Kornersite

Just In National

Army Helicopter: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನಾ ಹೆಲಿಕಾಪ್ಟರ್ ಪತನ!

Shrinagar : ಜಮ್ಮು- ಕಾಶ್ಮೀರದಲ್ಲಿ (Jammu and Kashmir) ಭಾರತೀಯ ಸೇನಾ ಹೆಲಿಕಾಪ್ಟರ್ (Army Helicopter) ಪತನವಾಗಿರುವ ಆಘಾತಕಾರಿ ಘಟನೆ ನಡೆದಿದೆ. ಜಿಲ್ಲೆಯ ಮಚ್ನಾ ಗ್ರಾಮದ ಹತ್ತಿರ ಸೇನೆಯ ಎಎಲ್‌ ಹೆಚ್ ಧ್ರುವ ಹೆಲಿಕಾಪ್ಟರ್ ಪತನವಾಗಿದೆ. ಅಪಘಾತದ ಸಂದರ್ಭದಲ್ಲಿ ಮವರು ಇದ್ದರು ಎನ್ನಲಾಗಿದೆ. ಘಟನೆಯಲ್ಲಿ ಪೈಲಟ್‌ಗಳು ಗಾಯಗೊಂಡಿದ್ದಾರೆ. ಅವರನ್ನು ಚಿಕಿತ್ಸೆಗೆ ಕರೆದೊಯ್ಯಲಾಗಿದೆ. ಸದ್ಯ ಅವರು ಸುರಕ್ಷಿತರಾಗಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 2 ತಿಂಗಳಲ್ಲಿ ಎಎಲ್‌ಹೆಚ್ ಧ್ರುವ ಹೆಲಿಕಾಪ್ಟರ್ ಅಪಘಾತವಾಗಿರುವ 3ನೇ ಘಟನೆ ಇದಾಗಿದೆ.