ಹಿಂದು ಬಾಲಕಿಯನ್ನು ಅಪಹರಿಸಿ, ಮತಾಂತರ ಮಾಡಿ, ಮದುವೆ ಮಾಡಿಕೊಂಡ ವ್ಯಕ್ತಿ; ಪಾಕ್ ಕೋರ್ಟ್ ನಿರಾಕರಣೆ
ಹಿಂದು ಬಾಲಕಿಯನ್ನು ಕಿಡ್ನ್ಯಾಪ್ ಮಾಡಿ ಬಲವಂತವಾಗಿ ಇಸ್ಲಾಂಗೆ (Islam) ಮತಾಂತರ ಮಾಡಲಾಗಿದ್ದು, ಸದ್ಯ ಪೋಷಕರೊಂದಿಗೆ ಬಾಲಕಿ ತೆರಳುತ್ತೇನೆಂದರೂ ಪಾಕಿಸ್ತಾನ ಕೋರ್ಟ್ (Pakistan Court) ನಿರಾಕರಿಸಿದೆ. ಸಿಂಧ್ ಪ್ರಾಂತ್ಯದಲ್ಲಿ 14 ವರ್ಷದ ಹಿಂದೂ ಬಾಲಕಿಯನ್ನು ಅಪಹರಿಸಿ, ಬಲವಂತವಾಗಿ ಇಸ್ಲಾಂಗೆ ಮತಾಂತರಿಸಿ ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಲಾಗಿದೆ. ಅಲ್ಲದೇ, ಬಾಲಕಿಯನ್ನು ಜಿಲ್ಲಾ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಪೋಷಕರ ಜೊತೆಗೆ ಹೋಗಲು ಆಕೆ ಬಯಸಿದರೂ, ಕಳುಹಿಸಲು ಪಾಕ್ ಕೋರ್ಟ್ ನಿರಾಕರಿಸಿದೆ. ಜೂ. 2 ರಂದು ದಕ್ಷಿಣ ಸಿಂಧ್ ಪ್ರಾಂತ್ಯದ ಬೆನಜಿರಾಬಾದ್ ಜಿಲ್ಲೆಯ […]