Karnataka Assembly Election: ಮಾಜಿ ಡಿಸಿಎಂ ವಿರುದ್ಧ ನಾಲಿಗೆ ಹರಿಬಿಟ್ಟ ಜಾರಕಿಹೊಳಿ!
Chikkodi : ಶಾಸಕ ರಮೇಶ ಜಾರಕಿಹೊಳಿ ಕಾಗವಾಡದ ಅನಂತಪುರದಲ್ಲಿ ಪ್ರಚಾರ ನಡೆಸಿದ್ದು, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಹರಿಹಾಯ್ದಿದ್ದಾರೆ. ಅಥಣಿ ವಿಧಾನಸಭಾ ಕ್ಷೇತ್ರದ ಜನರು ಒಳಗೊಳಗೆ ಸವದಿ ಸೋಲಿಸಲು ಸಿದ್ಧರಾಗಿದ್ದಾರೆ. ಅಂಬಾದೇವಿಯ ಆಶೀರ್ವಾದದಿಂದ ಅದೊಂದು ಆದರೆ ಸವದಿ ಹೆಣ ಬಿದ್ದಂಗೆ ಲೆಕ್ಕ. ಸವದಿ ದುಡ್ಡು ಕೊಟ್ಟರೆ ತೆಗೆದುಕೊಳ್ಳೊ ದುಡ್ಡು ಅವಂದಲ್ಲ. ಅದು ನಮ್ಮದು. ನಾವು ಸರ್ಕಾರ ತಂದಿದ್ದರಿಂದ ಆತ ಮಂತ್ರಿಯಾದ. ಅವನಲ್ಲಿರೋದು ನಮ್ಮ ದುಡ್ಡು. ಆ ದುಡ್ಡು ತಗೊಂಡು ಬಿಜೆಪಿಗೆ ಮತ ನೀಡಿ ಎಂದು ಹೇಳಿದ್ದಾರೆ. […]