತಿನಲ್ಲಿ […]