Kornersite

Crime Just In Karnataka State

ಫಿಲ್ಮಿ ಸ್ಟೈಲ್ ನಲ್ಲಿ ಚೇಸ್ ಮಾಡಿ ಕಳ್ಳನ್ನನ್ನ ಹಿಡಿದ ಪೊಲೀಸ್ ಕಾನ್ ಸ್ಟೇಬಲ್

ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಪೊಲೀಸರು ಕಳ್ಳರನ್ನು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲ ನಡೆದಿದೆ. ಸಿನಿಮೀಯ ರೀತಿಯಲ್ಲಿ ದರೋಡೆ ಹಾಗೂ ದೇವಸ್ಥಾನದ ನಿಧಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಆರೋಪಿಗಳನ್ನೇ ಪೊಲೀಸರು ಬಂಧಿಸಿದ್ದಾರೆ. 6 ಜನ ಕಳ್ಳರ ಗ್ಯಾಂಗನ್ನು ಪೊಲೀಸರು ಬಂಧಿಸಿದ್ದು ದಾವಣಗೆರೆಯ ಅಜಾದ್‌ನಗರ ನಿವಾಸಿ ದಿವಾನ್‌ಸಾಬ್‌ ಜಾವೀದ್, ಜಗಳೂರು ನಿವಾಸಿ ಪಿ.ಕಲ್ಲೇಶಿ(48), ಹುಬ್ಬಳ್ಳಿಯ ಮಲ್ಲಿಕಾರ್ಜುನ(30), ಹನುಮಂತ ಸೋಪಾನಿ ಪವಾರ್(33), ಅಮೀರ್‌ಖಾನ್‌ ಪಠಾಣ್, ಇಳಕಲ್ ಮೂಲದ ಮುರ್ತಾಜಾಸಾಬ್ ಬಂಧಿತರು. ಬಂಧಿತರು ಪುರಾತನ ದೇವಾಲಯಗಳನ್ನೇ ಗುರುತಿಸಿ ನಿಧಿ ಹುಡುಕುತ್ತಿದ್ದರು. ಬಿದರಕೆರೆ-ಸಂತೆ […]

Bengaluru Just In Karnataka State

ಬೆಂಗಳೂರಿನಲ್ಲಿ ದೊಡ್ಡ ಕಚೇರಿ ಖಾಲಿ ಮಾಡಿದ BYJU’S

ದೇಶದ ಅತಿದೊಡ್ಡ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಬೈಜುಸ್ (Byju’s) ಹಲವಾರು ಸಂಕಷ್ಟಗಳಿಗೆ ಸಿಲುಕಿ ಬೆಂಗಳೂರಿನಲ್ಲಿನ ತನ್ನ ಬೃಹತ್ ಕಚೇರಿಯನ್ನು ಖಾಲಿ ಮಾಡುತ್ತಿದೆ ಎನ್ನಲಾಗಿದೆ. ಸಾವಿರಾರು ಉದ್ಯೋಗಿಗಳನ್ನು ಲೇ ಆಫ್ ಮಾಡಿದ್ದ ಬೈಜುಸ್, ಕಲ್ಯಾಣಿ ಟೆಕ್ ಪಾರ್ಕ್ನಲ್ಲಿರುವ 5.58 ಲಕ್ಷ ಚದರ ಅಡಿಯ ಕಚೇರಿ ಸ್ಥಳವನ್ನು ತೆರವುಗೊಳಿಸುತ್ತಿದೆ ಎಂದು ತಿಳಿದು ಬಂದಿದೆ. ಬೈಜುಸ್ ಸಂಸ್ಥೆ ಬೆಂಗಳೂರು ಮೂಲದ್ದಾಗಿದ್ದು ಇಲ್ಲಿ 3 ಕಚೇರಿಗಳನ್ನು ಹೊಂದಿದೆ. ಬ್ರೂಕ್ಫೀಲ್ಡ್ ಪ್ರದೇಶದಲ್ಲಿನ ಕಲ್ಯಾಣಿ ಟೆಕ್ ಪಾರ್ಕ್ನಲ್ಲಿನ ಅದರ ಕಚೇರಿ ಅತಿದೊಡ್ಡದು. ಬನ್ನೇರುಘಟ್ಟ ರಸ್ತೆಯಲ್ಲಿನ ಪ್ರೆಸ್ಟೀಜ್ […]

Crime Just In Karnataka State

ಗ್ಯಾಸ್ ಕಟರ್ ಬಳಸಿ ATM ನಲ್ಲಿದ್ದ 15 ಲಕ್ಷ ದರೋಡೆ

ಗ್ಯಾಸ್ ಕಟರ್ (Gas Cutter) ನಿಂದ ಎಟಿಎಂನಲ್ಲಿದ್ದ (ATM) ಲಕ್ಷಾಂತರ ರೂ. ಹಣವನ್ನು ಖದೀಮರು ಎಗರಿಸಿ ಪರಾರಿಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನ ಕೆನರಾ ಬ್ಯಾಂಕ್ ಎಟಿಎಂನ ಮಿಷನ್ ಅನ್ನು ಗ್ಯಾಸ್ ಕಟರ್‌ನಿಂದ ಕೊರೆದ ಖದೀಮರು, ಹಣ ದೋಚಿ ಪರಾರಿಯಾಗಿದ್ದಾರೆ. ಸುಮಾರು 15 ಲಕ್ಷ ರೂ. ಹಣ ಎಗರಿಸಿರುವ ಮಾಹಿತಿಯನ್ನು ಬ್ಯಾಂಕ್ ಸಿಬ್ಬಂದಿ ನೀಡಿದ್ದು, ಸ್ಥಳಕ್ಕೆ ಕೆಜಿಎಫ್ ಡಿವೈಎಸ್‌ಪಿ ರಮೇಶ್ ಸೇರಿದಂತೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ […]

Just In Karnataka National State

ಬ್ಯಾಂಕ್ ಗ್ರಾಹಕರ ಗಮನಕ್ಕೆ: ಆಗಸ್ಟ್ ನಲ್ಲಿ ಸಾಲು-ಸಾಲಾಗಿ ಬ್ಯಾಂಕ್ ಗಳಿಗೆ ರಜೆ

Bank Holiday: ಬ್ಯಾಂಕ್ ಗಳಿಗೆ ಸಂಬಂಧಪಟ್ಟ ಕೆಲಸಗಳು ಇದ್ದರೇ ಇದೇ ತಿಂಗಳಲ್ಲಿ ಮುಗಿಸಿಕೊಂಡು ಬಿಡಿ. ಯಾಕೆಂದ್ರೆ ಮುಂದಿನ ತಿಂಗಳು ಅಂದರೆ ಆಗಸ್ಟ್ ನಲ್ಲಿ ಬ್ಯಾಂಕ್ ಗಳಿಗೆ ಸಾಲು ಸಾಲಾಗಿ ರಜೆ ಇವೆ. ವಿವಿಧ ರಾಜ್ಯಗಳಲ್ಲಿನ ಬ್ಯಾಂಕುಗಳು ಬರೋಬ್ಬರಿ 14 ದಿನಗಳವರೆಗೆ ಬಂದ್ ಇರಲಿವೆ. ಇವುಗಳಲ್ಲಿ ಎರಡನೇ ಹಾಗೂ ನಾಲ್ಕನೇ ಶನಿವಾರ ಮತ್ತು ಭಾನುವಾರದ ರಜೆಗಳು ಕೂಡ ಸೇರಿವೆ. ಇನ್ನು ಈ ರಜೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ, ಪಾರ್ಸಿ ಹೊಸ ವರ್ಷ ಹಾಗೂ ರಕ್ಷಾ ಬಂಧನ್ ನಂತಹ ಹಬ್ಬಗಳು ಕೂಡ […]

Bengaluru Just In Karnataka State

ಬೆಂಗಳೂರಲ್ಲಿ ಕಡಿಮೆ ಆಯ್ತು ಟೊಮೆಟೊ ಬೆಲೆ! ಕೆ.ಜಿಗೆ ಎಷ್ಟಿದೆ ಗೊತ್ತಾ..?

Tomato Price: ಟೊಮೆಟೊ ದರದಲ್ಲಿ ಇಳಿಕೆ ಕಂಡಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಟೊಮೆಟೊ ಬೆಲೆ ಇಳಿಕೆಯಾಗಿದೆ. ಬೆಂಗಳೂರಿನಾದ್ಯಂತ ಹಾಪ್ ಕಾಮ್ಸ್ ಘಟಕದಲ್ಲಿ ಟೊಮೆಟೊ ಪ್ರತಿ ಕೆ.ಜಿ ಗೆ 99 ರೂಪಾಯಿಗೆ ಮಾರಾಟವಾಗಿದೆ. ಆದರೆ ದುರಂತ ಅಂದರೆ ಟೊಮೆಟೊ ದರ ಕಡಿಮೆಯಾಗಿದ್ದರೂ ಕೂಡ ಚಿಲ್ಲರೆ ವ್ಯಾಪಾರಿಗಳು, ತಳ್ಳೋ ಗಾಡಿಯವರು ಮಾತ್ರ 120 ರಿಂದ 140 ರೂಪಾಯಿವರೆಗೂ ಮಾರಾಟವನ್ನು ಮೂಂದುವರೆಸಿದ್ದಾರೆ. ಒಂದು ತಿಂಗಳ ಹಿಂದೆ ಕೆ.ಜಿ ಗೆ 100 ರೂಪಾಯಿ ಇದ್ದ ಟೊಮೆಟೊ ಬೆಲೆ 140 ಕ್ಕೆ ಏರಿತ್ತು. ಆದರೆ […]

Just In Karnataka State

ಗೃಹ ಲಕ್ಷ್ಮೀ ಯೋಜನೆಗೆ ಸಂಕಷ್ಟ; ಒಂದು ಕೇಂದ್ರದಿಂದ ಪ್ರತಿದಿನ 60 ಅರ್ಜಿಗಳ ಸ್ವೀಕಾರ

ಕಾಂಗ್ರೆಸ್ ಸರ್ಕಾರದ ನಾಲ್ಕನೇ ಗ್ಯಾರಂಟಿ ‘ಗೃಹಲಕ್ಷ್ಮಿ’ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಎದುರಾಗಿದೆ. ದಿನವೊಂದಕ್ಕೆ ಒಂದು ಕೇಂದ್ರದಿಂದ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸುವಂತೆ ಸುತ್ತೋಲೆ ಹೊರಡಿಸಿದ್ದ ಸರ್ಕಾರದ ನಿರ್ಧಾರದಿಂದ ‘ಗೃಹಲಕ್ಷ್ಮಿಯರು’ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 60 ಅರ್ಜಿ ಸ್ವೀಕರಿಸುವ ಕೇಂದ್ರದಲ್ಲಿ 200-300 ಮಹಿಳೆಯರು ನೋಂದಣಿಗೆ ತೆರಳಿರುವುದರಿಂದ ಕೇಂದ್ರದ ಸಿಬ್ಬಂದಿ ಹೈರಾಣಾಗಿದ್ದಾರೆ. ಈ ಸಮಸ್ಯೆ ಉಂಟಾಗಿದ್ದರಿಂದ ಒಂದು ದಿನದ ನಂತರ ಸರ್ಕಾರ ನಿಯಮ ಬದಲಾಯಿಸಿದ್ದು, ದಿನದ ನೋಂದಣಿ ಮಿತಿ ಘೋಷಿಸಿದೆ. ಮೊಬೈಲ್ ಗೆ ನೋಂದಣಿ ವೇಳಾಪಟ್ಟಿಯ ಸಂದೇಶ ಬಾರದಿದ್ದವರು ಸರ್ಕಾರ ನೀಡಿರುವ […]

Just In Karnataka State

ಈಗಿನಿಂದಲೇ ಲೋಕಸಭೆಯ ತಯಾರಿ ನಡೆಸಿದ ಕಾಂಗ್ರೆಸ್!

ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವಂತೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ರೀತಿಯಲ್ಲಿಯೇ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ತಂತ್ರ ರೂಪಿಸುತ್ತಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಯ ನಂತರ ಮತ ಬದಲಾವಣೆ, ಜನರ ಮನಸ್ಥಿತಿ, ಜನ ಪ್ರತಿನಿಧಿಗಳ ಬಲ, ಟಿಕೆಟ್ ಆಕಾಂಕ್ಷಿಗಳು, ಪ್ರತಿಪಕ್ಷಗಳ ಬಲಾಬಲ, ಚುನಾವಣೆಯಲ್ಲಿ ಸ್ಥಳೀಯವಾಗಿ ಪರಿಣಾಮ ಬೀರುವ ಸಂಗತಿ, ಹಾಲಿ ಸಂಸದರ ಕುರಿತು ಇರುವ ಅಭಿಪ್ರಾಯ ಸೇರಿದಂತೆ […]

Bengaluru Just In Karnataka State

ಕನ್ನಡಿಗರಿಗೆ ಗುಡ್ ನ್ಯೂಸ್: ಏನದು..? ನೀವೇ ನೋಡಿ

Bangalore: CBSE ಶಾಲೆಗಳಲ್ಲಿ(CBSE school) ಇಂಗ್ಲೀಷ (English) ಭಾಷೆಯ ಪಟ್ಯಪುಸ್ತಕಗಳು ಇದ್ದವು. ಆದರೆ ಇದೀಗ ಸಿಬಿಎಸ್ ಇ ಶಾಲೆಗಳಲ್ಲಿ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಲು ಕೇಂದ್ರ ಸರ್ಕಾರ ಪ್ರೌಢ ಶಿಕ್ಷಣ ಮಂಡಳಿ ಶಾಲೆಗಳಿಗೆ ಸೂಚನೆ ನೀಡಿದೆ. ನೂತನ ರಾಷ್ತ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಈ ಮಹತ್ವದ ಸೂಚನೆ ಹೊರಡಿಸಲಾಗಿದೆ. 2024ರ ಶೈಕ್ಷಣಿಕ ಸಾಲಿನಿಂದ ಕನ್ನಡ ಸೇರಿದಂತೆ ಸ್ಥಳೀಯ ಭಾಷೆಗಳಲ್ಲಿಯೂ ಶಿಕ್ಷಣ ನೀಡಬೇಕು ಎಂದು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಇಲ್ಲಿಯವರೆಗೆ ಸಿಬಿಎಸ್ ಇ ಶಾಲೆಗಳಿಲ್ಲಿ ಪಟ್ಯಪುಸ್ತಕಗಳು ಕೇವಲ ಇಂಗ್ಲೀಷ […]

Just In Karnataka State

ಅನಾಥ ಆನೆ ಮರಿಗೆ ಆಸರೆಯಾದ ಕಾವಾಡಿ ದಂಪತಿ

‘The Elephant Whisperers’ ಕಿರುಚಿತ್ರ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಈ ಕಿರುಚಿತ್ರ ಆಸ್ಕರ್ (Oscar) ಗೆ ನಾಮಿನೇಟ್ ಆಗಿ ಪ್ರಶಸ್ತಿಯನ್ನೂ ಗಿಟ್ಟಿಸಿಕೊಂಡಿದೆ. ಅನಾಥ ಆನೆ (Elephant) ಮರಿಗಳನ್ನ ಮಕ್ಕಳಂತೆ ನೋಡಿಕೊಳ್ಳುವ ದಂಪತಿ. ಮೂಕ ಪ್ರಾಣಿ ಹಾಗೂ ತಂದೆ-ತಾಯಿಯಂತೆ ನೋಡಿಕೊಳ್ಳುವ ದಂಪತಿಯ ಪ್ರೀತಿ ಬಾಂಧವ್ಯದ ಕಿರುಚಿತ್ರವಿದು. ಅದೇ ರೀತಿ ಕಾವಾಡಿ ದಂಪತಿಯೊಬ್ಬರು ಅನಾಥ ಆನೆ ಮರಿಯೊಂದನ್ನ ಸ್ವಂತ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ರಾಂಪುರ ಆನೆ ಶಿಬಿರದ ಕಾವಾಡಿ ರಾಜು ಮತ್ತು ರಮ್ಯಾ ಆನೆ […]

Just In Karnataka State

Rain Update: ರಾಜ್ಯದ 28 ಜಿಲ್ಲೆಗಳಲ್ಲಿ ಮಳೆಯೇ ಇಲ್ಲ!!

ರಾಜ್ಯದಲ್ಲಿ 28 ಜಿಲ್ಲೆಗಳಲ್ಲಿ ಮಳೆಯೇ ಇಲ್ಲದ ಕಾರಣ ಬರಗಾಲದ ಮುನ್ಸೂಚನೆ ಸಿಕ್ತಿದೆ. 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಪ್ರಮಾಣದ ಮಳೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ. ಕಳೆದ ತಿಂಗಳಿನಲ್ಲಿ 56% ಮಳೆಯ ಕೊರತೆಯಾಗಿತ್ತು. ಈ ತಿಂಗಳ ಮೊದಲ 11 ದಿನ 34% ಮಾತ್ರ ಮಳೆಯಾಗಿದೆ. ಉತ್ತರ ಒಡನಾಡಿನಲ್ಲಿ 55% ಮಳೆ ಕಡಿಮೆಯಾಗಿದ್ದು, ದಕ್ಷಿಣ ಒಳನಾಡಿನಲ್ಲಿ 18% ಮಳೆ ಕಡಿಮೆಯಾಗಿದೆ ಹಾಗೂ ಉತ್ತರ ಒಳನಾಡಿನಲ್ಲಿ 13 ಜಿಲ್ಲೆಗಳಲ್ಲಿ ಮಳೆಗೆ ಬರ ಬಂದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತೀ ಹೆಚ್ಚು ಅಂದ್ರೆ 77% ಮಳೆಯ […]