ಚರಂಡಿಯಲ್ಲಿ ಹರಿದು ಬಂದ ಹಣದ ರಾಶಿ; ಗಲೀಜಿನಲ್ಲಿಯೇ ಮುಗಿಬಿದ್ದ ಜನರು!
ಚರಂಡಿ ನೀರಿನಲ್ಲಿ ಕಂತೆ ಕಂತೆ ಹಣ ತೇಲಿ ಬಂದಿರುವ ಘಟನೆಯೊಂದು ಬೆಳಕಿಗೆ ಬಂದಿದ್ದು, ಜನರು ಚರಂಡಿ ನೀರು ಗಲೀಜು ಎಂಬುವುದನ್ನು ಕೂಡ ಲೆಕ್ಕಿಸದೆ ಚರಂಡಿಗೆ ಧುಮುಕಿ ಕೈಗೆ ಸಿಕ್ಕಷ್ಟು ತೆಗೆದುಕೊಂಡಿದ್ದಾರೆ. ಹಣದ ರಾಶಿ ತೇಲಿ ಬಂದಿರುವ ಘಟನೆ ಪಾಟ್ನಾದಿಂದ 150 ಕಿ.ಮೀ ದೂರದಲ್ಲಿರುವ ಸಸಾರಾಮ್ ಜಿಲ್ಲೆಯ ಮೊರಾದಾಬಾದ್ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ. ಬೆಳಿಗ್ಗೆ ವ್ಯಕ್ತಿಯೊಬ್ಬರು ಚರಂಡಿಯಲ್ಲಿ ಹಣ ತೇಲಿ ಹೋಗುವುದನ್ನು ನೋಡಿದ್ದಾರೆ. ಅದರಲ್ಲಿ 100ರ ಕಂತೆ ಕಂತೆ ನೋಟುಗಳಿದ್ದವು. ಕೆಲವು ಸಮಯದ ಬಳಿಕ ಅಲ್ಲಿ ನೋಡಿದಾಗ ನೋಟು […]