ಮದುವೆಯಾದ ದಿನವೇ ನವ ದಂಪತಿ ಹೃದಯಾಘಾತಕ್ಕೆಬಲಿ!
ಮದುವೆಯಾದ ರಾತ್ರಿಯೇ ನವ ದಂಪತಿ ಹೃದಯಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ನಡೆದಿದೆ. ಪ್ರತಾಪ್ ಯಾದವ್(22), ಪುಷ್ಪಾ (20) ಈ ರೀತಿ ಸಾವನ್ನಪ್ಪಿದ ದಂಪತಿ. ಮೇ. 30 ರಂದು ಇಬ್ಬರ ಮದುವೆ ನಡೆದಿದ್ದು, ಅಂದೇ ರಾತ್ರಿ ನವಜೋಡಿ ತಮ್ಮ ಕೋಣೆಗೆ ತೆರಳಿದ್ದಾರೆ. ಆದರೆ, ಮರುದಿನ ಬೆಳಿಗ್ಗೆ ಇಬ್ಬರೂ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪೊಲೀಸರು ಬಂದು ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದು, ಪೋಸ್ಟ್ ಮಾರ್ಟಂ ವರದಿಯಲ್ಲಿ ಇಬ್ಬರೂ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ತಿಳಿದು ಬಂದಿದೆ. ಪ್ರತಾಪ್ […]