Rain Effect: ಬೆಂಗಳೂರಲ್ಲಿ ಸುರಿದ ಮಹಾ ಮಳೆಗೆ ಯುವತಿ ಬಲಿ!!
ಬೆಂಗಳೂರಲ್ಲಿ ಸುರಿದ ಮಹಾ ಮಳೆಗೆ ಯುವತಿ ಸಾವನ್ನಪ್ಪಿದ್ದಾಳೆ. 22 ವರ್ಷದ ಭಾನುರೇಖಾ ಸಾವನ್ನಪ್ಪಿದ ಯುವತಿ. ವಿಧಾನಸೌಧದಿಂದ 200 ಮೀಟರ್ ದೂರದಲ್ಲಿ ಇರುವ ಕೆ. ಆರ್ ಸರ್ಕಲ್ ಅಂಡರ್ ಪಾಸ್ ನಲ್ಲಿ ಕಾರು ಸಿಲುಕೊಂಡಿತ್ತು. ಅಂಡರ್ ಪಾಸ್ ಪೂರ್ತಿ ಮಳೆ ನೀರು ನಿಂತು ಭರ್ತಿಯಾಗಿದೆ. ಕಾರು ಸಿಲುಕಿದ ಪರಿಣಾಮ ಭಾನು ರೇಖಾಳನ್ನ ಕೂಡಲೇ ಆಸ್ಪತ್ರೆಗೆ ಕರೆತಂದರೂ ಪ್ರಯೋಜನವಾಗಲಿಲ್ಲ. ಕೂಡಲೇ ಸಿಎಂ ಸಿದ್ದರಾಮಯ್ಯ್ ಆಸ್ಪತ್ರೆಗೆ ಭೇಟಿ ನೀಡಿ, ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಭಾನುರೇಖಾ ಬೆಂಗಳೂರಿನ […]