ತಾವು ಕಲಿತ ಐಐಟಿ ಕಾಲೇಜಿಗೆ ಬರೋಬ್ಬರಿ 315 ಕೋಟಿ ಅನುದಾನ ನೀಡಿದ ಹಳೆಯ ವಿದ್ಯಾರ್ಥಿ!
ಇನ್ಫೋಸಿಸ್ ನ ಸಹ-ಸಂಸ್ಥಾಪಕ ಹಾಗೂ ಅಧ್ಯಕ್ಷ ನಂದನ್ ನಿಲೇಕಣಿ ತಾವು ಓದಿದ್ದ ಐಐಟಿ ಬಾಂಬೆಗೆ 315 ಕೋಟಿ ರೂ. ದೇಣಿಗೆ ನೀಡಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಮೂಲಕ ಸಂಸ್ಥೆಗೆ ಹಳೆ ವಿದ್ಯಾರ್ಥಿ ನಿಲೇಕಣಿ ನೀಡಿದ ಒಟ್ಟು ದೇಣಿಗೆ 400 ಕೋಟಿ ರೂ. ಗೆ ತಲುಪಿದೆ. ಈ ಹಿಂದೆ ಅವರು ಐಐಟಿ ಬಾಂಬೆಗೆ 85 ಕೋಟಿ ರೂ.ದೇಣಿಗೆ ರೂಪದಲ್ಲಿ ನೀಡಿದ್ದರು. ಸದ್ಯ ಮತ್ತಷ್ಟು ಅನುದಾನ ನೀಡಿದ್ದಾರೆ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಪದವಿಗಾಗಿ ನಿಲೇಕಣಿ ಅವರು 1973 ರಲ್ಲಿ ಐಐಟಿ […]