Kornersite

Crime Just In Karnataka State

90 ಎಂಎಲ್ ನ 10 ಪ್ಯಾಕೇಟ್ ಮದ್ಯ ಕುಡಿದು ಸಾವನ್ನಪ್ಪಿದ ವ್ಯಕ್ತಿ!

ಹಾಸನ: ಇತ್ತೀಚೆಗೆ ಎಲ್ಲ ವಿಷಯದಲ್ಲಿಯೂ ಬಾಜಿ ಕಟ್ಟುವ ಕಾರ್ಯ ನಡೆಯುತ್ತಿದೆ. ವ್ಯಕ್ತಿಯೊಬ್ಬ ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ. ಈ ಘಟನೆ ಹಾಸನ (Hassan)ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸ್ ನಿಲ್ದಾಣದಲ್ಲಿ ದೇವರಾಜ್ ಮತ್ತು ತಿಮ್ಮೇಗೌಡ ಸೇರಿಕೊಂಡು ಕುಡಿತದ ವಿಷಯದಲ್ಲಿ ಬಾಜಿ ಕಟ್ಟಿದ್ದರು. ಅರ್ಧ ಗಂಟೆಯಲ್ಲಿ 90 ಎಂಎಲ್ ನ 10 ಪ್ಯಾಕೇಟ್ ಮದ್ಯ ಕುಡಿಯುವ ಚಾಲೆಂಜ್ ಕಟ್ಟಿದ್ದರು. ಚಾಲೆಂಜ್‌ನಲ್ಲಿ ಹೆಚ್ಚು ಮದ್ಯ ಸೇವಿಸಿದ್ದ ತಿಮ್ಮೇಗೌಡ(60) ಸಾವನ್ನಪ್ಪಿದ್ದಾರೆ. ಮೂವತ್ತು […]

Bengaluru Just In Karnataka State

ರಾಜ್ಯ ಸರ್ಕಾರದಿಂದಲೇ ಶುರುವಾಗಲಿವೆ ಬಾರ್; ಆರಂಭದಲ್ಲಿ 30 ಮಳಿಗೆ!

ರಾಜ್ಯ ಸರ್ಕಾರದಿಂದ ಎಂಎಸ್ ಐಎಲ್ ನಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದ್ದು, ರಾಜ್ಯಾದ್ಯಂತ ಉನ್ನತ ದರ್ಜೆಯ 100 ಮದ್ಯ ಮಾರಾಟ ಮಳಿಗೆಗಳನ್ನು ತೆರೆಯಲು ಯೋಜನೆ ರೂಪಿಸಲಾಗುತ್ತಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ. ಮೊದಲ ಹಂತದಲ್ಲಿ 30 ಮಳಿಗೆಗಳನ್ನು ಆರಂಭಿಸಲಾಗುತ್ತಿದ್ದು, ಈ ಪೈಕಿ 10 ಮಳಿಗೆಗಳು ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ತೆರೆಯಲಾಗುವುದು. ಅಲ್ಲದೇ, ಸಂಸ್ಥೆಯ ಚಿಟ್ ಫಂಡ್ ನಲ್ಲೂ ಹಲವಾರು ಸುಧಾರಣೆ ತರಲಾಗುತ್ತಿದೆ. ಜನರ ಹಣವನ್ನು ಕಾಳಜಿಯಿಂದ ನಿರ್ವಹಿಸಲಾಗುತ್ತದೆ. ಲೇಖಕ್ ನೋಟ್ ಪುಸ್ತಕದ ಬ್ರ್ಯಾಂಡ್ ಗೆ ಹೊಸ […]

Bengaluru Crime Just In Karnataka State

ಗಂಡು ಮಗು ಹುಟ್ಟಿದ್ದಕ್ಕೆ ಗುಂಡು ಕೊಡಿಸಿದವನ ತಲೆ ಬುರುಡೆ ಓಪನ್ ಮಾಡಿದ ಸ್ನೇಹಿತರು!

ವ್ಯಕ್ತಿಯೊಬ್ಬ ತನಗೆ ಗಂಡು (Boy Baby) ಮಗು ಹುಟ್ಟಿದೆ ಎಂದು ತನ್ನ ಸ್ನೇಹಿತರಿಗೆ ಪಾರ್ಟಿ ಕೊಡಿಸಿದ್ದ. ಆದರೆ, ಆ ಸ್ನೇಹಿತರು ಆತನ ತಲೆ ಬುರುಡೆಯನ್ನೇ ಓಪನ್ ಮಾಡಿರುವ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ರಂಗನಾಥ್ ಎಂಬ ವ್ಯಕ್ತಿಯೇ ಗಂಡು ಮಗು ಆದ ಎಂಬ ಖುಷಿಯಲ್ಲಿ ಸ್ನೇಹಿತರಾದ ಮನೋಜ್, ಮಧುಸೂದ್, ಪ್ರಸಾದ್‍ಗೆ ಪಾರ್ಟಿ ಕೊಡಿಸಿದ್ದ. ಆದರೆ, ಈ ಪಾರ್ಟಿಯಲ್ಲಿಯೇ ಸ್ನೇಹಿತರು ಆತ ಕುಡಿಸಿದ ಮದ್ಯವನ್ನೇ ಕುಡಿದು, ಆತನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.ಈ ಪಾರ್ಟಿಲ್ಲಿ ರಾಜಕೀಯ ಪಕ್ಷದ […]

Bengaluru Just In Karnataka Politics State

ಇಂದು ಸಂಜೆ 5 ಗಂಟೆಯಿಂದ ಬಾರ್ ಗೆ ಬೀಗ: 3 ದಿನ ಸಿಗೋದಿಲ್ಲ ಎಣ್ಣೆ

ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗುವುದು. ಹೀಗಾಗಿ ಎಲ್ಲೆಡೆ ಮದ್ಯ ಮಾರಾಟಕ್ಕೆ ಭಾರೀ ಬೇಡಿಕೆ ಬಂದಿದೆ. ಇಂದು ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಮತ್ತು ಸಾಗಣೆಗೆ ನಿಷೇಧ ಜಾರಿಯಾಗಲಿದೆ. ಹೀಗಾಗಿ ರಾಜ್ಯದಲ್ಲಿ ಮೇ 9, 10, 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌ ಆಗಲಿದೆ. ಮೇ 8 ರ ಸಂಜೆ 5 ರಿಂದ 10ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ […]

Crime Just In Karnataka State

Crime News: ಮದ್ಯಪಾನ ಮಾಡಲು ಹಣ ನೀಡದಿದ್ದಕ್ಕೆ ಪಾಪಿ ಮಗನಿಂದಲೇ ಹತ್ಯೆಯಾದ ತಂದೆ!

ಬೆಂಗಳೂರು: ಕುಡಿತದ ಚಟದ ದಾಸನಾಗಿದ್ದ ಮಗ, ತಂದೆಯ ಬಳಿ ಹಣ ಕೇಳಿದ್ದಾನೆ. ತಂದೆ ಹಣ ನೀಡಿದ್ದಕ್ಕೆ ಪಾಪಿ ಮಗ ಕೊಲೆ ಮಾಡಿರುವ ಘಟನೆ ನಡೆದಿದೆ. ಈ ಘಟನೆ ನಗರದ ಗೋವಿಂದರಾಜನಗರ ಠಾಣೆ ವ್ಯಾಪ್ತಿಯಲ್ಲಿನ ಮಾರೇನಹಳ್ಳಿ ಪಿ. ಎಸ್ ಲೇಔಟ್ನಲ್ಲಿ ಬೆಳಕಿಗೆ ಬಂದಿದೆ. ಸೆಕ್ಯೂರಿಟಿಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಸವರಾಜು(60) ಕೊಲೆಯಾದ ದುರ್ದೈವಿ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಪುತ್ರ ನೀಲಧರ್ ಎಂಬಾತನೇ ಕೊಲೆ ಮಾಡಿರುವ ಪಾಪಿ ಮಗ. ಇಬ್ಬರು ಕೂಡ ಶೆಡ್ ವೊಂದರಲ್ಲಿ ವಾಸವಾಗಿತ್ತು. ಈ ಸಂದರ್ಭದಲ್ಲಿ […]

Crime Just In National

Crime News: ಬಿಹಾರದಲ್ಲಿ ಕಳ್ಳಭಟ್ಟಿ ಪ್ರಕರಣ; ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆ!

ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯಲ್ಲಿ ವಿಷಪೂರಿತ ಕಳ್ಳಭಟ್ಟಿ ಸೇವನೆಯಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 40ಕ್ಕೆ ಏರಿಕೆಯಾಗಿದೆ ಎನ್ನಲಾಗಿದೆ. ಸರ್ಕಾರದ ಅಧಿಕೃತ ಅಂಕಿ- ಅಂಶಗಳ ಪ್ರಕಾರ ಈಗಾಗಲೇ 27 ಜನರು ಸಾವನ್ನಪ್ಪಿದ್ದಾರೆ. ಅಸ್ವಸ್ಥಗೊಂಡ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಐವರು ರೋಗಿಗಳು ಸಾವನ್ನಪ್ಪಿದ್ದಾರೆ. ಹಲವು ರೋಗಿಗಳ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಪರಹಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಂಡಿತ್ ಪುರದ ವೀರೇಂದ್ರ ಸಾಹ್, ಹರ್ಸಿದ್ಧಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾನೇಜ್ ಮಹತೋ ಹಾಗೂ ಬ್ರಿಜೇಶ್ ಯಾದವ್ […]