Kornersite

Bengaluru Crime Just In Karnataka Politics State

karnataka Assembly Election: ಬಿಜೆಪಿ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಮುಖಂಡರಿಂದ ಹಲ್ಲೆ ಆರೋಪ!

Bangalore : ಸಿಲಿಕಾನ್ ಸಿಟಿಯ ಬಿಟಿಎಂ ಲೇಔಟ್‌ ನಲ್ಲಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ.ನಿನ್ನೆ ರಾತ್ರಿ 9 ಗಂಟೆಗೆ ಇಲ್ಲಿನ ಒಂದನೇ ಹಂತದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿ ಶ್ರೀಧರ್‌ ರೆಡ್ಡಿ ಅವರ ಪರ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಮಾಜಿ ಮೇಯರ್‌ ಮಂಜುನಾಥ್‌ ರೆಡ್ಡಿ, ಲಿತೇಶ್‌, ನಂದನ್‌ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು, […]

Bengaluru Just In Karnataka Politics State

Aravinda Bellada: ಅಭಿಮಾನಿ ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ತಲೆ ಮೇಲೆ ಇಟ್ಟುಕೊಂಡ ಶಾಸಕ!

Dharwad : ಅಭಿಮಾನಿಯೊಬ್ಬರು ನೀಡಿದ್ದ ಪಾದರಕ್ಷೆಯನ್ನು ಹುಬ್ಬಳ್ಳಿ- ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅರವಿಂದ್ ಬೆಲ್ಲದ್ ಅವರು ಕಣ್ಣಿಗೆ ಒತ್ತಿಕೊಂಡು ತಮ್ಮ ತಲೆಯ ಮೇಲೆ ಇಟ್ಟುಕೊಂಡಿದ್ದಾರೆ. ಬೆಲ್ಲದ್ ನಿವಾಸದಲ್ಲಿ ಸಮ್ಗರ್ (ಚಮ್ಮಾರ) ಸಮುದಾಯದ ನಿಯೋಗವು ಉಡುಗೊರೆಯಾಗಿ ನೀಡಿದ ಪಾದರಕ್ಷೆಯನ್ನು ಕಣ್ಣಿಗೆ ಒತ್ತಿಕೊಂಡು ತಲೆ ಮೇಲೆ ಇಟ್ಟುಕೊಂಡಿದ್ದಾರೆ. ಬೆಲ್ಲದ್ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ವಲಯಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅವರನ್ನು ಹೊಗಳಿದರೆ ಇನ್ನು ಕೆಲವರು ಇದೊಂದು ರಾಜಕೀಯ ಗಿಮಿಕ್ ಎಂದಿದ್ದಾರೆ. ಉಡುಗೊರೆಯನ್ನು […]

Just In Politics State

ಮತದಾರರಿಗೆ ಉಚಿತ ಆಹಾರ ವಿತರಣೆ ಹೇಳಿಕೆಗೆ ಗರಂ

ಇತ್ತೀಚೆಗಷ್ಟೇ ಮತದಾರರು ಮತ ಚಲಾಯಿಸಿದರೆ, ತಿಂಡಿ ಉಚಿತ ಹಾಗೂ ಮೊದಲ ಬಾರಿಗೆ ಮತ ಹಾಕುತ್ತಿರುವವರು ತಮ್ಮ ಹಕ್ಕು ಚಲಾಯಿಸಿದರೆ ಉಚಿತ ಸಿನಿಮಾ ಟಿಕೆಟ್ ನೀಡಲಾಗುವುದು ಎಂದು ವಿಧ ವಿಧದ ಆಫರ್ ಗಳನ್ನು ಹೋಟೆಲ್ ಮಾಲೀಕರು ನೀಡಿದ್ದರು. ಸದ್ಯ ಈ ಹೋಟೆಲ್ ಮಾಲೀಕರಿಗೆ ಬಿಬಿಎಂಪಿ ಖಡಕ್ ಎಚ್ಚರಿಕೆ ನೀಡಿದೆ. ಉಚಿತ ಆಹಾರ ನೀಡುತ್ತೇನೆ ಎಂದು ಘೋಷಿಸಿರುವ ಹೋಟೆಲ್‌ಗಳ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಬಿಬಿಎಂಪಿ ಎಚ್ಚರಿಕೆ ನೀಡಿದೆ. ಇದು ಪ್ರಚೋದನೆಗಳು ಮತ್ತು ಚುನಾವಣೆ ನೀತಿ ಉಲ್ಲಂಘನೆ ಯಾಗುತ್ತದೆ ಎಂದು […]

Bengaluru Just In Karnataka Politics State

ನಕಲಿ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರವೊಂದನ್ನ ಬರೆದಿದ್ದರು ಎನ್ನಲಾಗಿತ್ತು. ಆದರೆ ಈ ಪತ್ರ ನಕಲಿ. ನನ್ನ ಹೆಸರಲ್ಲಿ ನಕಲಿ ಪತ್ರವನ್ನ ಬರೆಯಲಾಗಿದೆ ಎಂದು ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಇದು ನಾನು ಬರೆದಿರುವ ಪತ್ರ ಅಲ್ಲ, ಕೆಲವು ಕುತಂತ್ರಿಗಳು ಮಾಡಿರೋ ಕೆಲಸ. ನನ್ನ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವೆ ಭಿನ್ನಾಪ್ರಾಯ ಉಂಟುಮಾಡಲು ಈ ನಕಲಿ ಪತ್ರವನ್ನ ಸೃಷ್ಠಿ ಮಾಡಿದ್ದಾರೆ. ನನ್ನ ವಿರುದ್ದ ಹುನ್ನಾರ ನಡೆಸಿದ್ದಾರೆ. ಇದನ್ನ ನಾನು ಸ್ಪಷ್ಟ ಪಡಿಸುತ್ತೇನೆ, […]

Bengaluru Just In Karnataka Politics State

ರಾಜ್ಯದಲ್ಲಿ ಮತದಾನಕ್ಕೆ 1.60 ಲಕ್ಷ ಪೊಲೀಸ್ ಸಿಬ್ಬಂಧಿ ನಿಯೋಜನೆ: ಅಲೋಕ್ ಕುಮಾರ್

ರಾಜ್ಯ ವಿಧಾನಸಭಾ ಚುನಾವಣೆಗೆ ಈಗಾಗಲೇ ಸಕಲ ಸಿಧ್ದತೆಗಳು ನಡೆದಿವೆ. ಇನ್ನು ಪೊಲೀಸ್ ಇಲಾಖೆಯಂತು ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಲು ಟೊಂಕ ಕಟ್ಟಿ ನಿಂತಿದೆ. ಇದಕ್ಕಾಗಿ ರಾಜ್ಯದಲ್ಲಿ ಬರೋಬ್ಬರಿ 1.60 ಲಕ್ಷ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಹಾಗೂ ಸುಸೂತ್ರವಾಗಿ ಮತದಾನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಲು ಪೊಲೀಸರು ಸಜ್ಜಾಗಿದ್ದಾರೆ. ಈಗಾಗಲೇ ಒಟ್ಟು 1.60 ಲಕ್ಷ ಪೊಲೀಸರನ್ನ ನಿಯೋಜನೆ ಮಾಡಲಾಗಿದೆ ಎಂದು ಕಾನೂನು ಮತ್ತು […]

Bengaluru Just In Karnataka Politics State

“ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್” -ಬಿಜೆಪಿ ಅಭಿಯಾನ!

ರಾಜ್ಯದಲ್ಲಿ ಮತದಾನಕ್ಕೆ ಇನ್ನೂ ಎರಡು ಎರಡು ದಿನಗಳು ಮಾತ್ರ ಬಾಕಿ ಇವೆ. ಈ ಮಧ್ಯೆ ಕಾಂಗ್ರೆಸ್ ಹಣಿದು, ಮತದಾರರನ್ನು ಸೆಳೆಯುವುದಕ್ಕಾಗಿ ಬಿಜೆಪಿ ಮತ್ತೊಂದು ಹೊಸ ಅಸ್ತ್ರ ರೂಪಿಸಿದೆ. ಮಂಡ್ಯದ ನೆಲದಲ್ಲಿ ಜೈ ಹನುಮಾನ್ ಕಾಂಗ್ರೆಸ್ ನಿರ್ನಾಮ್ ಎಂಬ ಹೊಸ ಅಭಿಯಾನವನ್ನು ಬಿಜೆಪಿ ಆರಂಭಿಸಿದೆ. ಕಾಂಗ್ರೆಸ್ ತನ್ನ ಮ್ಯಾನೋಫಸ್ಟ್ ನಲ್ಲಿ ಭಜರಂಗದಳ ನಿಷೇಧದ ಕುರಿತು ಪ್ರಸ್ಥಾಪಿಸಿತ್ತು. ಇದನ್ನೇ ಅಸ್ತ್ರವಾಗಿಸಿಕೊಂಡ ಬಿಜೆಪಿ ನಾಯಕರು, ಸಚಿವ ಸಿ.ಎನ್. ಅಶ್ವತ್ಥನಾರಾಯಣ ಅವರಿಂದ ಹನುಮನ ಮುಸುಕು ದಾರಣೆ ಮಾಡಿ ಅಭಿಯಾನ ಆರಂಭಿಸಿದ್ದಾರೆ. ಮಂಡ್ಯದ ಸಂಜಯ್ […]

Bengaluru Just In Karnataka Politics State

ಇಂದು ಸಂಜೆ 5 ಗಂಟೆಯಿಂದ ಬಾರ್ ಗೆ ಬೀಗ: 3 ದಿನ ಸಿಗೋದಿಲ್ಲ ಎಣ್ಣೆ

ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಮಾಡಲಾಗುವುದು. ಹೀಗಾಗಿ ಎಲ್ಲೆಡೆ ಮದ್ಯ ಮಾರಾಟಕ್ಕೆ ಭಾರೀ ಬೇಡಿಕೆ ಬಂದಿದೆ. ಇಂದು ಸಂಜೆ 5 ಗಂಟೆಯಿಂದ ಮದ್ಯ ಮಾರಾಟ ಮತ್ತು ಸಾಗಣೆಗೆ ನಿಷೇಧ ಜಾರಿಯಾಗಲಿದೆ. ಹೀಗಾಗಿ ರಾಜ್ಯದಲ್ಲಿ ಮೇ 9, 10, 13 ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌ ಆಗಲಿದೆ. ಮೇ 8 ರ ಸಂಜೆ 5 ರಿಂದ 10ರ ಮಧ್ಯರಾತ್ರಿ 12 ಗಂಟೆವರೆಗೆ ಎಲ್ಲ ಕ್ಷೇತ್ರಗಳಲ್ಲಿ ಮದ್ಯ ಮಾರಾಟ ಮಳಿಗೆಗಳಲ್ಲಿ ಮದ್ಯ […]

Bengaluru Just In Karnataka Politics State

Karnataka Assembly Election: ಸಂಜೆ 5ರ ನಂತರ ಬಹಿರಂಗ ಪ್ರಚಾರಕ್ಕೆ ತೆರೆ; ಮನೆ ಮನೆಗೆ ತೆರಳಿ ಪ್ರಚಾರ ಮಾಡಲು ಅವಕಾಶ

Bangalore : ಮೇ 10ರಂದು ಮತದಾನ ಇರುವ ಹಿನ್ನೆಲೆಯಲ್ಲಿ ಇಂದು ಸಂಜೆಯಿಂದ ಬಹಿರಂಗ ಚುನಾವಣಾ ಪ್ರಚಾರಕ್ಕೆ ತೆರೆ ಬೀಳಲಿದೆ. ಈ ಹಿನ್ನೆಲೆಯಲ್ಲಿ ಸಭೆ, ಸಮಾರಂಭ, ಉತ್ಸವ, ರ್ಯಾಲಿಗಳಿಗೆ ಇಂದು ಸಂಜೆಯಿಂದಲೇ ತೆರೆ ಬೀಳಲಿದೆ. ಸಂಜೆ 5ರ ನಂತರ ಧ್ವನಿ ವರ್ಧಕಗಳ ಬಳಕೆ ಮಾಡುವಂತಿಲ್ಲ. ಮನೆ ಮನೆಗೆ ತೆರಳಿ ಪ್ರಚಾರ ನಡೆಸಲು ಅಭ್ಯರ್ಥಿ ಸೇರಿ 6 ಜನರಿಗೆ ಮಾತ್ರ ಅವಕಾಶ ನೀಡಲಾಗಿದೆ. ಆಯಾ ಕ್ಷೇತ್ರಗಳ ಅಭ್ಯರ್ಥಿಗಳು ಹೊರತುಪಡಿಸಿ, ಹೊರಗಿನಿಂದ ಬಂದ ಸ್ಟಾರ್ ಪ್ರಚಾರಕರು ಮತ್ತು ಘಟಾನುಘಟಿ ನಾಯಕರು ತಮ್ಮ […]

Bengaluru Crime Just In Karnataka Politics State

Karnataka Assembly Election: ಮತದಾರರಿಗೆ ಹಂಚಲು ತಂದಿದ್ದ ಭಾರೀ ಪ್ರಮಾಣದ ಕುಕ್ಕರ್ ವಶಕ್ಕೆ!

Belagavi : ಮತದಾರರಿಗೆ ಹಂಚಲು ಭಾರೀ ಪ್ರಮಾಣದಲ್ಲಿ ತಂದಿದ್ದ ಕುಕ್ಕರ್(Cooker) ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತಡಸಲೂರ ಗ್ರಾಮದಲ್ಲಿ 25 ಲಕ್ಷ ರೂ. ಮೌಲ್ಯದ 1800 ಕುಕ್ಕರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಈ ಒಂದು ಕುಕ್ಕರ್ ನ ಬೆಲೆ 1400 ರೂ. ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು 25 ಲಕ್ಷ ಮೌಲ್ಯದ ಕುಕ್ಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಕುಕ್ಕರ್ ಡಬ್ಬಿ ಮೇಲೆ […]

Bengaluru Crime Just In Karnataka Politics State

Karnataka Assembly Election: ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಮಧ್ಯೆ ಜಟಾಪಟಿ; ಸಾ.ರಾ. ಮಹೇಶ್ ಪುತ್ರನ ಕಾರಿಗೆ ಕಲ್ಲು!

ರಾಜ್ಯ ವಿಧಾನಸಭೆ ಚುನಾವಣೆ (Assembly Election 2023) ಗೆ ಕ್ಷಣಗಣನೆ ಆರಂಭವಾಗಿದೆ. ಈ ಸಂದರ್ಭದಲ್ಲಿ ರಾಜಕೀಯ ನಾಯಕರ ಜಟಾಪಟಿ ಹೆಚ್ಚಾಗುತ್ತಿದೆ. ಹಲವರು ಸೇಡಿನ ರಾಜಕಾರಣ ಮಾಡುತ್ತಿರುವುದು ರಾಜ್ಯದಲ್ಲಿ ಈ ಬಾರಿ ಬೆಳಕಿಗೆ ಬರುತ್ತಿದೆ. ಹೀಗಾಗಿಯೇ ಹಲವೆಡೆ ನಾಯಕರ ಹಾಗೂ ಪ್ರಚಾರದ ಸಂದರ್ಭದಲ್ಲಿ ಕಲ್ಲು ತೂರಾಟ ಮಾಡುತ್ತಿರುವ ಘಟನೆಗಳು ವರದಿಯಾಗುತ್ತಿರುವ ಮೈಸೂರಿನ ಕೆ.ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಹಾಗೂ ಜೆಡಿಎಸ್ (JDS) ಕಾರ್ಯಕರ್ತರ ನಡುವೆ ಜಗಳ ನಡೆದಿದ್ದು, ಜೆಡಿಎಸ್ ಅಭ್ಯರ್ಥಿ ಸಾ.ರಾ. ಮಹೇಶ್ ಪುತ್ರ ಸಾ.ರಾ. ಧನುಷ್ […]