ಧೋನಿ ಫ್ಯಾನ್ಸ್ ಮನಗೆದ್ದ ಹಾರ್ದಿಕ್; ದೇವರು ಒಳ್ಳೆಯವರಿಗೆ ಒಳ್ಳೆಯದು ಮಾಡುತ್ತಾನೆ!
ಪ್ರಸಕ್ತ ಸಾಲಿನ 16ನೇ ಆವೃತ್ತಿಯ ಐಪಿಎಲ್ ಚಾಂಪಿಯನ್ ಆಗಿ ಚೆನ್ನೈ ಸೂಪರ್ ಕಿಂಗ್ಸ್ ಹೊರ ಹೊಮ್ಮಿದೆ. ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಐದು ವಿಕೆಟ್ ಗಳ ರೋಚಕ ಜಯ ಸಾಧಿಸಿದೆ. ಈ ಸಂದರ್ಭದಲ್ಲಿ ರನ್ನರ್ ಅಪ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ, ಚೆನ್ನೈ ತಂಡದ ಅಭಿಮಾನಿಗಳ ಮನ ಗೆದ್ದಿದ್ದಾರೆ. ಮೊದಲು ಬ್ಯಾಟ್ ಮಾಡಿದ ಗುಜರಾತ್ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್ ಗಳಿಸಿತ್ತು. ಸಾಯಿ ಸುದರ್ಶನ್ (96), ಸಹಾ (54), ಶುಭಮನ್ ಗಿಲ್ […]