ಚಿಕುನ್ ಗುನ್ಯಾ; ಎಲ್ಲೆಂದರಲ್ಲಿ ಮಲಗಿದ ಜನರು; ತಿರುಗಿಯೂ ನೋಡದ ಅಧಿಕಾರಿಗಳು!
ಯಾದಗಿರಿ: ಒಂದೇ ಗ್ರಾಮದ 100ಕ್ಕೂ ಅಧಿಕ ಜನರಲ್ಲಿ ಚಿಕುನ್ ಗುನ್ಯಾ ಕಾಣಿಸಿಕೊಂಡಿರುವ ಘಟನೆಯೊಂದು ಬೆಳಕಿಗೆ ಬಂದಿದೆ.ಜಿಲ್ಲೆಯ ಹುಣಸಗಿ ತಾಲೂಕಿನ ಬೈಲಾಪುರ ತಾಂಡಾದ ಒಂದೇ ಗ್ರಾಮದಲ್ಲಿ 100ಕ್ಕೂ ಅಧಿಕ ಜನರಲ್ಲಿ ಚಿಕುನ್ ಗುನ್ಯಾ (Chickengunya) ಕಾಣಿಸಿಕೊಂಡಿದೆ. ಬೈಲಾಪುರ ತಾಂಡಾದ 100ಕ್ಕೂ ಅಧಿಕ ಜನರಿಗೆ ಚಿಕನ್ ಗುನ್ಯಾ ಬಾಧಿಸಿದ್ದು, ಜನರು ಹಾಸಿಗೆ ಹಿಡಿದಿದ್ದಾರೆ. ಬೈಲಾಪುರ ತಾಂಡಾದಲ್ಲಿ 150 ಕುಟುಂಬಗಳಿವೆ. ಅದರಲ್ಲಿ 100ಕ್ಕೂ ಅಧಿಕ ಜನರಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ. ಖಾಯಿಲೆಗೆ ತುತ್ತಾಗಿರುವ ಜನ ನಡೆಯಲಾಗದ ಪರಿಸ್ಥಿತಿಯಲ್ಲಿದ್ದು ಹಾಸಿಗೆ ಹಿಡಿದಿದ್ದಾರೆ. ಜ್ವರ, […]