ಟೊಮೆಟೊ ಮಾರಿ ಒಂದೇ ತಿಂಗಳಲ್ಲಿ ಕೋಟ್ಯಾಧಿಪತಿಯಾದ ರೈತ
Tomato Price: ಟೊಮೆಟೊ ಬೆಲೆ ಗಗನಕ್ಕೇರಿದೆ. ಟೊಮೆಟೊ ವ್ಯಾಪಾರಿಗಳು ಹಾಗೂ ರೈತರು ಹಿಂದೆಂದೂ ಕಾಣದಷ್ಟು ಹಣ ಗಳಿಸಿದ್ದಾರೆ. ದೇಶಾದ್ಯಂತ ಇಳುವರಿ ಕುಸಿದಿರುವುದೇ ಟೊಮೆಟೊ ಬೆಲೆಯಲ್ಲಿ ಸಡನ್ ಆಗಿ ಏರಿಕೆ ಕಂಡಿದೆ. ಟೊಮೆಟೊ ಬೆಲೆ ಹೆಚ್ಚಾಗ್ತಾ ಇದ್ದಂತೆ ರೈತರಿಗೂ ಡಿಮ್ಯಾಂಡ್ ಹೆಚ್ಚಾಗಿದೆ. ಟೊಮೆಟೊ ಬೆಲೆ ಎಷ್ಟೇ ಹೆಚ್ಚಾದ್ರು ಕೂಡ ಗ್ರಾಹಕರ ಖರೀದಿ ಮಾತ್ರ ಕಡಿಮೆಯಾಗಿಲ್ಲ. ಈ ತಿಂಗಳಲ್ಲಿ ಟೊಮೆಟೊ ಕಟಾವು ಮಾಡಿರುವ ರೈತರಿಗೆ ಭರ್ಜರಿ ಲಾಭವಾಗಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ರೈತನೊಬ್ಬ ಟೊಮೆಟೊ ಕೃಷಿಯಿಂದ ಕೋಟಿಗಟ್ಟಲೆ ಆದಾಯ ಗಳಿಸಿದ್ದಾನೆ. […]