ಈಗಿನಿಂದಲೇ ಲೋಕಸಭೆಯ ತಯಾರಿ ನಡೆಸಿದ ಕಾಂಗ್ರೆಸ್!
ಲೋಕಸಭಾ ಚುನಾವಣೆಗೆ ರಾಜ್ಯದಲ್ಲಿನ ಮೂರು ಪ್ರಮುಖ ಪಕ್ಷಗಳು ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿವೆ. ಕಾಂಗ್ರೆಸ್ ಪಕ್ಷವಂತೂ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ ರೀತಿಯಲ್ಲಿಯೇ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದಕ್ಕಾಗಿ ತಂತ್ರ ರೂಪಿಸುತ್ತಿದೆ. ರಾಜ್ಯದ 28 ಲೋಕಸಭೆ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುವ ಕೆಲಸಕ್ಕೆ ಚಾಲನೆ ಸಿಕ್ಕಿದೆ. ವಿಧಾನಸಭೆ ಚುನಾವಣೆಯ ನಂತರ ಮತ ಬದಲಾವಣೆ, ಜನರ ಮನಸ್ಥಿತಿ, ಜನ ಪ್ರತಿನಿಧಿಗಳ ಬಲ, ಟಿಕೆಟ್ ಆಕಾಂಕ್ಷಿಗಳು, ಪ್ರತಿಪಕ್ಷಗಳ ಬಲಾಬಲ, ಚುನಾವಣೆಯಲ್ಲಿ ಸ್ಥಳೀಯವಾಗಿ ಪರಿಣಾಮ ಬೀರುವ ಸಂಗತಿ, ಹಾಲಿ ಸಂಸದರ ಕುರಿತು ಇರುವ ಅಭಿಪ್ರಾಯ ಸೇರಿದಂತೆ […]