Kornersite

Just In National

ಸಿಲಿಂಡರ್ ಬಳಕೆದಾರರಿಗೆ ಶಾಕ್; ಇಂದಿನಿಂದ ಸಿಲಿಂಡರ್ ದರ ಹೆಚ್ಚಳ!

ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯು ಅಕ್ಟೋಬರ್ 1ರಿಂದ ಮತ್ತೆ ಏರಿಕೆ ಕಂಡಿದೆ. 19 ಕೆ.ಜಿಗಳ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ದರವನ್ನು 209 ರೂ. ಗಳಷ್ಟು ಹೆಚ್ಚಿಸಲಾಗಿದೆ. ಆಗಸ್ಟ್ ಹಾಗೂ ಸೆಪ್ಟೆಂಬರ್‌ನಲ್ಲಿ ಸತತ ಎರಡು ಬಾರಿ ಅಂದಾಜು 250 ರೂ.ಇಳಿಕೆಯಾಗಿತ್ತು. ಈಗ ಮತ್ತೆ ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಏರಿಕೆಯಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್‌ಪಿಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯನ್ನು 1,522.50 ರೂ.ನಿಂದ 1,731.50 ರೂ. ಗೆ ಹೆಚ್ಚಿಸಲಾಗಿದೆ. ಮುಂಬೈನಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ […]

Just In National

ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ನಿಷೇಧ!

ದೆಹಲಿ : ದೆಹಲಿಯಲ್ಲಿ ಪಟಾಕಿ ಬಳಕೆ ನಿಷೇಧಿಸಲಾಗಿದೆ. ಅರವಿಂದ್ ಕೇಜ್ರಿವಾಲ್ (Delhi CM Arvind Kejriwal) ನೇತೃತ್ವದ ಸರ್ಕಾರ ಪಟಾಕಿ ಬಳಕೆ ನಿಷೇಧಿಸಿದ ಬೆನ್ನಲ್ಲಿಯೇ ಸುಪ್ರೀಂ ಕೋರ್ಟ್ (Supreme Court On Ban Crackers) ಬೆಂಬಲ ವ್ಯಕ್ತಪಡಿಸಿ, ಮಧ್ಯ ಪ್ರವೇಶಿಸಲು ನಿರಾಕರಿಸಿದೆ. ಬೇರಿಯಂ ಬಳಸಿ ತಯಾರಿಸುವ ಹಸಿರು ಪಟಾಕಿಗಳ ಬಳಕೆಗೆ ಕೋರಿ ಸಲ್ಲಿಸಿದ ಮನವಿಯನ್ನೂ ದೇಶದ ಅತ್ಯುನ್ನತ ಕೋರ್ಟ್ ತಿರಸ್ಕರಿಸಿ ಸಾರ್ವಜನಿಕರಿಗೆ ದೀಪಾವಳಿಯ ಶುಭಾಶಯ ಹೇಳಿದೆ. ರಾಜಧಾನಿಯಲ್ಲಿ ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಪರವಾನಗಿ ನೀಡದಂತೆ ಸುಪ್ರೀಂ ಕೋರ್ಟ್, […]

Just In Karnataka National

ಹೊಸ ಸಂಸತ್ ನಲ್ಲಿ ಶುರುವಾದ ಕಲಾಪ!

ಸಂಸತ್ತಿನ ವಿಶೇಷ ಅಧಿವೇಶನದ ಕಲಾಪಗಳು ಇಂದಿನ ಹೊಸ ಸಂಸತ್ ಕಟ್ಟಡದಲ್ಲಿಯೇ ನಡೆಯಲಿದ್ದು, ದೇಶವೇ ಕುತೂಹಲದಿಂದ ನೋಡುತ್ತಿದೆ. ನಿನ್ನೆಯಿಂದ ಸಂಸತ್ತಿನ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನ ಒಟ್ಟು 5 ದಿನಗಳ ಕಾಲ ನಡೆಯಲಿದ್ದು, ಹಲವು ಮಸೂದೆಗಳು ಮಂಡನೆಯಾಗಲಿವೆ. ಭಾರತದ 75 ವರ್ಷಗಳ ಪ್ರಜಾಪ್ರಭುತ್ವದ ಪಯಣದ ಕುರಿತು ನಿನ್ನೆ ಚರ್ಚೆಗಳು ನಡೆದಿದ್ದವು. ಪ್ರದಾನಿ ನರೇಂದ್ರ ಮೋದಿ ಅವರು ಹಲವಾರು ವಿಷಯಗಳ ಕುರಿತು ಮಾತನಾಡಿದ್ದರು. ಇಂದು ಮಧ್ಯಾಹ್ನ ನೂತನ ಸಂಸತ್ ಕಟ್ಟಡದಲ್ಲಿ ಕಲಾಪ ಆರಂಭವಾಗಲಿದೆ. ರಾಜ್ಯ ಸಭೆ ಕಲಾಪ ಮಧ್ಯಾಹ್ನ 2.15ಕ್ಕೆ […]

Crime Just In National

ಮದುವೆಯಾಗಬೇಕಿದ್ದ ವರನ ಬರ್ಬರ ಕೊಲೆ: ಇಬ್ಬರ ಬಂಧನ

ದೆಹಲಿ: ಮದುವೆ ಮನೆ ಸೂತಕದ ಮನೆಯಾಗಿದೆ. ಜುಲೈ 3 ರಂದು ಹಸಮಣೆ ಏರಬೇಕಾದವನು ರಕ್ತದ ಮಡುವಿನಲ್ಲಿ ಮಲಗಿದ್ದಾನೆ. ಹಳೆಯ ವೈಷಮ್ಯಕ್ಕೆ 22 ವರ್ಷದ ಯುವಕನನ್ನು ಇಬ್ಬರು ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಜುಲೈ 3 ರಂದು ಆಶಿಶ್ ಎನ್ನುವವನ ಮದುವೆಯಾಗಬೇಕಿತ್ತು. ಆದರೆ ಇಬ್ಬರು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕೊಲೆ ಮಾಡುವ ಜಾಗಕ್ಕೆ ಕರೆದುಕೊಂಡು ಹೋಗಿರುವುದು ಸಿಸಿಟಿಯಲ್ಲಿ ಕ್ಯಾಪ್ಚರ್ ಆಗಿದೆ ಎಂದು ಸಹೋದರಿ ತಮನ್ನಾ ತಿಳಿಸಿದ್ದಾಳೆ. ಇಬ್ಬ್ರು ಹುಡುಗರು ನನ್ನ ಅಣ್ಣನ ಶರ್ಟ್ ಎಳೆದು […]

Crime Just In National

ಸಹೋದರಿಯರಿಬ್ಬರಿಗೆ ಗುಂಡಿಕ್ಕಿ ಹತ್ಯೆ!

ಇಂದು ದೆಹಲಿಯ ನೈರುತ್ಯ ದೆಹಲಿಯ ಆರ್‌ಕೆ ಪುರಂ ಪ್ರದೇಶದಲ್ಲಿ ಇಬ್ಬರು ಮಹಿಳೆಯರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಲೆ ಮಾಡಿರುವ ಘಟನೆ ನಡೆದಿದೆ. ಅಲ್ಲದೇ, ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಕೂಡ ಬಂಧಿಸಿದ್ದಾರೆ. ಅಂಬೇಡ್ಕರ್ ಬಸ್ತಿಯಲ್ಲಿ ತನ್ನ ಸಹೋದರಿಯರ ಮೇಲೆ ಗುಂಡು ಹಾರಿಸಲಾಗಿದೆ ಎಂದು ಸಂತ್ರಸ್ತರ ಸಹೋದರ ಪೊಲೀಸರಿಗೆ ಕರೆ ನೀಡಿದ್ದ. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಗುಂಡೇಟು ತಿಂದಿದ್ದ ಇಬ್ಬರೂ ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟೊತ್ತಿಗಾಗಲೇ ಅವರೆಲ್ಲ ಸಾವನ್ನಪ್ಪಿದ್ದರು. ಮೃತರನ್ನು ಪಿಂಕಿ (30) ಮತ್ತು ಜ್ಯೋತಿ (29) […]

Crime Just In National

Crime News: ಪೆಟ್ಟಿಗೆಯಲ್ಲಿ ಶವವಾಗಿ ಪತ್ತೆಯಾದ ಮಕ್ಕಳು; ಭಯಾನಕ ಘಟನೆಗೆ ಬೆಚ್ಚಿಬಿದ್ದ ಜನರು!

ದೆಹಲಿಯ ಜಾಮಿಯಾ ನಗರದ ಕಾರ್ಖಾನೆಯೊಂದರಲ್ಲಿ ಮರದ ಪೆಟ್ಟಿಗೆಯಲ್ಲಿ 7 ಹಾಗೂ 8 ವರ್ಷದೊಳಗಿನ ಇಬ್ಬರು ಮಕ್ಕಳ ಶವಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಮಕ್ಕಳು ಜೂನ್ 5 ರಿಂದ ನಾಪತ್ತೆಯಾಗಿದ್ದರು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪೊಲೀಸ್ ತನಿಖೆ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಕಾರ್ಖಾನೆಯಲ್ಲಿ ಇಬ್ಬರು ಮಕ್ಕಳ ಶವ ಪತ್ತೆಯಾದ ಕುರಿತು ಜಾಮಿಯಾನಗರ ಪಿಎಸ್ ಗೆ ಕರೆ ಬಂದಿತ್ತು. ನಂತರ ಅಲ್ಲಿಗೆ ತೆರಳಿದಾಗ ಮರದ ಪೆಟ್ಟಿಗೆಯಲ್ಲಿ ಶವಗಳು ಕಂಡು ಬಂದಿವೆ. […]

Crime Just In National

Crime News: ಪ್ರೀತಿಸಲು ನಿರಾಕರಿಸಿದ ಯುವತಿಗೆ ಚಾಕು ಹಾಕಿದ ಪಾಪಿ!

ನವದೆಹಲಿ : ಪಾಗಲ್ ಪ್ರೇಮಿಯೊಬ್ಬ ಪ್ರೀತಿ ಒಪ್ಪಿಕೊಳ್ಳದ ಯುವತಿಗೆ ಚಾಕು ಇರಿದು, ನಂತರ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೆಹಲಿಯ ರೋಹಿಣಿ ಜಿಲ್ಲೆಯ ಬೇಗಂಪುರದಲ್ಲಿ ನಡೆದಿದೆ. ಅಲ್ಲಿಯ ಅಮಿತ್ ಎಂಬ ವ್ಯಕ್ತಿ ತನ್ನ ಪ್ರೀತಿಯನ್ನು ಒಪ್ಪಿಕೊಳ್ಳದ ಯುವತಿಗೆ ಚಾಕುವಿನಿಂದ ಇರಿದು ನಂತರ ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅಮಿತ್ ಪ್ರೀತಿಸುತ್ತಿದ್ದ ಯುವತಿ ಇವೆಂಟ್ ಮ್ಯಾನೇಜ್ಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈತ ಯುವತಿಗೆ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ. ಆದರೆ ಇದಕ್ಕೆ ಯುವತಿ ಒಪ್ಪಿಕೊಳ್ಳದ ಕಾರಣ ಆಕೆಗೆ ಚೂರಿ ಇರಿದಿದ್ದಾನೆ ಎನ್ನಲಾಗಿದೆ. ನಿನ್ನೆ […]

Just In Karnataka Maharashtra National State Uttar Pradesh

LPG Cylinder: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; 83.50 ರೂ. ಇಳಿಕೆ!

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಜೂನ್ 1ಕ್ಕೆ ಪರಿಷ್ಕರಿಸಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 83.50 ರೂ. ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಮಾಸಿಕ ಪರಿಷ್ಕರಣೆಗಳು ಪ್ರತಿ ತಿಂಗಳ ಮೊದಲ ದಿನ ನಡೆಯುತ್ತವೆ. ಆದರೆ, ಗೃಹ ಬಳಕೆ ಸಿಲಿಂಡರ್ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ತಿಂಗಳು, ಹೊಟೇಲ್ ಗಳು ರೆಸ್ಟೋರೆಂಟ್‌ ಗಳಂತಹ ವ್ಯಾಪಾರ ಸಂಸ್ಥೆಗಳು ಬಳಸುವ ವಾಣಿಜ್ಯ ಎಲ್‌ ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 171.5 ರೂಪಾಯಿ ಕಡಿತ […]

Just In National Politics

PM Modi: ನೂತನ ಸಂಸತ್ ನಿರ್ಮಾಣಕ್ಕೆ ಶ್ರಮಿಸಿದವರಿಗೆ ಪ್ರಧಾನಿಯಿಂದ ಸನ್ಮಾನ!

ನವದೆಹಲಿ: ನೂತನ ಸಂಸತ್ ಭವನ ಕಟ್ಟಡ ಲೋಕಾರ್ಪಣೆಗೊಂಡಿದ್ದು, ನಿರ್ಮಾಣಕ್ಕಾಗಿ ಶ್ರಮಿಸಿದ ಕಾರ್ಮಿಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸನ್ಮಾನಿಸಿದರು. ಸಾಂಪ್ರದಾಯಿಕ ಶಾಲು ಹೊದಿಸಿ, ಸ್ಮರಣಿಕೆ ನೀಡುವ ಮೂಲಕ ಕಾರ್ಮಿಕರನ್ನು ಪ್ರಧಾನಿ ಸನ್ಮಾನಿಸಿ ಗೌರವಿಸಿದರು. ಗೆ ಪ್ರಧಾನಿ ಮೋದಿಯವರು ಗೌರವ ಸಲ್ಲಿಸಿದರು. ಇದಕ್ಕೂ ಮೊದಲು ಪುರೋಹಿತರಿಂದ ಪಡೆದ ಐತಿಹಾಸಿಕ ಸೆಂಗೋಲ್ ನ್ನು ಲೋಕಸಭೆಯ ಸಭಾಂಗಣದಲ್ಲಿ ಸ್ಪೀಕರ್ ಕುರ್ಚಿಯ ಪಕ್ಕದಲ್ಲಿ ಪ್ರತಿಷ್ಠಾಪಿಸಿದರು. 1947 ರಂದು ಬ್ರಿಟಿಷ್ ಗುಲಾಮಗಿರಿ ಆಳ್ವಿಕೆಯಿಂದ ಮುಕ್ತಿ ಪಡೆದ ಭಾರತಕ್ಕೆ ಅಧಿಕಾರವನ್ನು ಹಸ್ತಾಂತರಿಸುವ ಸೂಚಕವಾಗಿ ಸಂಗೋಲ್’ನ್ನು ಭಾರತೀಯಕರಿಗೆ […]

Just In National

ಸೆಂಗೋಲ್ ನ್ನು ಸ್ವೀಕರಿಸಿದ ಪ್ರಧಾನಿ ನರೇಂದ್ರ ಮೋದಿ!

ಭಾರತದ ಹೊಸ ಸಂಸತ್ ಭವನದ ಉದ್ಘಾಟನೆಯ ಹಿಂದಿನ ದಿನ ಅಧೀನಂ ಪೀಠಾಧಿಪತಿ ಪವಿತ್ರ ರಾಜದಂಡ ಸೆಂಗೋಲ್ (Sengol) ಅನ್ನು ಪ್ರಧಾನಿ ನರೇಂದ್ರ ಮೋದಿ (Narendera Modi) ಅವರಿಗೆ ಹಸ್ತಾಂತರಿಸಿದ್ದಾರೆ. ಅಲ್ಲದೇ, ಪ್ರಧಾನಿಗೆ ಉಡುಗೊರೆ ಕೂಡ ನೀಡಿದ್ದಾರೆ. ದೆಹಲಿಗೆ ತಲುಪಿದ್ದ ಅಧೀನರನ್ನು ಪ್ರಧಾನಿ ಮೋದಿ ಅವರು ತಮ್ಮ ನಿವಾಸದಲ್ಲಿ ಭೇಟಿ ಮಾಡಿದ್ದು, ಅಧೀನರ ಆಶೀರ್ವಾದ ಪಡೆದರು. ಭಾನುವಾರ ನೂತನ ಸಂಸತ್ ಭವನದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ ಭವನದಲ್ಲಿ ಐತಿಹಾಸಿಕ ಮತ್ತು ಪವಿತ್ರವಾದ ಸೆಂಗೋಲ್ […]