ಸಾರಿಗೆ ಇಲಾಖೆಯಲ್ಲಿ ಉದ್ಯೋಗಾವಕಾಶ: 13,415 ಹುದ್ದೆ ಶೀಘ್ರದಲ್ಲಿ ಭರ್ತಿ
ಕರ್ನಾಟಕ ಸಾರಿಗೆ ರಸ್ತೆ ಸಾರಿಗೆ ಇಲಾಖೆ ನಾಲ್ಕು ನಿಗಮಗಳಲ್ಲಿ 13 ಸಾವಿರಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇವೆ. ಈ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಿದೆ ಇಲಾಖೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 2017ನೇ ಸಾಲಿನಿಂದ ರಸ್ತೆ ಸಾರಿಗೆ ನಿಗಮಗಳಲ್ಲಿ ನೇಮಕಗೊಳ್ಳದೇ ಇರೋ ನೇಮಾಕಾತಿ ಪ್ರಕ್ರಿಯೆಗೆ ಚಾಲನೆ ನೀಡಲು ಸಚಿವರು ಇದೀಗ ಮುಂದಾಗಿದ್ದಾರೆ. ನಿವೃತ್ತಿ, ಮರಣ ಹೀಗೆ ವಿವಿಧ ಕಾರಣಗಳಿಂದ ಖಾಲಿ ಆಗಿರುವ ಜಾಗಕ್ಕೆ ಇದೀಗ ಹೊಸದಾಗಿ ಅಪಾಯಿಂಟ್ ಮಾಡಿಕೊಳ್ಳಲಿದ್ದಾರೆ. […]