Ravindra Jadeja: ಮೈದಾನದಲ್ಲಿಯೇ ಪತಿಯ ಕಾಲು ಮುಗಿದ ಪತ್ನಿ!
ಅಹಮದಾಬಾದ್ : ಗುಜರಾತ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಜಯ ಸಾಧಿಸಿ, ಐದನೇ ಬಾರಿಗೆ ಟ್ರೋಫಿಗೆ ಮುತ್ತಿಕ್ಕಿದೆ. ಈ ಪಂದ್ಯದಲ್ಲಿ ಜಡೇಜಾ ಆಟ ಅದ್ಭುತವಾಗಿತ್ತು. ಕೊನೆಯ ಓವರ್ ನಲ್ಲಿ ನಡೆಸಿದ ದಿಟ್ಟ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್-16ರ ಚಾಂಪಿಯನ್ ಆಗಿದೆ. ಸದ್ಯ ಜಡೇಜಾ ಕುಟುಂಬದ ಬಗ್ಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಜಡೇಜಾ ಪತ್ನಿಯ ಸಂಭ್ರಮಾಚರಣೆಯ ಫೋಟೋ,ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಚೆನ್ನೈ ಗೆಲುವು ಸಾಧಿಸುತ್ತಿದ್ದಂತೆ […]