Fload: ಭೀಕರ ಪ್ರವಾಹಕ್ಕೆ 200 ಜನ ಬಲಿ; ಹಲವರು ಕಣ್ಮರೆ!
ಕಾಂಗೊ ಪ್ರಜಾತಾಂತ್ರಿಕ ಗಣರಾಜ್ಯದ ದಕ್ಷಿಣ ಕಿವು ಪ್ರಾಂತದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು, ಪ್ರವಾಹ ಉಂಟಾಗಿ ಪ್ರವಾಹದ ಪರಿಣಾಮ 200ಕ್ಕೂ ಅಧಿಕ ಜನ ಸಾವನ್ನಪ್ಪಿ ಹಲವರು ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. ನೆರೆಯ ರಾಷ್ಟ್ರವಾದ ರ್ವಾಂಡಾದಲ್ಲಿಯೂ ಸತತವಾಗಿ ಭಾರೀ ಮಳೆಯಾಗುತ್ತಿದ್ದು, ಅಲ್ಲಿ ಕೂಡ ಹಲವಾರು ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಭೀಕರ ಪ್ರವಾಹದಿಂದಾಗಿ ನೂರಾರು ಮನೆಗಳು ಕೊಚ್ಚಿಹೋಗಿದ್ದು, ಕಾಲೆಹೆ, ಕೀವು ನದಿ ಪಶ್ಚಿಮ ಪ್ರದೇಶ ಹಾಗೂ ರ್ವಾಂಡಜಾ ಗಡಿ ಪ್ರದೇಶದಲ್ಲಿ 50ಕ್ಕೂ ಅಧಿಕ ಜನ ನಾಪತ್ತೆಯಾಗಿದ್ದಾರೆಂದು ಕ್ಷಿಣ ಕಿವು ಪ್ರಾಂತದ ಗವರ್ನರ್ ಥಿಯೊ […]