ಜೈಲು ಗೋಡೆ ಜಿಗಿದು ಪರಾರಿಯಾದವ 24 ಗಂಟೆಗಳಲ್ಲಿ ಅಂದರ್!
ಜೈಲಿನಿಂದ ತಪ್ಪಿಸಿಕೊಳ್ಳುವುದಕ್ಕಾಗಿ 40 ಅಡಿ ಬೃಹತ್ ಗೋಡೆ ಹಾರಿ ಪರಾರಿಯಾಗಿದ್ದ ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿದ್ದ ಆರೋಪಿಯೊಬ್ಬನನ್ನು ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ. ದಾವಣಗೆರೆ ಜೈಲಿನಿಂದ ತಪ್ಪಿಸಿಕೊಳ್ಳಲು 40 ಅಡಿ ಗಡಿ ಗೋಡೆ ಹಾರಿ ಆತ ಪರಾರಿಯಾಗಿದ್ದ. ಈ ದೃಶ್ಯ ಉಪ ಕಾರಾಗೃಹದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಅತ್ಯಾಚಾರದ ಆರೋಪವನ್ನು ಎದುರಿಸುತ್ತಿರುವ 23 ವರ್ಷದ ಕೈದಿ ವಸಂತ್ ಎಂಬಾತನೇ ಪರಾರಿಯಾಗಿದ್ದ.ಗೋಡೆ ಜಿಗಿದಾಗ ಆರೋಪಿಯ ಕಾಲಿಗೆ ಪೆಟ್ಟುಬಿದ್ದರೂ, ಅಲ್ಲಿಂದ ಆತ ಪರಾರಿಯಾಗಿದ್ದ. ನಂತರ ದುಗ್ಗಾವತಿಯ ಸಂಬಂಧಿಕರ ಮನೆಯೊಂದರಲ್ಲಿ ಅಡಗಿ ಕುಳಿತಿದ್ದ. ಆದರೆ, […]