72 ವರ್ಷದ ವ್ಯಕ್ತಿಯನ್ನೇ ತಿಂದ 40 ಸಾಕಿದ ಮೊಸಳೆಗಳು!
ಬರೋಬ್ಬರಿ 40 ಮೊಸಳೆಗಳಿಗೆ ಒಬ್ಬ ಮನುಷ್ಯ ಸಿಕ್ಕರೆ ಏನಾಗಬಹುದು? ಅಬ್ಬಾ ಇದನ್ನು ಊಹಿಸುವುದೇ ಜೀವ ಹೋದಂತೆ ಆಗುತ್ತದೆ. ಆದರೆ, 72 ವರ್ಷದ ವೃದ್ಧರೊಬ್ಬರನ್ನು ಇಷ್ಟೊಂದು ಸಂಖ್ಯೆಯ ಮೊಸಳೆಗಳು ತಿಂದು ತೇಗಿವೆ. ಈ ಘಟನೆ ಕಾಂಬೋಡಿಯಾದಲ್ಲಿ ಬೆಳಕಿಗೆ ಬಂದಿದೆ. ಸಾವನ್ನಪ್ಪಿದ ವೃದ್ಧನ ಕುಟುಂಬಸ್ಥರು ಮೊಸಳೆ ಸಾಕಾಣಿಕೆ ಮಾಡುತ್ತಿದ್ದಾರೆ. ಮೊಸಳೆ (Crocodile) ಗಳನ್ನು ಕೂಡಿ ಹಾಕುವ ಪಂಜರದ ಒಳಗೆ ವೃದ್ಧ ಆಯತಪ್ಪಿ ಬಿದ್ದಿದ್ದರಿಂದ ಈ ಅನಾಹುತ ಸಂಭವಿಸಿದೆ. ಮೊಟ್ಟೆ ಇರಿಸಿದ್ದ ಮೊಸಳೆಯನ್ನು ಹೊರಗೆ ಕಳುಹಿಸಲು ವೃದ್ಧ ಲುವಾನ್ ನಾಮ್ ಯತ್ನಿಸುತ್ತಿದ್ದರು. […]