ಕುಡಿದು ಡ್ರೈವ್ ಮಾಡಿ ಅಪಘಾತ ಮಾಡಿದ ಚಾಲಕನಿಗೆ ಮಹಿಳೆಯಿಂದ ಚಪ್ಪಲಿ ಏಟು!
ವಿಜಯಪುರ: ಮದ್ಯ ಸೇವಿಸಿ (alcohol)ದ್ದ ವ್ಯಕ್ತಿಯೊಬ್ಬ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿ ಮಹಿಳೆಯಿಂದ ಚಪ್ಪಲಿ ಏಟು ತಿಂದಿರುವ ಘಟನೆ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿ ಬೆಳಕಿಗೆ ಬಂದಿದೆ. ಕಾರು ಚಾಲಕ ಎಣೆ ಮತ್ತಲ್ಲಿ ಕಾರನ್ನು ಎಲ್ಲೆಂದರಲ್ಲಿ ಚಲಾಯಿಸಿದ್ದಾನೆ. ಪರಿಣಾಮ ಎರಡು ಆಟೋ ಹಾಗೂ ಒಂದು ಬೈಕ್ ಗೆ ಕಾರು ಡಿಕ್ಕಿ ಹೊಡೆದಿದ್ದು, ಪರಿಣಾಮ ಆಟೋ ಪಲ್ಟಿ ಆಗಿದೆ. ಘಟನೆಯಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಪಲ್ಟಿಯಾದ ಆಟೋದಲ್ಲಿದ್ದ ಮಹಿಳೆಯಿಂದ ಕಾರ್ ಚಾಲಕನಿಗೆ ಚಪ್ಪಲಿ ಸೇವೆ ಮಾಡಿದ್ದಾರೆ. ಬೇಜವಾಬ್ದಾರಿಯಾಗಿ ಹಾಗೂ ಮದ್ಯ […]
