IPL 2023: ಕೆಕೆಆರ್ ವಿರುದ್ಧ ಸತತ ಎರಡೂ ಪಂದ್ಯಗಳಲ್ಲಿ ಸೋಲು ಕಂಡ ಬೆಂಗಳೂರು!
Bangalore : ಬ್ಯಾಟ್ಸಮನ್ ಗಳ ವೈಫಲ್ಯ, ಕಳಪೆ ಫೀಲ್ಡಿಂಗ್ ನಿಂದಾಗಿ ಕೋಲ್ಕತ್ತಾ ನೈಟ್ ರೈಡರ್ಸ್ (Kolkata Knight Riders) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಮತ್ತೊಂದು ಸೋಲು ಕಂಡಿದೆ. ಆರ್ ಸಿಬಿ ವಿರುದ್ಧ 21 ರನ್ ಗಳಿಂದ ಗೆದ್ದ ಕೋಲ್ಕತ್ತಾ ಈ ಆವೃತ್ತಿಯಲ್ಲಿ ಮೂರನೇ ಜಯ ದಾಖಲಿಸಿದೆ. ಗೆಲ್ಲಲು 201 ರನ್ ಗಳ ಕಠಿಣ ಗುರಿ ಬೆನ್ನಟ್ಟಿದ್ದ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 179 ರನ್ ಗಳನ್ನು ಮಾತ್ರ ಗಳಿಸಿ ಸೋಲು ಅನುಭವಿಸಿತು. […]









