Imran khan: ಪಾಕ್ ನಲ್ಲಿ ಉದ್ವಿಗ್ನ ವಾತಾವರಣ; ಪಾಕ್ ಸೇನಾ ಕಚೇರಿಯ ಮೇಲೆ ದಾಳಿ!
ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಇಮ್ರಾನ್ ಖಾನ್(Imran Khan) ಅವರನ್ನುಭ್ರಷ್ಟಾಚಾರ ವಿರೋಧಿ ಸಂಸ್ಥೆ (Anti-corruption agency) ಬಂಧಿಸಿರುವುದನ್ನು ಖಂಡಿಸಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಇಸ್ಲಾಮಾಬಾದ್ನ ಉಚ್ಚ ನ್ಯಾಯಾಲಯವು ನ್ಯಾಯಾಲಯದ ಆವರಣದಲ್ಲಿ ಖಾನ್ರನ್ನು ಬಂಧಿಸಿರುವುದನ್ನು ವಿವರಿಸಲು ಅಧಿಕಾರಿಗಳಿಗೆ ಸಮನ್ಸ್ ಜಾರಿಗೊಳಿಸಿದೆ. ಬಂಧಿಸಿದ್ದರ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಕೂಡ ನಡೆದಿವೆ. ನೂರಾರು ಬೆಂಬಲಿಗರು ಲಾಹೋರ್ನಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದಾರೆ. ರಾಯಿಟರ್ಸ್ ವರದಿ ಪ್ರಕಾರ, ಬಂದರು ನಗರವಾದ ಕರಾಚಿಯಲ್ಲಿ ಪ್ರತಿಭಟನಾಕಾರರು ಪ್ರಮುಖ ರಸ್ತೆಯನ್ನು ತಡೆದಿದ್ದಾರೆ. ಪಿಟಿಐ ಬೆಂಬಲಿಗರು ರಾವಲ್ಪಿಂಡಿಯಲ್ಲಿ ಪಾಕ್ ಸೇನಾ ಪ್ರಧಾನ […]