ಗೃಹಣಿಯರು ಮನೆಯಲ್ಲೇ ಕುಳಿತು ಕೈ ತುಂಬ ಹಣ ಗಳಿಸಬಹುದು!
ಪ್ರತಿಯೊಬ್ಬ ಮಹಿಳೆ ಸ್ವಾವಲಂಭಿಯಾಗಿರಬೇಕು ಎಂದು ಬಯಸುತ್ತಾಳೆ. ತನ್ನ ಸಣ್ಣ ಪುಟ್ಟ ಖರ್ಚುಗಳನ್ನ ಯಾರ ಮುಂದೆ ಕೈ ಚಾಚದೇ ತಾನೇ ನಿಭಾಯಿಸಬೇಕು ಎನ್ನುವ ಬಯಕೆ ಇರುತ್ತದೆ. ಹಲವು ಮಹಿಳೆಯರು ಕಚೇರಿಗೆ ಹೋಗಿ ಕೆಲಸ ಮಾಡುತ್ತಾರೆ. ಆದ್ರೆ ಇನ್ನು ಕೆಲವರಿಗೆ ಮನೆಯಲ್ಲಿ ಹೊರಗೆ ಹೋಗಿ ಕೆಲಸ ಮಾಡಲು ಹಲವು ಅಡೆತಡೆಗಳು ಇರುತ್ತವೆ. ಸಂಸಾರದ ನೌಕೆ ಸಾಗಿಸುತ್ತ ತನ್ನ ಆಸೆ ಆಕಾಂಕ್ಷೆಗಳನ್ನ ಬದಿಗೊತ್ತಿ ಜೀವನ ನಡೆಸುತ್ತಿರುತ್ತಾಳೆ. ಆದ್ರೆ ಎಷ್ಟೋ ಮಹಿಳೆಯರಿಗೆ ಮನೆಯಲ್ಲೇ ಕುಳಿತು ಹೈ ತುಂಬ ಹಣ ಗಳಿಸಬಹುದು ಅನ್ನೋದು ಗೊತ್ತಿರಲ್ಲ. […]