Karnataka Assembly Election: ನಾಮಪತ್ರ ಸಲ್ಲಿಕೆಗೆ ಇದೇ ಕೊನೆಯ ದಿನ!
Bangalore : ರಾಜ್ಯ ವಿಧಾನಸಭಾ ಚುನಾವಣೆಗೆ(Karnataka Assembly Elections 2023) ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ. ಹೀಗಾಗಿ ಬಹುತೇಕ ಪಕ್ಷಗಳು ತಮ್ಮ ಅಭ್ಯರ್ಥಿಗಳ ಹೆಸರನ್ನು ಘೋಷಿಸಿವೆ. ಅದರಲ್ಲಿಯೂ ಏಪ್ರಿಲ್ 20ರಂದು ವರ್ಷದ ಮೊದಲ ಅಮವಾಸ್ಯೆ ಹಿನ್ನೆಲೆಯಲ್ಲಿ ಆಚಾರ-ವಿಚಾರ ಪಾಲಿಸುವ ಬಹುತೇಕ ಅಭ್ಯರ್ಥಿಗಳು ಏಪ್ರಿಲ್ 19ರ ಬುಧವಾರದಂದೇ ನಾಮಪತ್ರ ಸಲ್ಲಿಸಿದ್ದಾರೆ. ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಕೊನೆಯ ಪಟ್ಟಿ ಬಿಡುಗಡೆ ಮಾಡಿದೆ. ಇಂದು ಕೂಡ ಅನೇಕ ಪ್ರಮುಕ ನಾಯಕರು ನಾಮಪತ್ರ ಸಲ್ಲಿಸಲಿದ್ದಾರೆ. […]









