4.18 ಕೋಟಿಯ ಲ್ಯಾಂಬೋರ್ಗಿನಿ ಕಾರು ಖರೀದಿಸಿದ ಸಚಿನ್ ತೆಂಡುಲ್ಕರ್..!
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಐಶಾರಾಮಿ ಲ್ಯಾಂಬೋರ್ಗಿನಿ ಕಾರು ಖರೀದಿ ಮಾಡಿದ್ದಾರೆ. ಈ ಕಾರು ಬರೋಬ್ಬರಿ 4.18 ಕೋಟಿ ಬೆಲೆಬಾಳುತ್ತೆ. ಸಚಿನ್ ತೆಂಡುಲ್ಕರ್ ಬಳಿ ಈಗಾಗಲೇ ಹಲವಾರು ಕಾರುಗಳಿವೆ. ಈ ಕಾರುಗಳಿಗೆ ಇದೀಗ ಐಶಾರಾಮಿ ಕಾರು ಲ್ಯಾಂಬೋರ್ಗಿನಿ ಕೂಡ ಆಡ್ ಆಗಿದೆ. ಇತ್ತೀಚೆಗೆ ಸಚಿನ್, ಪೋರ್ಸೆ 911 ಟರ್ಬೊ ಎಸ್ ಮುಂದೆ ನಿಂತ ಫೋಟೋ ಶೇರ್ ಮಾಡಿ ಸುದ್ದಿಯಾಗಿದ್ರು. ಇದೀಗ ಲ್ಯಾಂಬೋರ್ಗಿನಿ ಖರೀದಿ ಮಾಡುವುದರ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ ಸಚಿನ್ ತೆಂಡುಲ್ಕರ್.