ರೈತರ ಅಕೌಂಟ್ ಗೆ ಬರಲಿದೆ ನಾಳೆಯೇ ಪಿಎಂ ಕಿಸಾನ್ ಹಣ
ರೈತರ ಖಾತೆಗೆ ನಾಳೆಯೇ ನೇರವಾಗಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಕಿಸಾನ್ ಸನ್ಮಾನ್ ನಿಧಿಯ 14ನೇ ಕಂತಿನ ಹಣ ವರ್ಗಾವಣೆಯಾಗಲಿದೆ. ಪಿಎಂ ಕಿಸಾನ್ ಫಲಾನುಭವಿಗಳಿಗೆ ಸರ್ಕಾರ ಸುಮಾರು 8.5 ಕೋಟಿ ರೂಪಾಯಿ ಬಿಡುಗಡೆ ಮಾಡಲಿದೆ. ರೈತರು ನಾಳೆ ಸಂಜೆ ಹೊತ್ತಿಗೆ ತಮ್ಮ್ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಅರ್ಹ ರೈತರಿಗೆ ನಾಲ್ಕು ತಿಂಗಳಿಗೊಮ್ಮೆ ಪ್ರತಿ ಕಂತಿನಲ್ಲೂ ಎರಡು ಸಾವಿರ ಹಣ ಪಾವತಿಸುತ್ತದೆ. ಒಂದು ವರ್ಷದಲ್ಲಿ ಫಲಾನುಭವಿಗಳು ಒಟ್ಟು ಆರು ಸಾವಿರ ಹಣವನ್ನು ಪಡೆಯುತ್ತಾರೆ. […]