Kornersite

Just In Sports

ಆಸ್ಟ್ರೇಲಿಯಾ ತಂಡದಿಂದ ಬಾಲ್ ಟ್ಯಾಂಪರಿಂಗ್; ಭಾರತದ ವಿರುದ್ಧ ಮೋಸದಾಟ ಆಡಿದ ಕಾಂಗರೂ!?

ಲಂಡನ್‌: ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ (WTC)ನ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್‌ ಪಂದ್ಯದಲ್ಲಿ ಬಾಲ್ ಟ್ಯಾಂಪರಿಂಗ್ ನಡೆದಿರುವ ಆರೋಪ ಕೇಳಿ ಬಂದಿದೆ. ಪಂದ್ಯದ 2ನೇ ದಿನದಂದು ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗರೊಬ್ಬರು ಆರೋಪಿಸಿದ್ದಾರೆ. ಸದ್ಯ, ಇದು ಹೊಸ ಚರ್ಚೆಯೊಂದನ್ನು ಹುಟ್ಟು ಹಾಕಿದೆ. ಪಾಕಿಸ್ತಾನದ ಪರ 50 ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳು ಮತ್ತು 19 ಟೆಸ್ಟ್‌ಗಳನ್ನು ಆಡಿರುವ ಬಸಿತ್ ಅಲಿ, ಕ್ಯಾಮರೂನ್ ಗ್ರೀನ್‌ನ 14ನೇ ಓವರ್‌ನಲ್ಲಿ […]

Just In National

ಪವಿತ್ರ ಅಮರನಾಥ ಯಾತ್ರೆಗೆ ಸಿದ್ಧತೆ; ಜುಲೈ 1 ರಿಂದ ಆರಂಭ!

ಈ ವರ್ಷ ಜುಲೈ 1ರಿಂದ ಪ್ರಸಿದ್ಧ ಅಮರನಾಥ ಯಾತ್ರೆ ಆರಂಭವಾಗಲಿದ್ದು, ಆಗಸ್ಟ್ 31 ರವರೆಗೆ ಅವಕಾಶ ನೀಡಲಾಗಿದೆ. ಅಂದರೆ ಒಟ್ಟು 62 ದಿನಗಳ ಕಾಲ ಪವಿತ್ರ ಅಮರನಾಥ ಯಾತ್ರೆ ನಡೆಯಲಿದ್ದು, ಅಲ್ಲಿನ ಜಮ್ಮು- ಕಾಶ್ಮೀರ ಸರ್ಕಾರ ಭರದ ಸಿದ್ಧತೆ ಮಾಡಿಕೊಂಡಿದೆ. ಮುಂದಾಲೋಚನೆಯ ಹಿನ್ನೆಲೆಯಲ್ಲಿ ಅಲ್ಲಿನ ವೈದ್ಯರ ರಜೆಯನ್ನು ರದ್ದುಗೊಳಿಸಲಾಗಿದೆ. ಇದರೊಂದಿಗೆ ಹಲವಾರು ವಿಶೇಷ ಆದೇಶಗಳನ್ನು ಹೊರಡಿಸಲಾಗಿದೆ. ಅಮರನಾಥ ಯಾತ್ರೆಯು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಟ್ರ್ಯಾಕ್ ಮತ್ತು ಗಂಡರ್ಬಾಲ್ ಜಿಲ್ಲೆಯ ಬಲ್ಟಾಲ್ ಎಂಬ ಎರಡು ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಹೀಗಾಗಿ […]

Entertainment Just In Sandalwood

ದಾಖಲೆಯ ಸ್ಕ್ರೀನ್ ಗಳಲ್ಲಿ ಅಪ್ಪಳಿಸಲು ಸಿದ್ಧವಾಗಿರುವ ಆದಿಪುರುಷ್; ಐದು ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧತೆ!

ಪ್ರಭಾಸ್ (Prabhas) ನಟನೆಯ ಆದಿಪುರುಷ್ (Adipurush) ಸಿನಿಮಾ ದೇಶಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ದೇಶದ ಅತಿದೊಡ್ಡ ಬಜೆಟ್ ಸಿನಿಮಾ ಇದಾಗಿದ್ದು, ಈಗ ತೆರೆಗೆ ಬರಲು ಸಜ್ಜಾಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಆದಿಪುರುಷ್ ಬಿಡುಗಡೆ ಆಗಲಿದ್ದು, ಭಾರತ (India) ಮಾತ್ರ ಅಲ್ಲದೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಏಕಕಾಲಕ್ಕೆ ತೆರೆಗೆ ಅಪ್ಪಳಿಸಲಿದೆ. ಜೂನ್ 16ರಂದು ಈ ಚಿತ್ರ ತೆರೆಗೆ ಅಪ್ಪಳಿಸಲಿದೆ. ಆದಿಪುರುಷ್ ಸಿನಿಮಾ ಮೊದಲ ದಿನವೇ ಸುಮಾರು 6200 ಸ್ಕ್ರೀನ್ ಗಳಲ್ಲಿ ತೆರೆ ಕಾಣಲಿದೆ ಎನ್ನಲಾಗುತ್ತಿದೆ. […]

Just In National

ದೇಶದಲ್ಲಿನ 74 ಲಕ್ಷಕ್ಕೂ ಅಧಿಕ ವಾಟ್ಸಾಪ್ ಖಾತೆ ನಿರ್ಬಂಧ; ಮೆಟಾ ಸಂಸ್ಥೆ ಹೇಳಿಕೆ!

ಮೆಟಾ ಒಡೆತನದ ಮೆಸೇಜಿಂಗ್ ಪ್ಲಾಟ್‌ ಫಾರ್ಮ್ ವಾಟ್ಸ್ ಆಪ್ ಏಪ್ರಿಲ್ ತಿಂಗಳಲ್ಲಿ ಬರೋಬ್ಬರಿ 74 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನು ನಿರ್ಬಂಧಿಸಿದೆ. ವಾಟ್ಸ್ ಆಪ್ ಸೇವಾ ಷರತ್ತುಗಳ ಉಲ್ಲಂಘನೆ ಮತ್ತು ಬಳಕೆದಾರರ ದೂರುಗಳನ್ನು ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. 7,452,500 ವಾಟ್ಸ್ಆ್ಯಪ್ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ ಎಂದು ಮೆಟಾ ತಿಳಿಸಿದೆ. ಈ ಹಿಂದೆ ಮಾರ್ಚ್ ತಿಂಗಳಲ್ಲಿ ಕೂಡ ಭಾರತದಲ್ಲಿ 47 ಲಕ್ಷಕ್ಕೂ ಅಧಿಕ ಖಾತೆಗಳನ್ನು ನಿರ್ಬಂಧಿಸಲಾಗಿತ್ತು. ಬಳಕೆದಾರರ ದೂರುಗಳಿಗೆ ಮುಂಚಿತವಾಗಿ WhatsApp ಸುಮಾರು 25 ಸಾವಿರ ವಾಟ್ಸಾಪ್ […]

Just In Sports

WTC: ಫೈನಲ್ ಪಂದ್ಯಕ್ಕೂ ಮುನ್ನ ಕಾಂಗರೂ ಪಡೆಗೆ ಶಾಕ್!

ಭಾರತದ ವಿರುದ್ಧ ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್ ಫೈನಲ್‌ ಪಂದ್ಯಕ್ಕೂ ಮೊದಲೇ ಆಸೀಸ್‌ ತಂಡಕ್ಕೆ ಆಘಾತ ಎದುರಾಗಿದೆ. ಆಸ್ಟ್ರೇಲಿಯಾ ತಂಡದ ಸ್ಟಾರ್‌ ಬೌಲರ್‌ ಜೋಶ್‌ ಹೇಜಲ್ವುಡ್‌ ಗಾಯದ ಸಮಸ್ಯೆಯಿದಿಂದಾಗಿ ಫೈನಲ್‌ ಪಂದ್ಯದಿಂದ ಹೊರಗುಳಿದಿದ್ದಾರೆ. ಎರಡು ತಂಡಗಳ ನಡುವಿನ ಫೈನಲ್‌ ಪಂದ್ಯ ಜೂ. 7ರಂದು ಇಂಗ್ಲೆಂಡ್‌ ನ ಓವಲ್‌ ನಲ್ಲಿ ನಡೆಯಲಿದ್ದು, ಇದಕ್ಕಾಗಿ ಉಭಯ ತಂಡಗಳು ಸಜ್ಜಾಗಿವೆ ನಿಂತಿವೆ. ಈ ನಡುವೆ ಆಸೀಸ್‌ ತಂಡದ ಪ್ರಮುಖ ಬೌಲರ್‌ ಆಗಿರುವ ಹೇಜಲ್ವುಡ್‌ ಗಾಯದ ಸಮಸ್ಯೆಯ ಕಾರಣದಿಂದಾಗಿ ಫೈನಲ್‌ ಪಂದ್ಯದಿಂದ ಔಟ್‌ […]

Just In Karnataka Maharashtra National State Uttar Pradesh

LPG Cylinder: ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ; 83.50 ರೂ. ಇಳಿಕೆ!

ತೈಲ ಮಾರುಕಟ್ಟೆ ಕಂಪನಿಗಳು ವಾಣಿಜ್ಯ ಎಲ್ ಪಿಜಿ ಸಿಲಿಂಡರ್ ಬೆಲೆಗಳನ್ನು ಜೂನ್ 1ಕ್ಕೆ ಪರಿಷ್ಕರಿಸಿದ್ದು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ 83.50 ರೂ. ಇಳಿಕೆಯಾಗಿದೆ. ವಾಣಿಜ್ಯ ಮತ್ತು ಗೃಹಬಳಕೆಯ LPG ಸಿಲಿಂಡರ್‌ಗಳ ಮಾಸಿಕ ಪರಿಷ್ಕರಣೆಗಳು ಪ್ರತಿ ತಿಂಗಳ ಮೊದಲ ದಿನ ನಡೆಯುತ್ತವೆ. ಆದರೆ, ಗೃಹ ಬಳಕೆ ಸಿಲಿಂಡರ್ ನಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಕಳೆದ ತಿಂಗಳು, ಹೊಟೇಲ್ ಗಳು ರೆಸ್ಟೋರೆಂಟ್‌ ಗಳಂತಹ ವ್ಯಾಪಾರ ಸಂಸ್ಥೆಗಳು ಬಳಸುವ ವಾಣಿಜ್ಯ ಎಲ್‌ ಪಿಜಿ ಬೆಲೆಯನ್ನು ಪ್ರತಿ ಸಿಲಿಂಡರ್‌ಗೆ 171.5 ರೂಪಾಯಿ ಕಡಿತ […]

Just In National Politics

ದೇಶ ಮುಂದು, ನನ್ನ ಅಭಿವೃದ್ಧಿ ನಾನೇ ಮಾಡಿಕೊಳ್ಳುವೆ ಎಂದು ಮುನ್ನುಗ್ಗಿ; ಪ್ರಧಾನಿ ಕರೆ!

NewDelhi: ಪ್ರತಿಯೊಬ್ಬರೂ ದೇಶವೇ ಮೊದಲು ಎಂಬ ಗುರಿಯೊಂದಿಗೆ ಸಾಗಬೇಕು. ಅಲ್ಲದೇ, ಪ್ರತಿಯೊಬ್ಬರೂ ತಮ್ಮ ಅಭಿವೃದ್ಧಿಗೆ ತಾವೇ ಶ್ರಮಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದ್ದಾರೆ. ನೂತನ ಸಂಸತ್ ಭವನ ಉದ್ಘಾಟಿಸಿದ ನಂತರ ಮಾತನಾಡಿದ ಅವರು, ಕಾರ್ಮಿಕರು (Labours) ಈ ಭವನವನ್ನು ಭವ್ಯಗೊಳಿಸಿದ್ದಾರೆ. ಇಲ್ಲಿ ಕೂರುವ ಸಂಸದರು ಇದನ್ನು ದಿವ್ಯಗೊಳಿಸಬೇಕಿದೆ. ಈ ಭವನ ಮುಂದಿನ ಪೀಳಿಗೆಗೆ ಮಾರ್ಗಸೂಚಿಯಾಗಲಿದೆ. ಇಲ್ಲಿ ಕೈಗೊಳ್ಳುವ ನಿರ್ಣಯ ಭಾರತ (India) ದ ಭವಿಷ್ಯ ರೂಪಿಸಲಿದೆ ಎಂದು ಹೇಳಿದರು. ಸಂಸತ್ ಭವನ (New […]

Just In Karnataka Maharashtra National Uttar Pradesh

New Parliament Building: ನಾಳೆ ಹೊಸ ಯುಗಕ್ಕೆ ಕಾಲಿಡಲಿರುವ ಭಾರತ; ಹೊಸ ಸಂಸತ್ ನ ವಿಶೇಷತೆ ಏನು?

NewDelhi : ನಾಳೆ ದೇಶದ ಹೊಸ ಸಂಸತ್ ಉದ್ಘಾಟನೆಯಾಗಲಿದೆ. (New Parliament Building) ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಲೋಕಾರ್ಪಣೆ ಮಾಡಲಿದ್ದಾರೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರಪೂರದಿಂದ ನಡೆದಿವೆ. ಈ ಕಟ್ಟಡವು ಅಂದಾಜು 1,200 ಕೋಟಿ ರೂ. ವೆಚ್ಚದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗಿದೆ. ಇದರ ವೀಡಿಯೋವನ್ನು ಶುಕ್ರವಾರ ಸಂಜೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಅನಾವರಣ ಮಾಡಿದ್ದರು. 2020ರ ಡಿಸೆಂಬರ್ 10ರಂದು ಪ್ರಧಾನಿ ಭೂಮಿಪೂಜೆ ನೆರವೇರಿಸಿದ್ದರು. ಸದ್ಯ ನೂತನ ಸಂಸತ್ ಭವನದ ಉದ್ಘಾಟನೆಗೆ ಕ್ಷಣಗಣನೆ […]

Just In Sports

Hyderabad: ಪತಿ ಅಮೆರಿಕದಲ್ಲಿ ಸಾವು; ನೋವಿನಲ್ಲಿ ಭಾರತದಲ್ಲಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

Hyderabad : ಪತಿ ಅಮೆರಿಕದಲ್ಲಿ ಹಾಗೂ ಪತ್ನಿ ಭಾರತದಲ್ಲಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆಯೊಂದು ಬೆಳಕಿಗೆ ಬಂದಿದೆ. ಭಾರತದಲ್ಲಿ ಸಾಹಿತಿ (29) ಸಾವನ್ನಪ್ಪಿದ್ದರೆ, ಮನೋಜ್(31) ಅಮೆರಿಕದಲ್ಲಿ ಸಾವನ್ನಪ್ಪಿರುವ ಪತಿಯಾಗಿದ್ದಾರೆ. ಸಾಹಿತಿಯು ಹೈದರಾಬಾದ್ ನ ಅಂಬರಪೇಟೆಯ ಡಿಡಿ ಕಾಲನಿ ನಿವಾಸಿಯಾಗಿದ್ದು, ಕಳೆದ, ಒಂದೂವರೆ ವರ್ಷದ ಹಿಂದೆ ವನಸ್ಥಳಿಪುರಂ ಮೂಲದ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಮನೋಜ್ ರನ್ನು ಮದುವೆಯಾಗಿದ್ದರು. ಮದುವೆ ಬಳಿಕ ಇಬ್ಬರು ಅಮೆರಿಕದ ದಲ್ಲಾಸ್ನಲ್ಲಿ ನೆಲೆಸಿದ್ದರು. ಸಾಹಿತಿ ತನ್ನ ಪಾಲಕರನ್ನು ನೋಡಲೆಂದು ಈ ತಿಂಗಳು ಅಮೆರಿಕದಿಂದ ಬಂದಿದ್ದರು. ಮನೋಜ್ […]

Just In National Politics State

Job: ಅಂಚೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ!

ದೇಶದಲ್ಲಿನ ವಿವಿಧ ಅಂಚೆ ಕಚೇರಿಗಳಲ್ಲಿ ಖಾಲಿ ಇರುವ 12,828 ಗ್ರಾಮೀಣ ಡಾಕ್ ಸೇವಕ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ ಅಧಿಸೂಚನೆ ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು indiapostgdsonline.gov.in.ನಲ್ಲಿ ಅಂಚೆ ಇಲಾಖೆಯ ಅಧಿಕೃತ ವೆಬ್ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಪ್ರಕ್ರಿಯೆ 2023ರ ಮೇ 22ರಂದು ಆರಂಭವಾಗಿ ಜೂನ್ 11ರಂದು ಮುಕ್ತಾಯವಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಉಂಟಾಗುವ ದೋಷಗಳನ್ನು ತಿದ್ದುಪಡಿ ಮಾಡಲು ಜೂನ್ 12ರಿಂದ ಜೂನ್ 14ರ ವೆರೆಗೆ ಕಾಲಾವಕಾಶ ನೀಡಲಾಗಿದೆ.ಸರ್ಕಾರದಿಂದ […]