Kornersite

Bengaluru Just In Karnataka Politics State

CM Siddaramaiah: ಕುರಿ ಲೆಕ್ಕವೂ ಗೊತ್ತು; ರಾಜ್ಯ ಮುನ್ನಡೆಸೋದು ಗೊತ್ತು!

ಸಿದ್ದರಾಮಯ್ಯ ಅವರು ರಾಜ್ಯದ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. 2ನೇ ಬಾರಿಗೆ ಅವರು ರಾಜ್ಯದ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಬಡತನದಲ್ಲಿಯೇ ಹುಟ್ಟಿದ ಈ ಕುರಿಗಾಹಿ, ಇಂತಹ ದೊಡ್ಡ ಸಾಧನೆ ಮಾಡಿರುವುದು ನಿಜಕ್ಕೂ ಅದ್ಭುತವೇ ಸರಿ. ತಳಸಮುದಾಯದ ವ್ಯಕ್ತಿಯೊಬ್ಬ ರಾಜಕೀಯದಲ್ಲಿ ಬೆಳೆದು ಉತ್ತಮ ಸ್ಥಾನಗಳನ್ನು ಅಲಂಕರಿಸಿ ಎದೆಯುಬ್ಬಿಸಿ ನಡೆಯುತ್ತಿದ್ದದ್ದು, ಅನೇಕರ ಕಣ್ಣು ಕೆಂಪಾಗಿಸಿತ್ತು. 1994ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಸಿದ್ದರಾಮಯ್ಯ ಅವರು ಹೆಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಹಣಕಾಸು ಸಚಿವರಾಗಿದ್ದರು. ಆಗ ಅವರಿಗೆ ಬಯಸದೆ ಹಣಕಾಸು ಖಾತೆ […]

Bengaluru Just In Karnataka Politics State

ವಿಧಾನಸಭೆಗೆ ರೈಲಿನಲ್ಲಿ ಆಗಮಿಸಿದ ನೂತನ ಶಾಸಕ; ಮತದಾರರ ಮೆಚ್ಚುಗೆ!

Mandya : ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮತ್ತು ಡಿ.ಕೆ. ಶಿವಕುಮಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಶಾಸಕರು ಮತ್ತು ಅತಿಥಿಗಳು ರಾಜಧಾನಿಗೆ ಆಗಮಿಸಿದ್ದಾರೆ. ಇದರ ನಡುವೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸರಳತೆ ಪ್ರದರ್ಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ದರ್ಶನ್ ಪುಟ್ಟಣ್ಣಯ್ಯ ಅವರು ಪ್ರಮಾಣ ವಚನ ಕಾರ್ಯಕ್ರಮಕ್ಕೆ ರೈಲಿನಲ್ಲಿ ಆಗಮಿಸುವ ಮೂಲಕ ಸರಳತೆ ಮೆರೆದಿದ್ದಾರೆ. ರಾತ್ರಿಯೇ ಮಂಡ್ಯದಿಂದ ಸಾಮಾನ್ಯ ಪ್ರಜೆಯಂತೆ ಅವರು ರೈಲಿನ ಮೂಲಕ ಆಗಮಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ […]

Bengaluru Just In Karnataka Politics State

CM Siddaramaiah: ಘೋಷಿಸಿದ ಗ್ಯಾರಂಟಿಗಳಿಗೆ ತಾತ್ವಿಕ ಒಪ್ಪಿಗೆ; ಮುಂದಿನ ಸಂಪುಟದಲ್ಲಿ ಆದೇಶ!

Bangalore: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಮೊದಲ ಕ್ಯಾಬಿನೆಟ್‌ ನಲ್ಲಿಯೇ ಚುನಾವಣೆ ಸಂದರ್ಭದಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗೆ (Guarantee Scheme)ಗಳಿಗೆ ತಾತ್ವಿಕ ಒಪ್ಪಿಗೆ ಸಿಕ್ಕಿದ್ದು ಮುಂದಿನ ಕ್ಯಾಬಿನೆಟ್‌ (Cabinet) ನಂತರ ಆದೇಶ ಹೊರಡಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಮಾಣ ವಚನ ಸ್ವೀಕರಿ, ಮೊದಲ ಕ್ಯಾಬಿನೆಟ್ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲ ಮನೆಗಳಿಗೂ 200 ಯೂನಿಟ್‌ ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಪ್ರತಿ ತಿಂಗಳು ಕುಟುಂಬಕ್ಕೆ 10 ಕೆಜಿ ಅಕ್ಕಿ ಉಚಿತ […]

Bengaluru Just In Karnataka Politics State

Ramalinga Reddy: 8 ಬಾರಿ ಶಾಸಕರಾಗಿರುವ ಹಿರಿಯ ನಾಯಕನಿಗೆ ಒಲಿದು ಬಂದ ಸಚಿವ ಸ್ಥಾನ

Bangalore : 8 ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿರುವ ರಾಮಲಿಂಗಾರೆಡ್ಡಿ(Ramalinga Reddy) ಅವರಿಗೆ ಈಗ ಮತ್ತೊಮ್ಮೆ ಸಚಿವ ಸ್ಥಾನ ಹುಡುಕಿಕೊಂಡು ಬಂದಿದೆ. ಸಿದ್ದರಾಮಯ್ಯ(Siddaramaiah) ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮಾಜಿ ಗೃಹ ವ್ಯವಹಾರಗಳ ಸಚಿವ, ಸಾರಿಗೆ ಸಚಿವ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮತ್ತು ಸಕಾಲ ಸಚಿವ, ಕರ್ನಾಟಕದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರೂ ಆಗಿದ್ದ ರಾಮಲಿಂಗಾರೆಡ್ಡಿ ಅವರಿಗೆ ಮತ್ತೊಮ್ಮೆ ಸಚಿವ ಸ್ಥಾನ ಒಲಿದುಬಂದಿದೆ. ಜೂನ್ 12, 1953 ರಂದು ಬೆಂಗಳೂರಿನಲ್ಲಿ ಜನಿಸಿರುವ ರಾಮಲಿಂಗಾರೆಡ್ಡಿಯವರು 1973-74 […]

Bengaluru Just In Karnataka Politics State

Priyank Kharge: ತಂದೆಯಂತೆಯೇ ಹೋರಾಟಗಾರ; ಬಿಜೆಪಿ ವಿರುದ್ಧ ಸದಾ ಕಾಲ ಗುಡುಗುತ್ತಿದ್ದ ಪ್ರಿಯಾಂಕ್ ಗೆ ಸಚಿವ ಸ್ಥಾನ!

ಕಲಬುರಗಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಎಂ. ಖರ್ಗೆ (Priyank Kharge) ತಂದೆಯಂತೆಯೇ ಹೋರಾಟಗಾರ. ಬಿಜೆಪಿ ವಿರುದ್ಧ ಸದಾ ಕಾಲ ಸಮರ ಸಾರುತ್ತಿದ್ದ ನಾಯಕನಿಗೆ ಸದ್ಯ ಸಚಿವ ಸ್ಥಾನ ಲಭಿಸಿದೆ. 1978 ನವೆಂಬರ್ 22 ರಂದು ಜನಿಸಿ ಪ್ರಿಯಾಂಕ್, ಬಿಎ ಪದವೀಧರರಾಗಿ ಡಿಪ್ಲೋಮಾ ಇನ್ ಗ್ರಾಫಿಕ್ಸ್ ಮತ್ತು ‌ಎನಿಮೇಷನ್ ವ್ಯಾಸಂಗ ಮಾಡಿದ್ದಾರೆ. ದೇಶ ಹಾಗೂ ವಿದೇಶ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ ಕೂಡ ಮಾಡಿದ್ದಾರೆ. ಕಲಬುರಗಿಯಲ್ಲಿ ನೆಲೆಸಿರುವ ಇವರು, ಹಿಂದೆ ತಂದೆ ಪ್ರತಿನಿಧಿಸುತ್ತಿದ್ದ ಕ್ಷೇತ್ರದಲ್ಲಿ ಜಯ […]

Bengaluru Just In Karnataka Politics State

Satish Jarakiholi: ಸರಳ ಜೀವಿ, ಮೌಢ್ಯದ ವಿರುದ್ಧ ಸದಾ ಹೋರಾಡುವ ಜಾರಕಿಹೊಳಿಗೆ ಸಚಿವ ಸ್ಥಾನ!

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ (Satish Jarkiholi) ಬರೋಬ್ಬರಿ 5ನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಸದಾ ಮೌಢ್ಯತೆ ವಿರುದ್ಧ ಸಮರವನ್ನು ಮಾನವ ಬಂಧುತ್ವ ವೇದಿಕೆಯ ಮೂಲಕ ರಾಜ್ಯಾದ್ಯಂತ ಮೂಢನಂಬಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅಪರೂಪದ ರಾಜಕಾರಣಿ‌. ಸಿದ್ದರಾಮಯ್ಯ ಕಟ್ಟಾ ಶಿಷ್ಯ ಎಂದೇ ಗುರುತಿಸಿಕೊಂಡಿರುವ ಸತೀಶ್ ಜಾರಕಿಹೊಳಿ ರಾಜಕೀಯ ಜೀವನವೇ ವಿಭಿನ್ನ. 1992ರ ಗೋಕಾಕ್ ನಗರಸಭೆ ಚುನಾವಣೆಯಲ್ಲಿ ತಮ್ಮ ಬೆಂಬಲಿಗರನ್ನು ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ಲಿಸಿ ಗೆಲುವ ಸಾಧಿಸಿದ ವ್ಯಕ್ತಿ. ಆ ಮೂಲಕವೇ ಅವರು […]

Bengaluru Just In Karnataka Politics State

MB Patil: ಚಿಕ್ಕ ವಯಸ್ಸಿನಲ್ಲಿಯೇ ವಿಧಾನಸಭೆ ಪ್ರವೇಶಿಸಿದ ನಾಯಕನಿಗೆ ಸಚಿವ ಸ್ಥಾನ

ವಿಜಯಪುರ: ಅತೀ ಚಿಕ್ಕ ವಯಸ್ಸಿನಲ್ಲಿಯೇ ಲಿಂಗಾಯತ ಸಮುದಾಯದ ಪ್ರಭಲ ನಾಯಕ ಎಂ.ಬಿ ಪಾಟೀಲ್‌ (M B Patil) ವಿಧಾನಸಭೆ ಪ್ರವೇಶಿಸಿದ್ದರು. ಬಲೇಶ್ವರ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕ, ಜಲಸಂಪನ್ಮೂಲ ಸಚಿವರಾಗಿ ಈ ಹಿಂದೆ ಅಧಿಕಾರ ಅನುಭವಿಸಿದ್ದಾರೆ. ಈಗ ಅವರು, ಸತತ ನಾಲ್ಕನೇ ಬಾರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. 1964 ಅಕ್ಟೋಬರ್ 7 ರಂದು ಜನಿಸಿದ ಇವರು ರಾಜಕೀಯ ಹಿನ್ನೆಲೆ ಹೊಂದಿರುವ ಕುಟುಂಬದವರು. ತಂದೆ ಬಿ.ಎಂ ಪಾಟೀಲ್‌ ಕೂಡ ಶಾಸಕರಾಗಿದ್ದವರು. ಬಿಇ ಸಿವಿಲ್ […]

Bengaluru Just In Karnataka Politics State

ಎಲ್ಲ ಗ್ಯಾರಂಟಿಗಳಿಗೂ ಇಂದೇ ಅನುಮೋದನೆ; ಸಿಎಂ ಸಿದ್ದರಾಮಯ್ಯ ಘೋಷಣೆ!

Bangalore : ಸಿಎಂ ಆಗಿ ಸಿದ್ದರಾಮಯ್ಯ(Siddaramaiah) ನಗರದ ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಜನರ ಆಶೀರ್ವಾದಿಂದ ನಮ್ಮ ಸರ್ಕಾರ ಬಂದಿದೆ. ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಸೇರಿ ಅನೇಕರು ಪ್ರಚಾರ ಮಾಡಿದರು, ಪಕ್ಷದ ಪರ ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದಗಳು. ಜೊತೆಗೆ ನಾವು ಕೊಟ್ಟ ಐದು ಗ್ಯಾರಂಟಿಗಳನ್ನು ಇಂದೇ ಅನುಮೋದನೆ ನೀಡುತ್ತೇನೆ ಎನ್ನುವ ಮೂಲಕ ರಾಜ್ಯದ ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದಾರೆ. ವಿವಿಧ ರಾಜ್ಯಗಳ ನಾಯಕರು ನಮಗೆ ಶುಭ ಹಾರೈಸಲು […]

Bengaluru Just In Karnataka Politics State

KJ George: ಹಿರಿಯ ನಾಯಕ ಕೆಜೆ ಜಾರ್ಜ್ ಗೆ ಒಲಿದು ಬಂದ ಸಚಿವ ಸ್ಥಾನ!

ಕ್ರಿಶ್ಚಿಯನ್ ಸಮುದಾಯದ ಕೆಜೆ ಜಾರ್ಜ್ (KJ George) ಕಾಂಗ್ರೆಸ್ ನಲ್ಲಿ ಹಿರಿಯ ರಾಜಕಾರಣಿ.. ಅವರು ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಿಂದ 6ನೇ ಬಾರಿ ಆಯ್ಕೆಯಾಗಿದ್ದಾರೆ. ಕೆಲಚಂದ್ರ ಜೋಸೆಫ್ ಜಾರ್ಜ್. ಕೆಜೆ ಜಾರ್ಜ್ ಅವರು 24 ಆಗಸ್ಟ್ 1949 ರಂದು ಈಗಿನ ಕೇರಳದ ಕೊಟ್ಟಾಯಂನ ಚಿಂಗವನಂನಲ್ಲಿ ಕೆಲಚಂದ್ರ ಚಾಕೋ ಜೋಸೆಫ್ ಮತ್ತು ಮರಿಯಮ್ಮ ಜೋಸೆಫ್ ದಂಪತಿಗೆ ಜನಿಸಿದವರು. ಈ ಕುಟುಂಬ1960 ರ ದಶಕದಲ್ಲಿ ಕರ್ನಾಟಕದ ಕೊಡಗು ಜಿಲ್ಲೆಗೆ ಸ್ಥಳಾಂತರಗೊಂಡು ನಂತರ ಬೆಂಗಳೂರಿಗೆ ಬಂದಿತು. ಕೆ.ಜೆ.ಜಾರ್ಜ್ ಅವರು 1968ರಲ್ಲಿ ಭಾರತೀಯ ರಾಷ್ಟ್ರೀಯ […]

Bengaluru Karnataka Politics State

KH Muniyappa: ರಾಜ್ಯದ ಹಿರಿಯ ರಾಜಕಾರಣಿಗೆ ಒಲಿದ ಸಚಿವ ಪಟ್ಟ

ರಾಜ್ಯ ರಾಜಕೀಯದ ಅತ್ಯಂತ ಹಿರಿಯ ರಾಜಕಾರಣ ಕೆ.ಹೆಚ್‌.ಮುನಿಯಪ್ಪ ಅವರು, 1960ರಲ್ಲಿ ತಮ್ಮ ರಾಜಕೀಯ ಜೀವನಕ್ಕೆ ಮುನ್ನುಡಿ ಬರೆದಿದ್ದರು. ಸದ್ಯ ಅವರು ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದಿದ್ದಾರೆ. ಇಂದು ನಡೆದ ಸಮಾರಂಭದಲ್ಲಿ ಕೆ.ಹೆಚ್. ಮುನಿಯಪ್ಪ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಕಂಬದಹಳ್ಳಿ ಗ್ರಾಮದಲ್ಲಿ ಮಾರ್ಚ್‌ 07, 1948ರಲ್ಲಿ ಜನಿಸಿದ್ದ ಅವರಿಗೆ ಸದ್ಯ 75 ವರ್ಷ ವಯಸ್ಸು. ವಕೀಲರಾಗಿ ಕಾರ್ಯನಿರ್ವಹಿಸಿದ್ದು, ಸಾಮಾಜಿಕ ಕಾರ್ಯಕರ್ತರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕೆ.ಹೆಚ್ ಮುನಿಯಪ್ಪ ಮೊದಲಿಗೆ 1978-83 […]