ಎರಡನೇ ಮಗುವಿಗೆ ತಂದೆಯಾದ ವಿಜಯ್ ಸೂರ್ಯ
ಟಿವಿ ಸಿರಿಯಲ್ ನ ಫೇಮಸ್ ನಟ, ಅಗ್ನಿಸಾಕ್ಷಿ ಧಾರಾವಾಹಿ ಮೂಲಕ ಮನೆ ಮನೆ ಮಾತಾದ ವಿಜಯ್ ಸೂರ್ಯ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2020ರಲ್ಲಿ ಒಂದನೇ ಮಗುವಿಗೆ ತಂದೆಯಾಗಿದ್ದರು. ಇದೀಗ ಎರಡನೇ ಮಗುವಿಗೆ ತಂದೆಯಾಗಿದ್ದಾರೆ. 2019ರಲ್ಲಿ ಚೈತ್ರಾ ಶ್ರೀನಿವಾಸ್ ಅವರ ಜೊತೆ ಮದುವೆಯಾಗಿದ್ದರು. ಮಾಧ್ಯಮದ ಜೊತೆ ಮಾತನಾಡಿದ ವಿಜಯ್ ಸೂರ್ಯ ‘ನಮಗೆ ಎರಡನೇ ಮಗು ಹುಟ್ಟಿದೆ, ಗಂಡು ಮಗು’ ಎಂದು ಹೇಳಿದ್ದಾರೆ. ವಿಜಯ್ ಸೂರ್ಯ ಹಾಗೂ ಚೈತ್ರಾ ಶ್ರೀನಿವಾಸ್ ದಂಪತಿ ತಮ್ಮ ಒಂದನೇ ಮಗುವಿಗೆ ಸೋಹನ್ ಎಂದು ಹೆಸರಿಟ್ಟಿದ್ದಾರೆ. […]
