ಸತ್ತಿದ್ದಾಳೆಂದು ಗೋಳಾಡುತ್ತಿದ್ದ ಕುಟುಂಬಸ್ಥರ ಮುಂದೆ ಕಣ್ಣು ತೆರೆದ ಬಾಲಕಿ!
ಕಾಲುವೆಗೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಭಾವಿಸಿ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗುತ್ತಿದ್ದ ಬಾಲಕಿ ಮತ್ತೆ ಜೀವ ಪಡೆದಿದ್ದು, ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದಲ್ಲಿನ ಸಂತೆನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಮಗು ಕಾಲುವೆಗೆ ಬಿದ್ದಿರುವು ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಆಗ ಮಗುವನ್ನು ನೀರಿನಿಂದ ಮೇಲೆಕ್ಕೆ ತಂದಿದ್ದಾರೆ. ಆ ಸಂದರ್ಭದಲ್ಲಿ ಮನೆಯವರು ವೈದ್ಯರ ಬಳಿ ಹೋಗೋಣ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಸ್ಥಳೀಯ ಪತೇರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. […]