Kornersite

Bengaluru Entertainment Gossip Just In Karnataka Mix Masala Sandalwood

ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನಕ್ಕೆ ಗಣ್ಯರ ಸಂತಾಪ

ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿನ್ನೆ ಥೈಲೈಂಡ್ ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸ್ಪಂದನಾ ಅವರ ಸಾವಿಗೆ ಸಿನಿಮಾ, ರಾಜಕೀಯ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ನಡುವೆ ಸ್ಪಂದನಾ ತೂಕ ಇಳಿಸುವ ಪ್ರಯತ್ನದಲ್ಲಿ ಇದ್ದರು. ಇದೇ ಹೇದಯಾಘಾತಕ್ಕೆ ಕಾರಣವಾಯ್ತಾ ಅನ್ನೋ ಅನುಮಾನ ಕಾಡ್ತಾ ಇದೆ. ಇತ್ತೀಚೆಗೆ ಸ್ಪಂದನಾ ಬರೋಬ್ಬರಿ 16 ಕೆ.ಜಿ ತೂಕವನ್ನು ಇಳಿಸಿಕೊಂಡಿದ್ದರು. ‘ಕನ್ನಡದ ಖ್ಯಾತ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಕಾಲಿಕ ನಿಧನದ ವಾರ್ತೆ ಆಘಾತವನ್ನುಂಟುಮಾಡಿದೆ. ಮೃತರ […]

Bengaluru Entertainment Gossip Just In Karnataka Mix Masala Sandalwood

Breaking News: ನಟ ವಿಜಯರಾಘವೇಂದ್ರ ಪತ್ನಿ ಹೃದಯಾಘಾತದಿಂದ ಸಾವು

ಸ್ಯಾಂಡಲ್ ವುಡ್ ಖ್ಯಾತ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕುಟುಂಬದವರು ಹಾಗೂ ಸ್ನೇಹಿತರೊಂದಿಗೆ ಬ್ಯಾಂಕಾಕ್ ಗೆ ಹೋಗಿದ್ದರು. ನಿನ್ನೆ ಶಾಪಿಂಗ್ ಮುಗಿಸಿ ರೂಂಗೆ ಹೋಗುವಾಗ ಈ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯಲ್ಲೇ ಸ್ಪಂದನಾ ಕೊನೆಯುಸಿರೆಳೆದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 2007ರಲ್ಲಿ ವಿಜಯ್ ರಾಘವೇಂದ್ರ ಅವರು ಸ್ಪಂದನಾರನ್ನ ಪ್ರೀತಿಸಿ ಮದುವೆಯಾಗಿದ್ದರು. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ […]

Just In National

INS ವಿಕ್ರಾಂತ್ ಹಡಗಿನಲ್ಲಿ ಯೋಧನ ಮೃತ ದೇಹ ಪತ್ತೆ!

ಯುದ್ದ ನೌಕೆ INS ವಿಕ್ರಾಂತ್ ಹಡಗಿನಲ್ಲಿ ಯೋಧನ ಶವ ಪತ್ತೆಯಾಗಿದೆ. ಅದರಲ್ಲೂ ವಿಚಿತ್ರ ಅಂದ್ರೆ ನೇಣು ಬಿಗಿದ ಸ್ಥಿತಿಯಲ್ಲಿ ಭಾರತೀಯ ನೌಕ ದಳದ ನಾವಿಕನ ಶವ ಪತ್ತೆಯಾಗಿದೆ. ಮೃತ ನಾವಿಕನ ಗುರುತು ಇನ್ನು ಕೂಡ ಬಹಿರಂಗ ಪಡಿಸಿಲ್ಲ. ಆದರೆ 19 ವರ್ಷದ ಬಿಹಾರ ಮೂಲದವನು ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕಂಡುಬಂದರೂ ಕೂಡ ಕೂಲಂಕುಶವಾಗಿ ತನಿಖೆ ನಡೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Crime Just In National

ಸ್ವಾತಂತ್ಯ ಹೋರಾಟಗಾರನ ಪತ್ನಿಯ ಜೀವಂತ ದಹನ!

ಸಾತಂತ್ರ್ಯ ಹೋರಾಟಗಾರರ 80 ವರ್ಷದ ಪತ್ನಿಯನ್ನು ಜೀವಂತವಾಗಿ ಸುಟ್ಟ್ ಭಯಾನಕ ಘಟನೆ ಮಣಿಪುರದ ಸೆರೋ ಗ್ರಾಮದಲ್ಲಿ ನಡೆದಿದೆ. ಸ್ವಾತಂತ್ಯ ಹೋತಾಟಗಾರರ ಪತ್ನಿ ಮನೆಯೊಳಗೆ ಇದ್ದಾಗ, ಹೊರಗಡೆಯಿಂದ ಬೆಂಕಿ ಹಾಕಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಸ್ವಾತಂತ್ಯ ಹೋರಾಟಗಾರ ಎಸ್, ಚುರಚಂದ್ ಅವರ ಪತ್ನಿಯನ್ನೇ ದುಷ್ಕರ್ಮಿಗಳು ಭಯಾನಕವಾಗಿ ಕೊಲೆ ಮಾಡಿದ್ದು. ಈ ಹಿಂದೆ ಚುರಚಂದ್ ಅವರನ್ನು ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ಗೌರವಿಸಿದ್ದರು. ಈ ಬಗ್ಗೆ ವರದಿ ಕೂಡ ಆಗಿತ್ತು. ಇಂತಹ ಹೋರಾಟಗಾರರ ಪತ್ನಿಗೆ ಈ ರೀತಿ […]

Crime Just In Karnataka State

ಧರ್ಮಸ್ಥಳದಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಸೌಜನ್ಯಳ ಕಥೆ; ತೆರೆಯ ಮೇಲೆ ತರಲು ಸಿದ್ಧತೆ

ಸ್ಯಾಂಡಲ್ ವುಡ್ ನಲ್ಲಿ ನೈಜ ಘಟನೆ ಆಧಾರಿತ ಸಾಕಷ್ಟು ಚಿತ್ರಗಳು ಮೂಡಿ ಬಂದಿವೆ. ಈ ಮಧ್ಯೆ ಅತ್ಯಾಚಾರ ಹಾಗೂ ಕೊಲೆಗೆ ಬಲಿಯಾಗಿರುವ ಯುವತಿಯ ಕುರಿತು ಚಿತ್ರವೊಂದು ಬರಲು ಸಿದ್ಧವಾಗುತ್ತಿದೆ. ಇತ್ತೀಚೆಗೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಧರ್ಮಸ್ಥಳದ (Dharmasthala) ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಈಗ ಚಿತ್ರ ರೂಪ ಪಡೆಯುತ್ತಿದೆ. 2012ರಲ್ಲಿ ಉಜಿರೆ ಎಸ್.ಡಿ.ಎಂ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅವರನ್ನು ಅಕ್ಟೋಬರ್ 9ರಂದು ಅಪಹರಿಸಲಾಗಿತ್ತು. ಅಂದೇ ಕಾಣೆಯಾದ ಕುರಿತು ದೂರು ಕೂಡ ದಾಖಲಾಗಿತ್ತು. ಆದರೆ, […]

International Just In National

ಮೆದುಳು ತಿನ್ನುವ ಅಮೀಬಾ ಸೋಂಕಿಗೆ 2 ವರ್ಷದ ಮಗು ಬಲಿ!

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಇತ್ತೀಚೆಗೆ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿವೆ. ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಈ ಸೋಂಕಿನಿಂದ ಸಾವನ್ನಪ್ಪಿದ ಪ್ರಕರಣ ಇತ್ತೀಚೆಗಷ್ಟೇ ಬೆಳಕಿಗೆ ಬಂದಿತ್ತು. ಸದ್ಯ ಇದೇ ಪ್ರಕರಣ ಮತ್ತೊಂದು ನಡೆದಿದೆ. ಅಮೆರಿಕಾದ ನೆವಾಡಾದ ಎರಡು ವರ್ಷದ ಮಗು ಕೆಲವು ದಿನಗಳಿಂದ ವಿಪರೀತ ಜ್ವರದಿಂದ ಬಳಲುತ್ತಿದ್ದ ಎಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಗು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು, ಮಗುವಿನ ತಾಯಿ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ನ್ಯೂಯಾರ್ಕ್ ಪೋಸ್ಟ್ ಪ್ರಕಾರ, […]

Crime Just In State

ಮನೆಯಿಂದ ಹೊರಗೆ ಬಂದಿದ್ದ ರೌಡಿಶೀಟರ್ ಹತ್ಯೆ!

ಶಿವಮೊಗ್ಗ: ಮಧ್ಯರಾತ್ರಿ ಸಂದರ್ಭದಲ್ಲಿ ರೌಡಿಶೀಟರ್ ಒಬ್ಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ನಡೆದಿದೆ. ಜಿಲ್ಲೆಯ ಭದ್ರಾವತಿ(Bhadravati) ಯ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ರೌಡಿಶೀಟರ್ ಮುಜಾಯಿದ್ದೀನ್(32) ಕೊಲೆಯಾಗಿರುವ ವ್ಯಕ್ತಿ. ಜುಲೈ 20ರಂದು ಮಧ್ಯರಾತ್ರಿ ಸುಮಾರು 12.30ರ ವೇಳೆಗೆ ಈ ಘಟನೆ ನಡೆದಿದೆ. ಮೃತ ರೌಡಿಶೀಟರ್ ಮನೆಯಿಂದ ಹೊರಗೆ ಬಂದಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಮುಜಾಯಿದ್ದೀನ್ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಸ್ಥಳಕ್ಕೆ ಪೇಪರ್ಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನೆಡೆಸಿದ್ದು, ಕೃತ್ಯಕ್ಕೆ […]

Crime Just In National

ಜನರ ಗುಂಪಿನ ಮೇಲೆಯೇ ಕಾರು ಹಾಯಿಸಿದ ಚಾಲಕ; 9 ಜನ ಬಲಿ, 13 ಜನರ ಸ್ಥಿತಿ ಗಂಭೀರ!

ಹಮದಾಬಾದ್ : ಕಾರು ಚಾಲಕನ ಹುಚ್ಚಾಟಕ್ಕೆ 9 ಜನ ಸಾವನ್ನಪ್ಪಿ, 13 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ. ಸರ್ಖೇಜ್-ಗಾಂಧಿನಗರ ಹೆದ್ದಾರಿಯ ಇಸ್ಕಾನ್ ದೇವಸ್ಥಾನದ (ISKCON Temple) ಹತ್ತಿರದ ಮೇಲ್ಸೇತುವೆಯಲ್ಲಿ ಈ ಘಟನೆ ಸಂಭವಿಸಿದೆ. ಈ ಘಟನೆ ಮಧ್ಯರಾತ್ರಿ ಸುಮಾರು 1 ಗಂಟೆಯ ವೇಳೆಗೆ ಜರುಗಿದೆ. ಪರಿಣಾಮ 9 ಜನ ಸಾವನ್ನಪ್ಪಿದ್ದಾರೆ. ಈ ಗುರುವಾರ ಸಂಭವಿಸಿದ ಅಪಘಾತದಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಹಿಟ್‌ ಅಂಡ್‌ ರನ್‌ (Hit and Run) ಅಡಿ ಪ್ರಕರಣವನ್ನು ಪೊಲೀಸರು […]

Crime Just In National

ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು ಪೊಲೀಸರು ಸೇರಿ 16 ಜನರ ಬಲಿ!

ಉತ್ತರಾಖಂಡ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಟ್ರಾನ್ಸ್ ಫಾರ್ಮರ್ ಸ್ಪೋಟಗೊಂಡು, ಹೈಟೆನ್ಶನ್ ತಂತಿ ಬಿದ್ದ ಪರಿಣಾಮ 16 ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಆರು ಜನರಿಗೆ ತೀವ್ರವಾದ ಗಾಯಗಳಾಗಿವೆ. ಈ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಸದ್ಯದ ಮಾಹಿತಿ ಪ್ರಕಾರ ಓರ್ವ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಹಾಗೂ ಮೂವರು ಗೃಹರಕ್ಷಕ ದಳದ ಸಿಬ್ಬಂದಿ ಸಹ ಬಲಿಯಾಗಿದ್ದಾರೆ. ಬಾಕಿ ಎಲ್ಲ ಮೃತರು ನಮಾಮಿ ಗಂಗೆ ಯೋಜನೆಯ ಸ್ಥಳದಲ್ಲಿ ಕೆಲಸ ಮಾಡುವವರು. ಇನ್ನು ಘಟನೆಯ ಬಗ್ಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

Just In Politics State

ಕೇರಳ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ

ಚಿಕಿತ್ಸೆ ಫಲಕಾರಿಯಾಗದೇ ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. 80 ವರ್ಷ ವಯಸ್ಸಿನ ಚಾಂಡಿ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸುದ್ದಿಯನ್ನು ಕೇರಳ ಕಾಂಗ್ರೆಸ್ ರಾಜ್ಯಾಧ್ಯಕ್ಷ ಕೆ. ನಟರಾಜನ್ ಟ್ವಿಟರ್ ಮೂಲಕ ಖಚಿತಪಡಿಸಿದ್ದಾರೆ. ಉಮ್ಮನ್ ಚಾಂಡಿ ನಿಧನಕ್ಕೆ ಕೇರಳದ ಹಾಲಿ ಸಿಎಂ ಪಿಣರಾಯಿ ವಿಜಯನ್ ಟ್ವಿಟ್ ಮೂಲಕ ಸಂತಾಪ ಸೂಚಿಸಿದ್ದಾರೆ. ಉಮ್ಮನ್ ಚಾಂಡಿ ಚಿಕಿತ್ಸೆ ಫಲಕಾರಿಯಾಗದೇ ಬೆಳಗಿನ ಜಾವ 4.25ಕ್ಕೆ ಆಸ್ಪತ್ರೆಯಲ್ಲಿ […]