Crime News: ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾದ ಮಕ್ಕಳು; ಭಯಾನಕ ಘಟನೆಗೆ ಬೆಚ್ಚಿಬಿದ್ದ ಜನರು!
ದೆಹಲಿಯ ಜಾಮಿಯಾ ನಗರದ ಕಾರ್ಖಾನೆಯೊಂದರಲ್ಲಿ ಮರದ ಪೆಟ್ಟಿಗೆಯಲ್ಲಿ 7 ಹಾಗೂ 8 ವರ್ಷದೊಳಗಿನ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಮಕ್ಕಳು ಜೂನ್ 5 ರಿಂದ ನಾಪತ್ತೆಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಕಾರ್ಖಾನೆಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾದ ಕುರಿತು ಜಾಮಿಯಾನಗರ ಪಿಎಸ್ ಗೆ ಕರೆ ಬಂದಿತ್ತು. ನಂತರ ಅಲ್ಲಿಗೆ ತೆರಳಿದಾಗ ಮರದ ಪೆಟ್ಟಿಗೆಯಲ್ಲಿ ಶವಗಳು ಕಂಡು ಬಂದಿವೆ. […]