INS ವಿಕ್ರಾಂತ್ ಹಡಗಿನಲ್ಲಿ ಯೋಧನ ಮೃತ ದೇಹ ಪತ್ತೆ!
ಯುದ್ದ ನೌಕೆ INS ವಿಕ್ರಾಂತ್ ಹಡಗಿನಲ್ಲಿ ಯೋಧನ ಶವ ಪತ್ತೆಯಾಗಿದೆ. ಅದರಲ್ಲೂ ವಿಚಿತ್ರ ಅಂದ್ರೆ ನೇಣು ಬಿಗಿದ ಸ್ಥಿತಿಯಲ್ಲಿ ಭಾರತೀಯ ನೌಕ ದಳದ ನಾವಿಕನ ಶವ ಪತ್ತೆಯಾಗಿದೆ. ಮೃತ ನಾವಿಕನ ಗುರುತು ಇನ್ನು ಕೂಡ ಬಹಿರಂಗ ಪಡಿಸಿಲ್ಲ. ಆದರೆ 19 ವರ್ಷದ ಬಿಹಾರ ಮೂಲದವನು ಎಂಬುದು ತಿಳಿದು ಬಂದಿದೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಕಂಡುಬಂದರೂ ಕೂಡ ಕೂಲಂಕುಶವಾಗಿ ತನಿಖೆ ನಡೆಯಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
