Kornersite

Crime Just In National Uttar Pradesh

ಸ್ನೇಹಿತನ ಚಿತೆಗೆ ಹಾರಿ ಪ್ರಾಣ ಬಿಟ್ಟ ವ್ಯಕ್ತಿ; ಸಾವಿನಲ್ಲಿ ಒಂದಾದ ಸ್ನೇಹಿತರು!

ಸ್ನೇಹ ಎನ್ನುವುದು ಎಲ್ಲಕ್ಕಿಂತ ಮಿಗಿಲಾದುದು, ಒಮ್ಮೊಮ್ಮೆ ಅದು ಸಂಬಂಧಿಗಳಿಗಿಂತಲೂ ಮಿಗಿಲು ಎನ್ನುತ್ತಾರೆ. ಕಷ್ಟಕ್ಕೆ ಆಗುವ ಇನ್ನೊಂದು ಸಂಬಂಧವೇ ಸ್ನೇಹ ಎನ್ನುತ್ತಾರೆ. ಸದ್ಯ ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಕ್ಯಾನ್ಸರ್ ನಿಂದಾಗಿ ಸಾವನ್ನಪ್ಪಿದ್ದರು. ಯಮುನಾ ನದಿಯ ತಟದಲ್ಲಿ ಅಂತ್ಯಕ್ರಿಯೆ ನೆರವೇರುತ್ತಿತ್ತು. ಆ ಸಂದರ್ಭದಲ್ಲಿ ದುಃಖ ತಾಳಲಾರದೆ ಅವರ ಸ್ನೇಹಿತ ಕೂಡ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಶೋಕ್(42) ಕ್ಯಾನ್ಸರ್ನಿಂದಾಗಿ ಶನಿವಾರ ಸಾವನ್ನಪ್ಪಿದ್ದರು ಎಂದು ಪೊಲೀಸ್ ಅಧಿಕಾರಿಗಳು […]

Bengaluru Just In Karnataka Politics State

13 ಜನರನ್ನು ಬಲಿ ಪಡೆದ ಮಳೆರಾಯ; ಇಲ್ಲಿ ಜನ- ಜೀವನ ಸಂಪೂರ್ಣ ಅಸ್ತವ್ಯಸ್ಥ!

ಜೈಪುರ: ರಾಜಸ್ಥಾನದಲ್ಲಿ (Rajasthan) ಕಳೆದ ಎರಡು ವಾರಗಳಿಂದ ಭರ್ಜರಿಯಾಗಿ ಮಳೆ (Rain) ಹಾಗೂ ಚಂಡಮಾರುತದ (Thunderstorms) ಬೀಸಿದ್ದು, ಇಲ್ಲಿಯವರೆಗೆ 13 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಪೂರ್ವ ರಾಜಸ್ಥಾನದ ಪ್ರತ್ಯೇಕ ಸ್ಥಳಗಳಲ್ಲಿ ಹೆಚ್ಚಿನ ಮಳೆಯಾಗಿದ್ದು, ರಾಜ್ಯದ ವಿವಿಧೆಡೆ ಗುಡುಗು ಸಹಿತ ಬಿರುಗಾಳಿ ಬೀಸಿದೆ. ಕೇವಲ ಎರಡು ದಿನಗಳಲ್ಲಿ 13 ಜನ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ. ಅಲ್ಲಿಯ ಟೋಂಕ್ ನಲ್ಲಯೇ 10 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.ಭಿಲ್ವಾರದ ಮಂಡಲ್‌ನಲ್ಲಿ 11 ಸೆಂ.ಮೀ ಮಳೆಯಾಗಿದ್ದು, ಹನುಮಾನ್‌ಗಢದ ರಾವತ್ಸರ್‌ನಲ್ಲಿ 6 […]

Just In Sports

Hyderabad: ಪತಿ ಅಮೆರಿಕದಲ್ಲಿ ಸಾವು; ನೋವಿನಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

Hyderabad : ಪತಿ ಅಮೆರಿಕದಲ್ಲಿ ಹಾಗೂ ಪತ್ನಿ ಭಾರತದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸಾಹಿತಿ (29) ಸಾವನ್ನಪ್ಪಿದ್ದರೆ, ಮನೋಜ್(31) ಅಮೆರಿಕದಲ್ಲಿ ಸಾವನ್ನಪ್ಪಿರುವ ಪತಿಯಾಗಿದ್ದಾರೆ. ಸಾಹಿತಿಯು ಹೈದರಾಬಾದ್ ನ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿಯಾಗಿದ್ದು, ಕಳೆದ, ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮನೋಜ್ ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು. ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಈ ತಿಂಗಳು ಅಮೆರಿಕದಿಂದ ಬಂದಿದ್ದರು. ಮನೋಜ್ […]

Crime Just In National

Crime News: ಸಂಬಂಧಿಕರಿಂದಲೇ ಇಬ್ಬರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರ ಬರ್ಬರ ಹತ್ಯೆ!

ಒಂದೇ ಕುಟುಂಬದ ನಾಲ್ವರನ್ನು ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಘಟನೆ ಒಡಿಶಾದ ಬರ್ಬಢದಲ್ಲಿ ನಡೆದಿದೆ.ಘಟನೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಸೋದರ ಸಂಬಂಧಿಗಳೇ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಮೃತರನ್ನು ಗುರುದೇವ್ ಬಾಗ್, ಅವರ ಪತ್ನಿ ಸಿಬಗ್ರಿ ಬಾಗ್, ಅವರ ಮಗ ಚೂಡಾಮಣಿ (15) ಮತ್ತು ಮಗಳು ಶ್ರಾವಣಿ (10) ಎಂದು ಗುರುತಿಸಲಾಗಿದೆ. ಆರೋಪಿಗಳು ಸಂತ್ರಸ್ಥರ ಮನೆಗೆ ನುಗ್ಗಿ ತಮ್ಮ ಸೋದರಳಿಯ, ಸೊಸೆ ಮತ್ತು ಅವರ ಮಗ ಮತ್ತು ಮಗಳಿಗೆ ಚಾಕುವಿನಿಂದ […]

Bollywood Crime Entertainment Just In

Actress: ಅಪಘಾತಕ್ಕೆ ಬಲಿಯಾದ ಯುವ ನಟಿ; ಯುವ ನಟಿಯ ಸಾವಿಗೆ ಕಂಗಾಲಾದ ಸೀರಿಯಲ್ ಲೋಕ!

ಹಿಂದಿಯ ‘ಸಾರಾಭಾಯ್ vs ಸಾರಾಭಾಯ್’ ಸೀರಿಯಲ್ ಮೂಲಕ ಫೇಮಸ್ ಆಗಿದ್ದ ನಟಿ ವೈಭವಿ ಉಪಾಧ್ಯಾಯ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಹಿಮಾಚಲ ಪ್ರದೇಶದಲ್ಲಿ ಈ ಅಪಘಾತ ಸಂಭವಿಸಿದ್ದು, ಮಂಗಳವಾರ ಈ ದುರ್ಘಟನೆ ನಡೆದಿದೆ. ತಿರುವಿನಲ್ಲಿ ಕಾರು ನಿಯಂತ್ರಣಕ್ಕೆ ಬರದೆ ಪಲ್ಟಿ ಆಗಿದೆ. ವೈಭವಿ ಉಪಾಧ್ಯಾಯ ಹಾಗೂ ಅವರ ಭಾವಿ ಪತಿ ಕಾರಿನಲ್ಲಿ ತೆರಳುತ್ತಿದ್ದರು. ಈ ಸಂದರ್ಭದಲ್ಲಿಯೇ ಈ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ವೈಭವಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ವೈಭವಿ ಶವವನ್ನು ಮುಂಬೈಗೆ ಕರೆತರಲಾಗುತ್ತಿದೆ. ಇಲ್ಲಿ ಅವರ ಅಂತ್ಯಕ್ರಿಯೆ ನಡೆಸಲು […]

Bengaluru Crime Just In Karnataka State

Crime News: ಮನೆಯ ಸೊಸೆ ತಂಬಾಕು ಕೇಳಿದ್ದಕ್ಕೆ ನಡೆಯು ಘೋರ ಘಟನೆ!

ರಾಯಚೂರು: ಪತ್ನಿ ತಂಬಾಕು ಕೇಳಿದ್ದಕ್ಕೆ ಉಂಟಾದ ಜಗಳದಿಂದ ಬೇಸತ್ತು ತಂದೆ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆ ಹಾರಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮುದಕಪ್ಪ (60), ಶಿವು (23), ಬಸವರಾಜ್ (20) ಸಾವನ್ನಪ್ಪಿದ್ದರು. ಶಿವು ಇತ್ತೀಚೆಗೆ ಪ್ರೀತಿಸಿ ಮದುವೆಯಾಗಿದ್ದ. ಈತನ ಪತ್ನಿ ತಂಬಾಕು ಕೇಳಿದ್ದಕ್ಕೆ ಮನೆಯಲ್ಲಿ ಜಗಳ ಆರಂಭವಾಗಿದೆ.ಕುಟುಂಬಸ್ಥರ ಎದುರೇ ಶಿವು ಪತ್ನಿ ಮಾಯಮ್ಮ ತಂಬಾಕು ಕೇಳಿದ್ದಾಳೆ. ಇದರಿಂದ ಇರಿಸು ಮುರಿಸು ಉಂಟಾಗಿ ಶಿವು ಪತ್ನಿಗೆ ಹೊಡೆದಿದ್ದಾನೆ. ಕೋಪಗೊಂಡ ಮಾಯಮ್ಮ ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮಾವ […]

Bengaluru Just In Karnataka State

Karnataka Rain: ರಾಜ್ಯದಲ್ಲಿ ಮಳೆಯಿಂದಾಗಿ ಇಲ್ಲಿಯವರೆಗೆ 52 ಜನ ಬಲಿ; ಅಪಾರ ಆಸ್ತಿ ಹಾನಿ!

ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯಿಂದಾಗಿ ಇಲ್ಲಿಯವರೆಗೆ 52 ಜನ ಸಾವನ್ನಪ್ಪಿದ್ದು, ಸಾಕಷ್ಟು ಪ್ರಮಾಣದಲ್ಲಿ ಆಸ್ತಿ ಪಾಸ್ತಿ, ಬೆಳೆ ಹಾನಿಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಅಲ್ಲದೇ, ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿತ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ಕರ್ತವ್ಯ ಲೋಪವೆಸಗಿದರೆ ಕ್ರಮ ಕಟ್ಟಿಟ್ಟ ಬುತ್ತಿ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ವಿಪತ್ತು ನಿರ್ವಹಣೆ ಕುರಿತು ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ […]

Crime Just In

Crime News: ಒಬ್ಬರ ರಕ್ಷಣೆಗೆ ಒಬ್ಬರು ಹೋಗಿ ನೀರಿನಲ್ಲಿ ಮುಳುಗಿ ಮೂವರು ಸಾವು;

ನೀರಿನಲ್ಲಿ ಆಟವಾಆಡುವಾಗ ಮುಳುಗಿ ಮೂವರು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನ ಭದ್ರಾ ಜಲಾಶಯದ ಬಲದಂಡೆ ಕಾಲುವೆಯಲ್ಲಿ ನಡೆದಿದೆ. ನೀರಿನಲ್ಲಿ ಆಟವಾಡುವಾಗ ಆಯಾ ತಪ್ಪಿ ಬಿದ್ದಿದ್ದು, ಒಬ್ಬರ ರಕ್ಷಣೆಗೆ ಮತ್ತೊಬ್ಬರು ಹೋದಾಗ ಮೂವರೂ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ರವಿ (31), ಅನನ್ಯ (17), ಶಾಮವೇಣಿ (16) ಸಾವನ್ನಪ್ಪಿರುವ ದುರ್ದೈವಿಗಳು. ರವಿ ಮೂಲತಃ ಲಕ್ಕವಳ್ಳಿ ನಿವಾಸಿ ಆಹಿದ್ದು, ಇನ್ನು ಅನನ್ಯ, ಶಾಮವೇಣಿ ರವಿಯ ಸಹೋದರಿಯರ ಮಕ್ಕಳು ಆಗಿದ್ದಾರೆ.ಅನನ್ಯ ಶಿವಮೊಗ್ಗ, ಶಾಮವೇಣಿ ನಂಜನಗೂಡಿನವರು ಎಂದು ತಿಳಿದುಬಂದಿದೆ. ಲಕ್ಕವಳ್ಳಿಗೆ ಸಂಬಂಧಿಕರ ಮನೆಗೆ ಬಂದಾಗ ಈ […]

Bengaluru Crime Just In Karnataka State

ನೀರು ತರಲು ನದಿಗೆ ಇಳಿದ ಬಾಲಕನನ್ನು ಎಳೆದೊಯ್ದ ಮೊಸಳೆ!

Raichur : ನೀರು ಕುಡಿಯುವುದಕ್ಕಾಗಿ ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಎಳೆದುಕೊಂಡು ಹೋದ ಘಟನೆ ತಾಲೂಕಿನ ಕುರವಕಲಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನವೀನ್(9) ಮೃತ ಬಾಲಕ. ಪೋಷಕರ ಜತೆ ನದಿ ಬಳಿ ಇರುವ ಜಮೀನಿಗೆ ನವೀನ್ ತೆರಳಿದ್ದ. ಈ ಸಂದರ್ಭದಲ್ಲಿ ಪೋಷಕರು ನದಿಗೆ ಹೋಗಿ ಕುಡಿಯಲು ನೀರು ತರಲು ಹೇಳಿದ್ದರು. ಹೀಗಾಗಿ ನವೀನ್ ಹಾಗೂ ಮತ್ತೊಬ್ಬ ಬಾಲಕ ನದಿಯಲ್ಲಿ ಇಳಿದಿದ್ದಾರೆ. ಬಾಟಲಿಗೆ ನೀರು ತುಂಬಿಸಲು ಮುಂದಾಗುತ್ತಿದ್ದಂತೆ ನವೀನ್ ಮೇಲೆ ಮೊಸಳೆ ದಾಳಿ ಮಾಡಿದೆ. ನವೀನ್ ಜತೆ ಇದ್ದ […]

Bengaluru Just In Karnataka State

ನಾರಾಯಣ ನೇತ್ರಾಲಯದ ಡಾ. ಭುಜಂಗ ಶೆಟ್ಟಿ ಹೃದಯಾಘಾತದಿಂದ ನಿಧನ

ಪ್ರಖ್ಯಾತ ವೈದ್ಯ, ನಾರಾಯಣ ನೇತ್ರಾಲಯದ ಡಾ.ಭುಜಂಗ ಶೆಟ್ಟಿ ನಿಧನರಾಗಿದ್ದಾರೆ. 69 ವಯಸ್ಸಿನ ಭುಜಂಗ ಶೆಟ್ಟಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಇಂದು ಆಸ್ಪತೆಗೆ ಎಂದಿನಂತೆ ಬಂದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಸಾಯಂಕಾಲ ಮನೆಗೆ ತೆರಳಿದ್ದಾರೆ. 6 ಗಂಟೆಗೆ ಸುಮಾರಿಗೆ ಹೃದಯಾಘಾತವಾಗಿದೆ. ಕೂಡಲೇ ಯಶವಂತಪುರದ ಕೋಲಂಬಿಯಾ ಏಷಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಭುಜಂಗ ಶೆಟ್ಟಿಯವರು ಬದುಕುಳಿಯಲಿಲ್ಲ. ಎಂದಿನಂತೆ ಇಂದು ಕೂಡ ರೋಗಿಗಳನ್ನ ತಪಾಸಣೆ ಮಾಡಿದ್ದಾರೆ. ಸಂಜೆ ಮನೆಗೆ ಹೋಗಿ ಜಿಮ್ ನಲ್ಲಿ ವ್ಯಾಯಾಮ ಮಾಡಿದ್ದಾರೆ. ಬಳಿಕ ಎದೆನೋವು ಕಾಣಿಸಿಕೊಂಡಿದೆ. ನಂತರ ತೀವ್ರ […]