Kornersite

Just In Karnataka National State

ನಾಳೆ ನಡೆಯಲಿರುವ ಪಿಜಿ ಸಿಇಟಿ ಪರೀಕ್ಷೆ!

ನಾಳೆ ಪಿಜಿ-ಸಿಇಟಿ 2023ರ ಸಾಲಿನ ಪಿಜಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀಟರ್ ವ್ಯಾಪ್ತಿಯ ಆವರಣವನ್ನು ಐಪಿಸಿ 1973ರ ಕಲಂ 144ರಲ್ಲಿನ ಪ್ರದತ್ತವಾದ ಅಧಿಕಾರ ಚಲಾಯಿಸಿ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದೆ. ಈ ಪರೀಕ್ಷೆಯು ನಾಳೆ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರ ವರೆಗೆ ಹಾಗೂ ಮಧ್ಯಾಹ್ನ 2.30ರಿಂದ ಸಂಜೆ 4.30ರ ವರೆಗೆ ಪಿಜಿ-ಸಿಇಟಿ ಸಾಮಾನ್ಯ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷಾ ಕೇಂದ್ರ ಬಿಗಿ ಕಾವಲು ಏರ್ಪಡಿಸಲಾಗಿದೆ. ಅನಧಿಕೃತ ವ್ಯಕ್ತಿ ಹಾಗೂ ವ್ಯಕ್ತಿಗಳ […]

Just In National

NEET UG ಫಲಿತಾಂಶ 2023 ಬಿಡುಗಡೆ; ಅಧಿಕೃತ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟ

NTA ಯು NEET UG ಪರೀಕ್ಷೆ 2023 ರ ಫಲಿತಾಂಶ ಬಿಡುಡೆಯಾಗಿದ್ದು, ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. neet.nta.nic.in, ntaresults.nic.in ಗೆ ಭೇಟಿ ನೀಡಿ ಫಲಿತಾಂಶ ನೋಡಬಹುದು. ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಅವರು ನೀಟ್ ಪರೀಕ್ಷೆಯಲ್ಲಿ ಶೇ. 99.99 ಅಂಕಗಳೊಂದಿಗೆ ಅಗ್ರಸ್ಥಾನ ಗಳಿಸಿದ್ದಾರೆ ಎನ್ನಲಾಗಿದೆ. ಪರೀಕ್ಷೆಯಲ್ಲಿ ಒಟ್ಟು 20.38 ಲಕ್ಷ ಅಭ್ಯರ್ಥಿಗಳ ಪೈಕಿ 11.45 ಲಕ್ಷ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಗರಿಷ್ಠ 1.39 ಲಕ್ಷ, […]

Just In Karnataka State

81ನೇ ವಯಸ್ಸಿನಲ್ಲಿ ಎಂ.ಎ ಪರೀಕ್ಷೆ ಬರೆದ ವೃದ್ಧ!

ವಿಜಯಪುರ: ಶಿಕ್ಷಣಕ್ಕೆ ವಯಸ್ಸಿನ ಹಂಗಿಲ್ಲ ಎನ್ನುತ್ತಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ 81 ವರ್ಷದ ವೃದ್ಧರೊಬ್ಬರು ಎಂಎ ಇಂಗ್ಲಿಷ್ ಪರೀಕ್ಷೆ ಬರೆದಿದ್ದಾರೆ. ವಿಜಯಪುರ ನಗರದಲ್ಲಿನ ನರ್ಸಿಂಗ್ ಕಾಲೇಜಿನಲ್ಲಿ ನಡೆಯುತ್ತಿರುವ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ (IGNOU) ನಡೆಸಿದ ಎಂ.ಎ., ಇಂಗ್ಲಿಷ್ ಅಂತಿಮ ವರ್ಷದ ಪರೀಕ್ಷೆಯಲ್ಲಿ 81 ವರ್ಷದ ನಿಂಗಯ್ಯ ಒಡೆಯರ್ ಎಂಬುವವರು ಪರೀಕ್ಷೆ ಬರೆದಿದ್ದಾರೆ. ಬಾಗಲಕೋಟೆ ಜಿಲ್ಲೆ ಇಳಕಲ್ ತಾಲೂಕಿನ ಗುಡೂರು ಬಳಿಯ ಎಸ್.ಸಿ. ಹಳ್ಳಿ ನಿವಾಸಿ ನಿಂಗಯ್ಯ ಒಡೆಯರ್ ಸರ್ಕಾರಿ ಸೇವೆಯಿಂದ ನಿವೃತ್ತರಾದ ನಂತರ ಕನ್ನಡ, […]

Just In National

PUC Result: ಪಿಯುಸಿ ಪಾಸಾದ ಇಬ್ಬರು ಶಾಸಕರು!

Lucknow : ಕಲಿಯುವುದಕ್ಕೆ ಯಾವುದೇ ವಯಸ್ಸಿನ ನಿರ್ಬಂಧವಿಲ್ಲ. ಇದಕ್ಕೆ ಯಾವುದೇ ವಯಸ್ಸು ಕೂಡ ಅಡ್ಡಿ ಬರುವುದಿಲ್ಲ. ಯಾರು ಯಾವಾಗ ಬೇಕಾದರೂ ಕಲಿಯಬಹುದು. ಹೀಗೆ ಇಬ್ಬರು ಶಾಸಕರು, ಶಾಸಕರಾದ ನಂತರ ಅದೂ 50ರ ಹರೆಯದಲ್ಲಿ ಪಿಯುಸಿ ಪಾಸ್ ಮಾಡಿದ್ದಾರೆ. ಅಲ್ಲದೇ, ಅವರಿಬ್ಬರೂ ಪದವಿ ಓದುವ ಗುರಿ ಹೊಂದಿದ್ದಾರೆ. ಬರೇಲಿ ಜಿಲ್ಲೆಯ ಬಿತ್ರಿ-ಚೈನ್‌ಪುರ ಕ್ಷೇತ್ರದ ಮಾಜಿ ಶಾಸಕ ರಾಜೇಶ್ ಮಿಶ್ರಾ 500ಕ್ಕೆ 263 ಅಂಕಗಳನ್ನು ಪಡೆದರೆ, ಹಸ್ತಿನಾಪುರದಿಂದ ಎರಡು ಬಾರಿ ಶಾಸಕರಾಗಿದ್ದ ಪ್ರಭುದಯಾಳ್ ವಾಲ್ಮೀಕಿ ಕೂಡ ಪಾಸಾಗಿದ್ದಾರೆ. ಉತ್ತರ ಪ್ರದೇಶ […]

Just In Tech

ChatGPT: ಚಾಟ್‌ಜಿಪಿಟಿ ಬಳಸಿ ಪರೀಕ್ಷೆಗೆ ತಯಾರಿ!

ಇಂದಿನ ತಂತ್ರಜ್ಞಾನ (Technology) ಯುಗದಲ್ಲಿ ಚಾಟ್‌ಜಿಪಿಟಿಯು (ChatGPT) ಸಾಕಷ್ಟು ಪವಾಡಗಳನ್ನೇ ಸೃಷ್ಟಿಸುತ್ತಿದೆ. ಚಾಟ್‌ಜಿಪಿಟಿ ಶಿಕ್ಷಣ, ತಂತ್ರಜ್ಞಾನ, ಬ್ಯುಸಿನೆಸ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಮಾಲ್ ಮಾಡುತ್ತಿದೆ. ಕೆಲವು ಸಂಸ್ಥೆಗಳು ಚಾಟ್‌ಜಿಪಿಟಿಯನ್ನು ಪ್ರಾಯೋಗಿಕವಾಗಿ ತಮ್ಮ ಕೆಲವೊಂದು ಯೋಜನೆಗಳಲ್ಲಿ ಬಳಸಿಕೊಂಡಿದ್ದು ಸಫಲತೆಯನ್ನು ಗಳಿಸಿವೆ. ರೆಡ್ಡಿಟ್‌ನಲ್ಲಿ ಚಾಟ್‌ಜಿಪಿಟಿಯ ಅನುಭವಗಳನ್ನು ಹಂಚಿಕೊಂಡಿರುವ ವಿದ್ಯಾರ್ಥಿಯೊಬ್ಬರು ಬರೇ ಮೂರು ದಿನಗಳಲ್ಲಿ ನಡೆಯುವ ಪರೀಕ್ಷೆಗೆ ತಯಾರಿ ನಡೆಸಲು ಚಾಟ್‌ಜಿಪಿಟಿ ಬಳಸಿಕೊಂಡಿರುವ ಕುರಿತು ಹೇಳಿದ್ದಾರೆ. ಪರೀಕ್ಷೆಗೆ ಇನ್ನೇನು ಮೂರು ದಿನಗಳು ಮಾತ್ರ ಬಾಕಿ ಉಳಿದಿತ್ತು, ತರಗತಿಗಳಲ್ಲಿ ನಡೆದ ಯಾವುದೇ ಪಾಠ […]

Just In Karnataka State

PUC Result: ಪಿಯುಸಿಯಲ್ಲಿ ತಾಯಿ-ಮಗಳು ಇಬ್ಬರೂ ಒಂದೇ ಬಾರಿ ಪಾಸ್!

ಸುಳ್ಯ : ಸುಳ್ಯದಲ್ಲಿ ತಾಯಿ ಹಾಗೂ ಮಗಳು ಒಟ್ಟಿಗೆ ಪರೀಕ್ಷೆ ಬರೆದು ತೇರ್ಗಡೆ ಹೊಂದಿದ್ದು, ಎಲ್ಲೆಡೆ ಮೆಚ್ಚುಗೆ ಗಳಿಸುತ್ತಿದ್ದಾರೆ. ಸುಳ್ಯ ಜಯನಗರದ ರಮೇಶ್‌ ಎಂಬವರ ಪತ್ನಿ ಗೀತಾ ಮತ್ತು ಅವರ ಪುತ್ರಿ ತ್ರಿಷಾ ಒಟ್ಟಿಗೆ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ ಹಾಗೂ ಮಗಳು. ಸುಳ್ಯ ಪೊಲೀಸ್‌ ಠಾಣೆಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯಾಗಿರುವ ಗೀತಾ ವೃತ್ತಿ ಜೀವನದ ಮಧ್ಯೆ ಅಧ್ಯಯನ ನಡೆಸಿ ಖಾಸಗಿಯಾಗಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಪರೀಕ್ಷೆ ಬರೆದು 45ನೇ ವರ್ಷದಲ್ಲಿ ಪಾಸಾಗಿದ್ದಾರೆ. ಮಗಳು ತೃಷಾ […]