Accident: ಸಾರಿಗೆ ಬಸ್ ಪಲ್ಟಿ; 7 ಜನರ ಸ್ಥಿತಿ ಗಂಭೀರ!
Belagavi : ಸುಮಾರು 30 ಜನರನ್ನು ಹೊತ್ತು ಸಾಗುತ್ತಿದ್ದ ಬಸ್ ಪಲ್ಟಿಯಾದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರು ಘಾಟ್ ನಲ್ಲಿ ನಡೆದಿದೆ. ಧಾರವಾಡ (Dharwad) ದಿಂದ ಜಮಖಂಡಿಗೆ ತೆರಳುತ್ತಿದ್ದ ಜಮಖಂಡಿ (Jamkhandi) ಡಿಪೋಗೆ ಸೇರಿದ ಕೆಎಸ್‍ಆರ್ ಟಿಸಿ (KSRTC) ಬಸ್ ಪಲ್ಟಿಯಾಗಿದೆ. ಈ ಬಸ್ ನಲ್ಲಿ ಸುಮಾರು 30ಕ್ಕೂ ಅಧಿಕ ಜನರು ಇದ್ದರು ಎನ್ನಲಾಗಿದ್ದು, ಘಟನೆಯಲ್ಲಿ 7 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ರಾಮದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. […]