Kornersite

Just In Karnataka State

ಕೋಳಿ ಸಾಕಾಣಿಕೆಯನ್ನು ವಾಣಿಜ್ಯ ಚಟುವಟಿಕೆ ಎಂದು ಪರಿಗಣಿಸುವಂತಿಲ್ಲ!

ಬೆಂಗಳೂರು: ಕೋಳಿ ಸಾಕಣೆ ಮಾಡುವುದು ಕೂಡ ಕೃಷಿ ಚಟುವಟಿಕೆಯಾಗಿದ್ದು, ಈ ಉದ್ಯೋಗವನ್ನು ವಾಣಿಜ್ಯ ಚಟುವಟಿಕೆಯಾಗಿ ಪರಿಗಣಿಸಬಾರದು. ಹೀಗಾಗಿ ಯಾವುದೇ ರೀತಿಯ ತೆರಿಗೆ ವಿಧಿಸಲು ಗ್ರಾ ಪಂಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ. ಕೋಳಿ ಸಾಗಣೆ ಕೇಂದ್ರಕ್ಕೆ ತೆರಿಗೆ ವಿಧಿಸಿದ್ದ ಗ್ರಾಪಂ ನಿಲುವು ಪ್ರಶ್ನಿಸಿ ಬೆಂಗಳೂರು ಉತ್ತರ ತಾಲೂಕಿನ ಸೊಂಡೇಕೊಪ್ಪದ ಕೆ. ನರಸಿಂಹಮೂರ್ತಿ ಎಂಬ ವ್ಯಕ್ತಿ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ. ಕೋಳಿ […]

Just In National

ಸನಾತನ ಧರ್ಮದ ವಿವಾದ; ಉದಯನಿಧಿ ಸ್ಟಾಲಿನ್ ಗೆ ಕೋರ್ಟ್ ನಿಂದ ನೊಟೀಸ್!

ನವದೆಹಲಿ : ಸನಾತನ ಧರ್ಮದ ಕುರಿತು ನೀಡಿ ವಿವಾದಕ್ಕೆ ಕಾರಣವಾಗಿದ್ದ ಡಿಎಂಕೆ ಸಚಿವ ಉದಯನಿಧಿ ಸ್ಟಾಲಿನ್‍ಗೆ ಸುಪ್ರೀಂ ಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡು ನೊಟೀಸ್ ನೀಡಿದೆ. ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್ (Udhayanidhi Stalin), ಸಿಬಿಐ, ಎ ರಾಜಾ ಸೇರಿದಂತೆ ಇನ್ನಿತರ ಪಕ್ಷಗಳಿಗೆ ಕೂಡ ನೊಟೀಸ್ ನೀಡಿದೆ. ಸನಾತನ ಧರ್ಮವನ್ನು ನಿರ್ಮೂಲನೆ ಮಾಡಿ ಎಂಬ ಹೇಳಿಕೆಗಾಗಿ ಉದಯನಿಧಿ ಸ್ಟಾಲಿನ್ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ನ್ಯಾಯಾಲಯ ನೊಟೀಸ್ ಜಾರಿ ಮಾಡಿದೆ. ಅರ್ಜಿದಾರರ ಮನವಿಯಲ್ಲಿ […]

Just In National

ಲೈಂಗಿಕತೆ ಇಲ್ಲದ ವಿವಾಹ ಅಪರಿಪೂರ್ಣ ಎಂದ ಅಭಿಪ್ರಾಯ ಪಟ್ಟ ಕೋರ್ಟ್!

ಸಂಗಾತಿಯೊಂದಿಗೆ ಲೈಂಗಿಕ ಸಂಬಂಧ ಹೊಂದಲು ಉದ್ಧೇಶಪೂರ್ವಕವಾಗಿ ನಿರಾಕರಿಸುವುದು ಕ್ರೂರತೆಯಾಗುತ್ತದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಮದುವೆಯಾದ 35 ದಿನಕ್ಕೆ ಬೇರೆ ಬೇರೆಯಾದ ದಂಪತಿಗೆ ವಿಚ್ಛೇತನ ನೀಡಿದ್ದನ್ನು ಎತ್ತಿ ಹಿಡಿದ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ವಿಚ್ಛೇದನ ನೀಡಿದ್ದ ಕೌಟುಂಬಿಕ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈತ್ ನೇತೃತ್ವದ ನ್ಯಾಯಪೀಠವು ತಿರಸ್ಕರಿಸಿದೆ. ಈ ಸಂದರ್ಭದಲ್ಲಿ ಲೈಂಗಿಕತೆ ಇಲ್ಲದ ವಿವಾಹ ಸಂಬಂಧ ಅಸಹನೀಯ. ಲೈಂಗಿಕ ಸಂಬಂಧದ ಕುರಿತು ನಿರಾಶೆ ವೈವಾಹಿಕ ಸಂಬಂಧಕ್ಕೆ ಮಾರಕವಾಗುವಂತಹ ಬೇರೆ ವಿಷಯವೂ […]

Bengaluru Crime Just In Karnataka State

ಬೆಳ್ತಂಗಡಿ ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣ: 11 ವರ್ಷದ ಬಳಿಕ ಖುಲಾಸೆಯಾದ ಆರೋಪಿ

ಬೆಂಗಳೂರು: ಧರ್ಮಸ್ಥಳ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಬರೋಬ್ಬರಿ 11 ವರ್ಷವೇ ಕಳೆದಿದೆ. ಇದೀಗ ಬೆಂಗಳೂರಿನ ಸಿಬಿಐ ಕೋರ್ಟ್ ಹನ್ನೊಂದು ವರ್ಷಗಳ ನಂತರ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಯನ್ನ ಖುಲಾಸೆ ಮಾಡಿದೆ. ಆರೋಪಿ ಸಂತೋಷ ರಾವ್ ವಿರುದ್ದ ಸಲ್ಲಿಕೆ ಮಾಡಿದ್ದ ಸಾಕ್ಷಾಧಾರ ಕೊರತೆ ಇದೆ ಎನ್ನುವ ಕಾರಣಕ್ಕಾಗಿ ನ್ಯಾಯಾಲಯ ದೋಷಮುಕ್ತ ಮಾಡಿದೆ. ಹನ್ನೊಂದು ವರ್ಷಗಳ ಹಿಂದೆ ಎಸ್ ಡಿಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯಳನ್ನ ಅಪಹರಿಸಿ ಅತ್ಯಾಚಾರ ಮಾಡಿ ನಂತರ ಕೊಲೆ ಮಾಡಲಾಗಿತ್ತು. […]

Just In National

ಹುಷಾರ್..! ಮಹಿಳೆಯರಿಗೆ ಒಳ್ಳೆ ಫಿಗರ್ ಅಂದ್ರೆ ಜೈಲು ಗ್ಯಾರಂಟಿ!

ಮಹಿಳಾ ಉದ್ಯೋಗಿಗಳಿಗೆ, ಸ್ನೇಹಿತೆಯರಿಗೆ, ಮಹಿಳೆಯರಿಗೆ ‘ನೀನು ಒಳ್ಳೆಯ ಫಿಗರ್‌ ಇದ್ದೀಯಾ, ಉತ್ತಮವಾಗಿ ಫಿಗರ್‌ ಮೇಂಟೇನ್‌ ಮಾಡಿದ್ದೀಯಾ, ನಮ್ಮೊಂದಿಗೆ ಆಚೆ ಬರುತ್ತೀಯಾ?’ ಎಂದು ಮಾತನಾಡುವುದು ಲೈಂಗಿಕ ಕಿರುಕುಳಕ್ಕೆ ಸಮ ಎಂದು ಸೆಷನ್ಸ್‌ ಕೋರ್ಟ್ ಹೇಳಿದೆ. ರಿಯಲ್‌ ಎಸ್ಟೇಟ್‌ ಸಂಸ್ಥೆಯೊಂದರ ಕಚೇರಿಯಲ್ಲಿ ಅಸಿಸ್ಟಂಟ್‌ ಮ್ಯಾನೇಜರ್‌ ಆಗಿದ್ದ 42 ವರ್ಷದ ಪುರುಷನೊಬ್ಬ ಈ ರೀತಿಯ ಪದಗಳನ್ನು ಮಹಿಳೆಗೆ ಬಳಸಿದ್ದ. ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಹೀಗಾಗಿ ಆತನಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಕೋರ್ಟ್, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ಹೀಗಾಗಿ […]

Crime Just In Karnataka State

ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದವನಿಗೆ ಗಲ್ಲು ಶಿಕ್ಷೆ!

Vijyapur : ಪಾಪಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಪಕ್ಕದ ಮನೆಯಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾನೆ.ಗಲ್ಲು ಶಿಕ್ಷೆಗೆ ಒಳಗಾಗಿರುವ ವ್ಯಕ್ತಿ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಲ್ಲದೇ, ಪೆಟ್ರೋಲ್ ಸುರಿದು ಹತ್ಯೆ ಮಾಡಿದ್ದ. ಹೀಗಾಗಿ ಜಿಲ್ಲಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿದೆ. 2018 ಜನೇವರಿ 27 ರಂದು ಸಿಂದಗಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಕಟನೂರು ಗ್ರಾಮದಲ್ಲಿ ಮೂತ್ರ ವಿಸರ್ಜನೆ ಮಾಡುವ ವಿಷಯದಲ್ಲಿ ಶಮಶಾದ್ ಮಕಾನದಾರ ಹಾಗೂ ಅಕ್ಬರಬಾಷಾ ಬಾಗವಾನ ಮಧ್ಯೆ ಜಗಳ ನಡೆದಿತ್ತು. ಜಗಳವಾದ ನಂತರ ಸಂಜೆ ಶಮಶಾದ […]

International Just In

Imran khan: ಪಾಕ್ ನಲ್ಲಿ ಉದ್ವಿಗ್ನ ವಾತಾವರಣ; ಪಾಕ್ ಸೇನಾ ಕಚೇರಿಯ ಮೇಲೆ ದಾಳಿ!

ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರನ್ನುಭ್ರಷ್ಟಾಚಾರ ವಿರೋಧಿ ಸಂಸ್ಥೆ (Anti-corruption agency) ಬಂಧಿಸಿರುವುದನ್ನು ಖಂಡಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇಸ್ಲಾಮಾಬಾದ್‌ನ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಆವರಣದಲ್ಲಿ ಖಾನ್‌ರನ್ನು ಬಂಧಿಸಿರುವುದನ್ನು ವಿವರಿಸಲು ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಬಂಧಿಸಿದ್ದರ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ನೂರಾರು ಬೆಂಬಲಿಗರು ಲಾಹೋರ್‌ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, ಬಂದರು ನಗರವಾದ ಕರಾಚಿಯಲ್ಲಿ ಪ್ರತಿಭಟನಾಕಾರರು ಪ್ರಮುಖ ರಸ್ತೆಯನ್ನು ತಡೆದಿದ್ದಾರೆ. ಪಿಟಿಐ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಪ್ರಧಾನ […]

Crime Just In National Uttar Pradesh

Crime News: ಪಬ್ ಜಿ ಆಡಬೇಡ ಎಂದಿದ್ದ ತಾಯಿ ಕೊಲೆ ಮಾಡಿದ್ದ ಆರೋಪ ಹೊತ್ತಿದ್ದ ಮಗನಿಗೆ ಜಾಮೀನು!

ಲಕ್ನೋ: ಪಬ್ ಜಿ ಆಡಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನೇ ಕೊಲೆ ಮಾಡಿದ್ದ ಅಪ್ರಾಪ್ತ ಮಗನಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ತಂದೆಯ ಲೈಸೆನ್ಸ್ ಹೊಂದಿದ್ದ ಪಿಸ್ತೂಲ್ (Pistol) ಬಳಸಿ ತಾಯಿ ಅಪ್ರಾಪ್ತ ಮಗ ಕೊಲೆ ಮಾಡಿದ್ದ. ಸದ್ಯ ಆರೋಪಿಗೆ ಅಲಹಾಬಾದ್ ಹೈಕೋರ್ಟ್ (Allahabad High Court) ಜಾಮೀನು (Bail) ಮಂಜೂರು ಮಾಡಿದೆ. ಆರೋಪಿಯು ಅಪ್ರಾಪ್ತನಾಗಿದ್ದು, ಘಟನೆಗೆ ಪ್ರತ್ಯಕ್ಷ ಸಾಕ್ಷಿಗಳಿಲ್ಲ ಎಂದು ಪರಿಗಣಿಸಿದ ನ್ಯಾಯಮೂರ್ತಿ ಪ್ರಕಾಶ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಜಾಮೀನು ನೀಡಿದೆ. ಯಾವ […]

Just In National

Breaking News: ಪತಿ- ಪತ್ನಿ ಪರಸ್ಪರ ಒಪ್ಪಿಗೆ ಇದ್ದರೆ ಸಾಕು, ಬೇಗ ಡಿವೋರ್ಸ್ ಸಿಗಲಿದೆ!

NewDelhi : ಪತಿ- ಪತ್ನಿಯ ಮಧ್ಯೆ ವಿಚ್ಛೇದನ(Divorce)ಕ್ಕಾಗಿ ಪರಸ್ಪರ ಒಪ್ಪಿಗೆ ಇದ್ದರೆ, ಆರು ತಿಂಗಳ ಕಡ್ಡಾಯವಾಗಿ ಕಾಯುವ ಅಗತ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಮಹತ್ವದ ತೀರ್ಪು ಪ್ರಕಟಿಸಿದೆ. ಪತಿ ಹಾಗೂ ಪತ್ನಿಯ ಒಪ್ಪಿಗೆ ಇದ್ದಾಗ ಕೌಟುಂಬಿಕ ನ್ಯಾಯಾಲಯ ಒಪ್ಪಿಸದೆ ಮದುವೆ ರದ್ದು ಮಾಡಬಹುದು ಎಂದು ಸುಪ್ರೀಂ ಕೋರ್ಟ್ ಆದೇಶ ಪ್ರಕಟಿಸಿದೆ. ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್, ಸಂಜೀವ್ ಖನ್ನಾ, ಎಎಸ್ ಓಕಾ, ವಿಕ್ರಮ್ ನಾಥ್ ಮತ್ತು ಜೆಕೆ ಮಹೇಶ್ವರಿ ಅವರನ್ನು ಒಳಗೊಂಡ ಸಂವಿಧಾನಿಕ ಪೀಠ […]

Crime Entertainment Just In National

Bollywood News: ನಟಿ ರಾಖಿ ಸಾವಂತ್ ಲಿಪ್ ಕಿಸ್ ಪ್ರಕರಣ ಎಲ್ಲಿಗೆ ಬಂತು?

Mumbai: ಬರೋಬ್ಬರಿ 17 ವರ್ಷಗಳ ಹಿಂದೆ ಬಾಲಿವುಡ (Bollywood) ಗಾಯಕ ಮಿಕಾ ಸಿಂಗ್ (Mika Singh) ನಟಿ ರಾಖಿ ಸಾವಂತ್ (Rakhi Sawant)ಗೆ ಹುಟ್ಟು ಹಬ್ಬದ ಸಂದರ್ಭದಲ್ಲಿ ಸಾರ್ವಜನಿಕವಾಗಿ ಬಲವಂತವಾಗಿ ಲಿಪ್ ಕಿಸ್ ಮಾಡಿದ್ದರು. ಇದು ದೊಡ್ಡ ಸುದ್ದಿಗೆ ಕಾರಣವಾಗಿತ್ತು. ಈ ಸಂದರ್ಭದಲ್ಲಿ ರಾಖಿ ಸಾವಂತ್ ಕೋರ್ಟ್ ಮೊರೆ ಹೋಗಿದ್ದರು. ಸದ್ಯ ಈಗ ಬಾಂಬೆ ಹೈಕೋರ್ಟ್ ಮೊರೆಗೆ ಹೋಗಲಾಗಿದೆ. ಸದಾ ಒಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿರುವ ಬಾಲಿವುಡ್ ನಟಿ ರಾಖಿ ಸಾವಂತ್, ಈಗ ತಮ್ಮದಲ್ಲದ ತಪ್ಪಿಗೆ ಸುದ್ದಿಯಾಗಿದ್ದಾರೆ. ಲಿಪ್ […]