ಹಾಲಶ್ರೀ ಹಿಡಿದಿದ್ದೇ ರೋಚಕ; ಕಾವಿ ವೇಷ ತೊಟ್ಟು ಹಿಡಿದ ಅಧಿಕಾರಿಗಳು!
ಚೈತ್ರಾ ಕುಂದಾಪೂರ ವಂಚನೆಯ ಮೂರನೇ ಆರೋಪಿಯಾಗಿರುವ ಹಾಲಶ್ರೀ ಕೊನೆಗೂ ಪೊಲೀಸರ ಅತಿಥಿಯಾಗಿದ್ದು, ಅವರನ್ನು ಸೆರೆ ಹಿಡಿದಿರುವುದೇ ಬಲು ರೋಚಕವಾಗಿದೆ. ವೇಷ ಬದಲಿಸಿದ್ದ ಹಾಲಶ್ರೀ ಹಿಡಿಯುವುದಕ್ಕಾಗಿ ಸಿಸಿಬಿ ಪೊಲೀಸರು ಕೂಡ ವೇಷ ಬದಲಾಯಿಸಿದ್ದರು. ಆತ ಕಾವಿ ಬದಲಿಸಿದ್ದರೆ, ಇವರು ಖಾಕಿ ಬದಲಿಸಿದ್ದರು. ಮಡಿತೊಟ್ಟು ಅಖಾಡಕ್ಕೆ ಇಳಿದು ಬಂಧಿಸಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ ಹಾಲಶ್ರೀ ಹೈದರಾಬಾದ್ (Hyderabad) ನಿಂದ ಉತ್ತರ ಭಾರತದ ಕಡೆಗೆ ಹೋಗಿರುವ ಮಹಾತಿಯು ಸಿಸಿಬಿ ಅಧಿಕಾರಿಗಳಿಗೆ ಸಿಕ್ಕಿತ್ತು. ಹಾಲಶ್ರೀ ಮಠಗಳು, ದೇವಸ್ಥಾನಗಳಲ್ಲಿ ಇರಬಹುದೆಂಬ ಮಾಹಿತಿ […]