Kornersite

Just In Karnataka State

ಅಚ್ಚರಿ! 9 ಬಾರಿ ಹಾವಿನಿಂದ ಕಚ್ಚಿಸಿಕೊಂಡರೂ ಬದುಕುಳಿದ ಬಾಲಕ

ಹಾವು ಎಂದರೆ ಎಲ್ಲರಿಗೂ ಭಯ. ಆದರೆ, ಇಲ್ಲೊಬ್ಬ ಬಾಲಕನಿಗೆ ಬರೋಬ್ಬರಿ 9 ಬಾರಿ ಹಾವು ಕಚ್ಚಿದೆ. ಆದರೂ ಆತ, ಆರೋಗ್ಯವಾಗಿಯೇ ಇದ್ದಾನೆ ಎನ್ನಲಾಗಿದೆ. ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕಿನ ಹಳಕರ್ಟಿ ಗ್ರಾಮದ ನಿವಾಸಿ ಪ್ರಜ್ವಲ್ ಗೆ ಜುಲೈ 3ರಂದು ಮನೆಯ ಮುಂದೆ ಆಡುವಾಗ ಹಾವು (Snake Bite) ಕಚ್ಚಿದೆ. ಆಗ ಈ ಬಾಲಕನ ಪೋಷಕರು ಬೇವಿನ ಮರದ ಎಲೆ ಹಾಗೂ ಖಾರದ ಪುಡಿ ತಿನ್ನಿಸಿದ್ದಾರೆ. ಬಾಯಿಗೆ ಸಿಹಿ, ಖಾರ ಎರಡೂ ಹತ್ತುತ್ತಿಲ್ಲ ಎಂದು ಬಾಲಕ ಹೇಳಿದ್ದಕ್ಕೆ ಆತನನ್ನು […]

Crime Just In State

40 ಅಡಿ ಕೊಳವೆ ಬಾವಿಗೆ ಬಿದ್ದ 3 ವರ್ಷದ ಮಗು

3 ವರ್ಷದ ಮಗುವೊಂದು 40 ಅಡಿ ಕೊಳವೆ ಬಾವಿಗೆ ಬಿದ್ದಿರುವ ಘಟನೆ ಬಿಹಾರದ ನಳಂದದಲ್ಲಿ ನಡೆದಿದೆ. ಈಗಾಗಲೇ ರಕ್ಷಣಾ ಕಾರ್ಯ ಮುಂದುವರೆದಿದೆ. ಶಿಎಂ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದವನು. ಶಿವಂನನ್ನು ರಕ್ಷಿಸಲು ಎನ್ ಡಿಆರ್ ಎಫ್ ಮತ್ತು ಇತರ ರಕ್ಷಣಾ ತಂಡಗಳು ಸ್ಥಳಕ್ಕೆ ಬಂದ ಕಾರ್ಯಾಚರಣೆ ನಡೆಸಿವೆ. ರಕ್ಷಣಾ ಕಾರ್ಯದಲ್ಲಿ ನಿರತರಾಗಿರುವ ಸಿಬ್ಬಂಧಿಗಳಿಗೆ ಶಿವಂನ ಧ್ವನಿ ಕೇಳುತ್ತಿದೆ. ಶಿವಂನ ತಾಯಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆಟವಾಡುತ್ತಿದ್ದ ಮಗನ ಕಾಲು ಜಾರಿ ಕೊಳವೆ ಬಾವಿಗೆ ಬಿದ್ದಿದ್ದಾನೆ. […]

Crime Just In State

ಬೀದಿ ನಾಯಿಗಳ ದಾಳಿಗೆ 11 ವರ್ಷದ ಬಾಲಕ ಬಲಿ

ಕಣ್ಣೂರು (ಕೇರಳ): ಕೇರಳದ ಕಣ್ಣೂರಿಗೆ ಸಮೀಪದ ಮುಜಪ್ಪಿಲಂಗಾಡ್ ನಲ್ಲಿ ಭಾನುವಾರ ಸಾಯಂಕಾಲ ಬೀದಿ ನಾಯಿಗಳು ಬಾಲಕನ ಮೇಲೆ ಅಟ್ಯಾಕ್ ಮಾಡಿದ್ದಾವೆ. ಪರಿಣಾಮ 11 ವರ್ಷದ ವಿಶೇಷ ಚೇತನ ಬಾಲಕ ಆಸ್ಪತೆಯಲ್ಲಿ ಮೃತಪಟ್ಟಿದ್ದಾನೆ. ಕೆಟ್ಟಿನಕಂ ನಿವಾಸಿ ನಿಹಾಲ್ ಎನ್ನುವವನು ಮನೆಯಿಂದ 300 ಮೀಟರ್ ದೂರದಲ್ಲಿ ಗಾಯಗೊಂಡಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದುಕೊಮ್ಡು ಹೋದರೂ ಕೂಡ ಪ್ರಯೋಜನವಾಗಲಿಲ್ಲ ಎಂದು ಕೇರಳ ಪೊಲೀಸರು ತಿಳಿಸಿದ್ದಾರೆ. ಅಸಲಿಗೆ ನಿಹಾಲ್ ಆಟಿಸಂನಿಂದ ಬಳಲುತ್ತಿದ್ದ. ಮನೆಯ ಬಳಿಯೇ ಓಡಾಡಿಕೊಂಡು ಇದ್ದವನು ಸಡನ್ ಆಗಿ ಕಾಣಲಿಲ್ಲ. ಎಲ್ಲರೂ […]

International Just In

ಬಾಲಕನ ಹೊಟ್ಟೆಯಲ್ಲಿ ಬರೋಬ್ಬರಿ 40 ಚ್ಯೂಯಿಂಗ್ ಗಮ್!

ಅಮೆರಿಕದ (America) 5 ವರ್ಷದ ಬಾಲಕನೊಬ್ಬ 40 ಚ್ಯೂಯಿಂಗ್‌ ಗಮ್‌ (Chewing Gum) ನುಂಗಿದ ಪರಿಣಾಮ ಜಠರದಲ್ಲಿ ಸಮಸ್ಯೆಯಾಗಿ ಗಂಭೀರ ಸಮಸ್ಯೆ ಎದುರಿಸಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆ ಸಮಸ್ಯೆಯಿಂದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆ ಸ್ಕ್ಯಾನ್‌ ಮಾಡಿದಾಗ, ಹೆಚ್ಚಿನ ಪ್ರಮಾಣದ ಚ್ಯೂಯಿಂಗ್‌ ಗಮ್‌ ನುಂಗಿರುವುದು ಪತ್ತೆಯಾಗಿದೆ. ಜೀರ್ಣವಾಗದ ಈ ಪದಾರ್ಥ ಬಾಲಕನ ಜಠರದಲ್ಲಿ ಅಡಚಣೆ ಉಂಟು ಮಾಡಿತ್ತು ಎಂದು ವೈದ್ಯರು ಹೇಳಿದ್ದಾರೆ. ವೈದ್ಯರು ಅವನ ಗಂಟಲಿನ ಕೆಳಗೆ ಲೋಹದ ಟ್ಯೂಬ್ ಇರಿಸುವ ಮೂಲಕ ಚ್ಯೂಯಿಂಗ್‌ […]

Just In Karnataka State

ರಾಯಚೂರಿನಲ್ಲಿ ಕಲುಷಿತ ನೀರಿಗೆ ಮುಕ್ತಿ ಯಾವಾಗ? ಮತ್ತೊಂದು ಘಟನೆಯಲ್ಲಿ ಓರ್ವ ಬಾಲಕ ಸಾವು; 30ಕ್ಕೂ ಅಧಿಕ ಜನರು ಅಸ್ವಸ್ಥ

Raichur: ಕಲುಷಿತ ನೀರು (Polluted Water) ಸೇವಿಸಿದ ಪರಿಣಾಮ ಓರ್ವ ಮಗು (Boy) ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಜನರು ಗಾಯಗೊಂಡಿರುವ ಘಟನೆ ಜಿಲ್ಲೆಯ ದೇವದುರ್ಗ ತಾಲೂಕಿನ ರೇಕಲಮರಡಿ ಗ್ರಾಮದಲ್ಲಿ ನಡೆದಿದೆ. ನೀರು ಸರಬರಾಜು ಮಾಡುವ ಪೈಪ್ ಲೈನ್‌ ಗೆ ಚರಂಡಿ ನೀರು ಸೇರಿದ್ದ ಪರಿಣಾಮ ಕಳೆದ ಎರಡ್ಮೂರು ದಿನಗಳಿಂದಲೂ ಗ್ರಾಮಸ್ಥರು ಅಸ್ವಸ್ಥರಾಗಿದ್ದಾರೆ. ಈ ನೀರು ಕುಡಿದು ಅಸ್ವಸ್ಥವಾಗಿದ್ದ 5 ವರ್ಷದ ಬಾಲಕ ಹನುಮೇಶ್ ಸಾವನ್ನಪ್ಪಿದ್ದಾನೆ. ಅಲ್ಲದೇ, ಗ್ರಾಮದ 30ಕ್ಕೂ ಅಧಿಕ ಜನರು ವಾಂತಿ-ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ […]

Bengaluru Crime Just In Karnataka State

ನೀರು ತರಲು ನದಿಗೆ ಇಳಿದ ಬಾಲಕನನ್ನು ಎಳೆದೊಯ್ದ ಮೊಸಳೆ!

Raichur : ನೀರು ಕುಡಿಯುವುದಕ್ಕಾಗಿ ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ತಾಲೂಕಿನ ಕುರವಕಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನವೀನ್(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ಸಂದರ್ಭದಲ್ಲಿ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಹೀಗಾಗಿ ನವೀನ್ ಹಾಗೂ ಮತ್ತೊಬ್ಬ ಬಾಲಕ ನದಿಯಲ್ಲಿ ಇಳಿದಿದ್ದಾರೆ. ಬಾಟಲಿಗೆ ನೀರು ತುಂಬಿಸಲು ಮುಂದಾಗುತ್ತಿದ್ದಂತೆ ನವೀನ್ ಮೇಲೆ ಮೊಸಳೆ ದಾಳಿ ಮಾಡಿದೆ. ನವೀನ್ ಜತೆ ಇದ್ದ […]

Crime International Just In

Firing: ಶಾಲೆಯಲ್ಲಿ ಫೈರಿಂಗ್ ಮಾಡಿ 8 ಮಕ್ಕಳ ಸಾವಿಗೆ ಕಾರಣನಾದ ವಿದ್ಯಾರ್ಥಿ! ಹಲವರ ಸ್ಥಿತಿ ಗಂಭೀರ!

ಬಾಲಕನೊಬ್ಬ ಗುಂಡಿನ ದಾಳಿ ನಡೆಸಿದ ಪರಿಣಾಮ 8 ಜನ ಮಕ್ಕಳು ಸಾವನ್ನಪ್ಪಿರುವ ಘಟನೆ ಸರ್ಬಿಯಾದ (Serbia) ರಾಜಧಾನಿ ಬೆಲ್‌ಗ್ರೇಡ್‌ನ (Belgrade) ಶಾಲೆಯೊಂದರಲ್ಲಿ ನಡೆದಿದೆ. ಅಲ್ಲಿನ ಬೆಲ್‌ ಗ್ರೇಡ್‌ ನ ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ 6 ಮಕ್ಕಳು ಹಾಗೂ ಶಿಕ್ಷಕರು ಗಾಯಗೊಂಡಿದ್ದಾರೆ. ಸದ್ಯ ಗುಂಡು ಹಾರಿಸಿದ್ದ 7ನೇ ತರಗತಿಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕ ತನ್ನ ತಂದೆಯ ಬಂದೂಕಿನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳು ಹರಿದಾಡುತ್ತಿದ್ದು, […]

Crime Just In National

Crime News: ಬಾಲಕನನ್ನೇ ಬಲಿಕೊಟ್ಟ ಪಾಪಿಗಳು!

Hyderabad : ತಂತ್ರಜ್ಞಾನ ಎಷ್ಟೇ ಸುಧಾರಿಸಿದರೂ ಮೂಢನಂಬಿಕೆಗಳ ಹೆಸರಿನಲ್ಲಿ ನರಬಲಿ, ಪ್ರಾಣಿಗಳ ಬಲಿ ಕೊಡುವುದು ಮಾತ್ರ ಇದುವರೆಗೂ ನಿಲ್ಲುತ್ತಿಲ್ಲ. ಅಮವಾಸ್ಯೆ ಹಿನ್ನೆಲೆ ಬಾಲಕನನ್ನು ಬಲಿ ಕೊಡಲಾಗಿದೆ. ಈ ಘಟನೆ ಹೈದರಾಬಾದ್‌ನ ಸನತ್‌ನಗರದಲ್ಲಿ ನಡೆದಿದೆ. ಅಬ್ದುಲ್ ವಾಹಿದ್ (8) ಸಾವನ್ನಪ್ಪಿದ ಬಾಲಕ ಎನ್ನಲಾಗಿದೆ. ಬಾಲಕನನ್ನು ಕೊಲೆ ಮಾಡಿ, ಮೃತ ದೇಹವನ್ನು ಸನತನಗರದ ಅಲ್ಲಾವುದ್ದೀನ್ ಕೋಟಿ ಪ್ರದೇಶದ ಕಾಲುವೆಯಲ್ಲಿ ಎಸೆಯಲಾಗಿದ್ದು, ಅಮವಾಸ್ಯೆ ಇದ್ದ ಕಾರಣ ಬಾಲಕನನ್ನು ಬಲಿ ಕೊಡಲಾಗಿದೆ ಎಂದು ಸ್ಥಳೀಯರು ಶಂಕಿಸಿದ್ದಾರೆ. ಅಲ್ಲಾದುನ್ ಕೋಟಿಯಲ್ಲಿ ವಾಸಿಂ ಖಾನ್ ಎಂಬ […]