Kornersite

Just In Karnataka State

ಸಂಕಷ್ಟದಲ್ಲಿ ರೈತರು; ಸರಳ ದಸರಾಕ್ಕೆ ಸರ್ಕಾರ ನಿರ್ಧಾರ!

ರಾಜ್ಯದಲ್ಲಿ ಮಳೆ ಕೊರತೆಯಾಗಿರುವ ಹಿನ್ನೆಲೆಯಲ್ಲಿ ರೈತ ವಲಯ ಸಂಕಷ್ಟದಲ್ಲಿದೆ. ಹೀಗಾಗಿ ಪ್ರಸಕ್ತ ವರ್ಷ ಸರಳ ಹಾಗೂ ಅರ್ಥಪೂರ್ಣ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ಈ ಕುರಿತಾಗಿ ಟ್ವಿಟರ್‌ ಮೂಲಕ ಮಾಹಿತಿ ನೀಡಿರುವ ಅವರು, ರಾಜ್ಯದಲ್ಲಿ ಮಳೆ ಕಡಿಮೆಯಾಗಿರುವುದರಿಂದಾಗಿ ರೈತಾಪಿ ವರ್ಗವು ಸಂಕಷ್ಟದಲ್ಲಿದ್ದು, ಈ ಬಾರಿ ಸರಳ ಹಾಗೂ ಅರ್ಥಪೂರ್ಣ ದಸರಾ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಿದ್ದಾರೆ. ವಿಶ್ವವಿಖ್ಯಾತ ಮೈಸೂರು ದಸರಾ ಆಚರಣೆಗೆ ಬರಸಿಡಿಲು […]

Just In Karnataka National

ರೈತರಿಗೆ ಕೇಂದ್ರ ಸರ್ಕಾರದಿಂದ ಬಂಪರ್ ಗಿಫ್ಟ್!

ದೇಶದ ರೈತರಿಗೆ ಕೇಂದ್ರ ಸರ್ಕಾರವು ಗಣೇಶ ಹಬ್ಬದ ಉಡುಗೊರೆ ಎಂಬಂತೆ ರೈತರಿಗೆ ಕೃಷಿ ಸಾಲ ಹಾಗೂ ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ಸಿಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರಿಗೆ ಕೃಷಿ ಸಾಲ ಮತ್ತು ಬೆಳೆ ವಿಮೆಗೆ ಒತ್ತು ನೀಡುವ ಹಲವಾರು ಹೊಸ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೃಷಿ ಹಾಗೂ ರೈತರ ಕಲ್ಆಮ ಸಚಿವಾಲಯವು ದೇಶದಲ್ಲಿ ಕೃಷಿಯಲ್ಲಿ ಕ್ರಾಂತಿ ಮಾಡಲು ಈ […]

Just In Karnataka State

Agriculture: ಸಾವಯವ ಚಿಕ್ಕು ಮಾರಾಟ ಮಾಡಿ ಭರ್ಜರಿ ಲಾಭ ಮಾಡುತ್ತಿರುವ ರೈತರು!

ವಿಜಯಪುರ : ನಾವು ಯಾವುದೇ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರೂ ಅಲ್ಲಿ ವಿವಿಧ ಬಗೆಯ ಹಣ್ಣುಗಳು ಹಾಗೂ ಇನ್ನಿತರ ವಸ್ತುಗಳ ಮಾರಾಟ ಮಾಡುವುದನ್ನು ನೋಡಿದ್ದೇವೆ. ಇವರೆಲ್ಲ ಮಧ್ಯವರ್ತಿಗಳ ಕಾಟವಿಲ್ಲದೆ, ಕಡಿಮೆ ಬೆಲೆಗೆ ಹಣ್ಣು ಖರೀದಿಸಿ, ಗ್ರಾಹಕರಿಗೂ ಯೋಗ್ಯದರದಲ್ಲಿ ಮಾರಾಟ ಮಾಡುತ್ತಿರುತ್ತಾರೆ. ಸದ್ಯ ಇಂತಹ ಮಾರಾಟಗಾರರು ಉತ್ತಮ ಆದಾಯ ಗಳಿಸುತ್ತಿದ್ದಾರೆ. ವಿಜಯಪುರದಲ್ಲಿ ಮುಖ್ಯ ಬೆಳೆಯಾಗಿರುವ ಸಪೋಟಾ ಅಂದರೆ ಚಿಕ್ಕು ಹಣ್ಣುಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಸಾವಯವ ವಿಧಾನದಿಂದ ಬೆಳೆಯುವ ಈ ಚಿಕ್ಕುಗಳನ್ನು ನೇರವಾಗಿ ಜಮೀನಿನಿಂದ ಕಟಾವು ಮಾಡಿ ತಂದು ಮಾರಲಾಗುತ್ತಿದೆ. […]