ಪಾಕಿಸ್ತಾನದಲ್ಲಿ ನಡೆಯಿತು ಮರ್ಯಾದಾ ಹತ್ಯೆ; ಮಗಳನ್ನೇ ಜೀವಂತ ಸುಟ್ಟ ತಂದೆ!
ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 20 ವರ್ಷದ ಯುವತಿಯನ್ನು ತಂದೆಯೇ ಸುಟ್ಟಿರುವ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ಲಾಹೋರ್ ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಜಾಂಗ್ ಜಿಲ್ಲೆಯ ಗರ್ ಮಹಾರಾಜದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ರಜಬ್ ಅಲಿ ಎಂಬಾತ ತನ್ನ ಮಕ್ಕಳಾದ ಜಬ್ಬಾರ್, ಅಮೀರ್ ಮತ್ತು ಇನ್ನಿತರ ಕೆಲವು ಕುಟುಂಬ ಸದಸ್ಯರೊಂದಿಗೆ ಸೇರಿಕೊಂಡು ತಮ್ಮ ಮಗಳನ್ನು ಸುಟ್ಟು ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೇ, ಇದಕ್ಕೂ ಮುಂತೆ ಚಿತ್ರಹಿಂಸೆ ನೀಡಿದ್ದಾರೆ ಎದು ತನಿಖಾಧಿಕಾರಿ ಮುಹಮ್ಮದ್ ಅಜಮ್ ತಿಳಿಸಿದ್ದಾರೆ. […]